ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೪೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೯ ಯವನ ಯಾಮಿನೀ ವಿನೋದ ಎಂಬ, ಲಾರನಾದುದರಿಂದ ಕ್ರಮವಾಗಿ ಹತ್ತು ಮಂದಿಯನ್ನು ಕಡಿದುಹಾಕಿರುವನು. ಇಗೋ' ಈ ಹತ್ತು ತಲೆಗಳನ್ನು ನೋಡಿ, ನಿಮಗೇನೆ ಗೊತ್ತಾಗುವು ದೆಂದು ಹೇಳಲು, ಕಲೀಫರು ಆಗಲೇ , ನನ್ನನ್ನು ಚೆನ್ನಾಗಿ ಪರೀಕ್ಷಿಸಿ, ಕಳ್ಳನಲ್ಲವೆಂದು ತಿಳಿದು, ಅಯ್ಯಾ ! ನೀನೀಕಳ್ಳರ ಗುಂಪಿನಲ್ಲಿ ಹೇಗಸೇರಿದೆ ಎಂದು ಕೇಳಿದರು. ನಾನು ಸ್ವಾಮಿಾ ! ನಿಜವಾಗಿ ಹೇಳುತ್ತೇನೆ ಕೇಳಿ, ಈದಿನ ಬೆಳಿಗ್ಗೆ ನಾನು ಟೈಗ್ರಿಸ್‌ನದಿಯ ದಡದಲ್ಲಿ ನಿಂತಿರುವ ಸಮಯದಲ್ಲಿ ಈ ಕಳ್ಳರು ಉತ್ತಮವಸ್ಮವನ್ನು ಧರಿಸಿಕೊಂಡು ಬರುತ್ತಿರುವುದನ್ನು ನೋಡಿ, ಬೈರಾಮನ ಹಬ್ಬದ ವೇಷವನ್ನು ಹಾಕಿಕೊಂಡು ವಿನೋದವಾಗಿ ಹೋಗುತ್ತಿರುವರೆಂದು ತಿಳಿದು, ನಾನು ಅವರಸಂಗಡ ಸೇರಿಕೊಂಡನೆಂದು ಹೇಳಿದನು. ಆಗ ಕಲೀಫರು ನಕ್ಕು ನನ್ನನ್ನು ಹಾಸ್ಯಗಾರನೆಂದು ಹೇಳಿದ ರಲ್ಲದೆ, ಈ ಹುಡುಗನು ಹೇಳಿದಂತ ಅಧಿಕದ ಸಂಗಿಯಂದು ಹೇಳಲಿಲ್ಲ. ಬಳಿಕ ನಾನು ಕಲಿವರನ್ನು ಕುರಿತು, ಕಾಖಾ ! ನಾನು ಕೊಲ್ಲ ಲ್ಪಡುವಂತಹ ದುರವಸ್ಥೆಗೆ ಸಿಲುಕಿದ್ದರೂ, ಮಾತನಾಡದೆ ಸುಮ್ಮಗಿದ್ದು ದನ್ನು ನೋಡಿ, ನೀವು ಆಸ್ಟ್ರ್ಯ ಪಡಬೇಕಲ್ಲವೆ ? ಈ ಊರಿನವರೆಲ್ಡ್ರೂ ನನ್ನನ್ನು ನೋಡಿದರೆ, ನಿಯಂದು, ಮಿತಭಾಷಿಯಂದು ಹೊಗಳುತ್ತ ಇರುವರು, ಆದುದರಿಂದಲೇ ನಾನು ನನ್ನ ಅಣ್ಣತಮ್ಮಂದಿರಲ್ಲಿ ಹಿರಿಯವ ನಾನು, ನನ್ನ ಪಾಂಡಿತ್ಯದಿಂದ ನನಗುಂಟಾದ ಫಲವನ್ನು ಸಂಕ್ಷೇಪ ವಾಗ ಹೇಳುವನು, ಈ ಗುಣದಿಂದಲೇ ನಾನು ಸಕಲ ಸೌಭಾಗ್ಯಗಳನ್ನು ಹೊಂದಿದನೆಂದು ಹೇಳಲು, ಸುಲ್ತಾನರು ನಗುತ್ತ ಅಯಾ! ನಿನ್ನನಿತಿ ಯನ್ನು ನೋಡಿ, ನನಗೆ ಸಂತೋಷವಾಯಿತು. ಆದರೆ ನಮ್ಮಲ್ಲಿ ನೀನು ಹೇಳದ ನಿನ್ನ ಸಹೋದರರೂ ನಿನ್ನಂಥವರೆ ಹೌದ! ಎನಲು ನಾನು ಅವರು ಒಬರನ್ನೊಬ್ಬರು ಮೀರಿಸಿದವರು. ಶರೀರಧರ್ಮದಲ್ಲಿ ಮಾತ್ರ ) ನಾನು ಹಿರಿಯವನು. ಅವರಿಗೂ ನನಗೂ ತುಂಬ ಭೇದವಿರುವುದು, ಮೊದ ಅನಯವನು ಗನ, ಎರಡನೆಯವನು ಕಿವುಡ, ಮೂರನೆಯವನಾದರೂ, ಕುರುಡ, ನಾಲ್ಕನೆಯವನು ಒಕ್ಕಣ, ಐದನೆಯವನು ಕಿವಿಮಳ, ಆರನೆ ಅವನು ಸಿರಿವಾಯುವನು, ಇವರ ಕಥೆಯನ್ನು ನೀವು ಕೇಳಿದರೆ, ಅವರ ಯೋಗ್ಯತಯು ನಿನಗೆ ಚೆನ್ನಾಗಿ ತಿಳಿಯುವುದೆಂದು ಹೇಳಲು, ಕಲೀಫರು ಆಕಥಯನ್ನು ಕೇಳಲುದುಕರಾಗಲು, ನಾನು ಹೇಳಲಾರಂಭಿಸಿದನು.