ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

YL ಯುವನ ಯಾಮಿನೀ ವಿನೋದ ಎಂಬ, ೧೬ ನೆಯ ರಾತಿ ಕಥೆ. ವಹರಜಾದಿಯು ಇಂತಂದಳು :- ಬಾಕುಬೋಕನು ಐದಾರು ದಿನಗಳು ಪ್ರಯಾಸಪಟ್ಟು, ಇಪ್ಪತ್ತಾರು ಅಂಗಿಗಳನ್ನು ಹರಿದು, ತಗೆದುಕೊಂಡುಬಂದು ಆತನಿಗೆ ಕೊಡಲು, ಆ ರವೆಯ ಅಂಗಡಿ ಯಜಮಾ ನನು ಮತ್ತೊಂದು ಧಾನು ಬಟ್ಟೆಯನ್ನು ಕೊಟ್ಟು, ಇದರಲ್ಲಾಗುವನ್ನು ಮರಾಯಿಗಳನ್ನು ಹೊಲೆದುಕೊಂಡು ಬಾರೆಂದು ಹೇಳಲು, ಆತನು ತನ್ನ ಅಂಗಡಿಗೆ ಬಂದು ಐದಾರುದಿನಗಳು ಪ್ರಯಾಸ ಹೊಂದಿ, ಇಪ್ಪತ್ತಾರು ವರಾರುಗಳನ್ನು ಹೊಲಿದು ಪುನಹ ತಗೆದುಕೊಂಡು ಆತನಬಳಗಹಗಲು ಯಜಮಾನನು, ನಿನಗೆಮ್ಮು ರೂಪಾಯಿಗಳನ್ನು ಕೊಡಬೇಕಂದನು. ನಾನು ಇಪ್ಪತ್ತು ರೂಪಾಯಿಗಳನ್ನು ತೆಗೆದುಕೊಳ್ಳುವೆನೆಂದು, ಆತನಿಗೆ ಹೇಳದನು. ಆಗ ಯಜಮಾನನು ತನ್ನ ದಾದಿಯನ್ನು ಕರೆದು ಹಣದ ಚೀಲವನ್ನು ತರುವಂತೆ ಹೇಳಿದನು. ಆಕ ಹಣವನ್ನು ತರುತ್ತ ನೀನು ಹೋಗಿ ವನ್ನು ತೆಗೆದುಕೊಳ್ಳಬೇಡವೆಂದು ಸನ್ನೆ ಮಾಡಿದುದರಿಂದ, ಈ ನಿರ್ಭಾಗ್ಯನು ಹಣವನ್ನು ತೆಗೆದುಕೊಳ್ಳದೆ ಹಿಂದಿರುಗಿಬಂದು, ನಾನಾಕಮ್ಮಗಳನ್ನು ಅನು ಭವಿಸುತ್ತ, ಕೊನೆಗೆ ನನ್ನ ಬಳಿಗೆ ಕೆಲವು ಹಣವನ್ನು ಸಾಲ ತೆಗೆದುಕೊಂಡು ಅದರಿಂದ ಕೆಲವು ದಿನಗಳು ಗಂಜಿಯನ್ನಾದರ, ಹೊಟ್ಟೆತುಂಬ ಕುಡಿವುದ ಕ್ಕಿಲ್ಲದಂಶ, ಜೀವನ ಮಾಡುತ್ತಿದ್ದನು. ಇನ್ನು ಕೆಲವುದಿನಗಳಮೇಲೆ ಬಾಕುಬೇಕು ಆತನನ್ನು ನೋಡು ವುದಕ್ಕೆ ಮನೆಗೆ ಹೋಗಲು, ಹಣಕ್ಕಾಗಿ ಬಂದಿರುವನೆಂದು, ಯಜಮಾನನು ಹಣವನ್ನು ತರಹೇಳಲು, ದಾದಿಯು ಮೊದಲಿನಂತೆ ಸನ್ನೆ ಮಾಡಿದುದರಿಂದ ನಾನು ಹಣಕ್ಕಾಗಿ ಬರಲಿಲ್ಲವಯಾ ! ನಿಮ್ಮನ್ನು ನೋಡುವುದಕ್ಕಾಗಿ ಬಂದನೆಂದು ಹೇಳಲು, ಆತನು ತನ್ನ ಮೈಮೇಲಿರುವ ಹಳಯಂಗಿಯನ್ನು ತಗೆದುಕೊಟ್ಟು, ಸರಿಮಾಡಿಕೊಂಡುಬರುವಂತೆ ಹೇಳಲು, ಬಹುಪ್ರಯಾಸ ವಟ್ಟು ಆ ಕೆಲಸವನ್ನು ಮಾಡಿಕೊಂಡು ಬರಲು, ಆತನು ದುಡ್ಡು ಕೊಡು ವಾಗ, ಮರಳ ದಾದಿಯು ಸನ್ನಮಾಡಿದುದರಿಂದ, ನಾನು ಆಯಾ ! ಇರಲಿ ನಿಧಾನವಾಗಿ ಕೊಡುವಿರಂತೆ ! ಎಂದು ಹೇಳಿ, ಬಹು ಸಂಕಟದಿಂದ ಹಿಂದಿ ರುಗಿ ಅಂಗಡಿಗೆಹೋದನು. ಆ ಪರಮಲುಬ್ಬಳಾದ ದೊರೆಸಾನಿಯು ನನ್ನ