ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೦೬ ಕುರುಡನು ಅಯಾ! ನೀವು ಬಾಗಿಲಲ್ಲಿ ಈ ಮಾತನ್ನು ಹೇಳಿದ್ದರೆ, ನಾನು ಮಟ್ಟುಗಳನ್ನು ಹತ್ತಿ ಇಲ್ಲಿನವರೆಗೂ ನಡೆದುಬರುವ ಶಮವು ತಪ್ಪಿ ಹೋಗುತ್ತಿದ್ದಿತಲ್ಲಾ ! ಎನಲು, ಎಲಾ ಕುದುಡಾ ! ನಾನು ಯಾರೆಂದು ಕೇಳಿದಾಗಲೆ, ನೀನು ಪ್ರತ್ಯುತ್ತರವನ್ನು ಹೇಳಿದ್ದರೆ, ನಾನು ಎದ್ದು ಬಂದು ಬಾಗಿಲನ್ನು ತೆಗೆಯುವ ತೊಂದರೆಯ ಇರುತ್ತಿರಲಿಲ್ಲವಲ್ಲಾ ! ಎಂದು ಯಜ ಮಾನನು ಹೇಳಿದನು. ಆಗ ಕುರುಡನು ಆದರೆ ಈಗ ಏನು ಹೇಳುವ ಎನಲು, ನನ್ನ ಬಳಿಯಿ ನೂ ಇಲ್ಲವೆಂದು, ಮನೆಯವನು ನುಡಿದಬಳಿಕ ಅಂಧಕನು ಆಯಾ ! ದಯಮಾಡಿ ನನ್ನನ್ನು ಈ ಮಟ್ಟುಗಳಿಂದಲಾದರೂ, ಕಳಗೆ ಇಳಿಸಿಬಿಡು, ಎಂದು ಬೇಡಿಕೊಂಡರೂ, ಆತನು ನಿನಗಿಷ್ಟ್ಯವಾಗಿದ್ದರೆ ಇಳಿದುಹೋಗು, ಕಪ್ನವಾದರೆ ಬಿಡು ಎಂದು ಹೇಳಲು ಕುರುಡನು ಮೆತ್ತಗೆ ಎರಡುಮೂರು ಮಟ್ಟುಗಳನ್ನು ಇಳಿದು, ನಂತರ ಕಾಲುಜಾರಿ ಬಿದ್ದು ಹೊರಳುತ್ತಿರುವುದನ್ನು ನೋಡಿ, ಮನೆಯವನು ನಗುತ್ತಿರಲು, ಆತನನ್ನು ನಾನಾವಿಧವಾಗಿ ಹೀಯಾಳಿಸುತ್ತ, ಅಲ್ಲಿಂದ ಎದ್ದು ಹೊರಟು ಹೋದನು. ಆಗ ದಾರಿಯಲ್ಲಿ ಬರುತ್ತಿದ್ದ ತನ್ನ ಸ್ನೇಹಿತರಾದ ಇಬ್ಬರು ಕುರುಡರ ಧ್ವನಿಯನ್ನು ಕೇಳಿ, ನನ್ನ ತಮ್ಮನು ಕೂಗಿಕೊಂಡನು ಅವರು ಏನೆಂದುಕೇಳಲು, ಅಯಾ ! ನಾನು ಈದಿನ ಬೆಳಿಗ್ಗೆ ಊಟಮಾಡಲೇ ಇಲ್ಲ. ನೀವು ನಮ್ಮ ಮನೆಗೆ ಬಂದರೆ ನನ್ನ ಬಳಿ ಇರುವ ಹಣದಿಂದ ಪದಾರ್ಥ ಗಳನ್ನು ಕಂಡುತಂದು, ಊಟಮಾಡೋಣವೆಂದು ಹೇಳಲು, ಅವರು ಸಮ್ಮತಿಸಿ, ಆತನಮನೆಗೆ ಹೋದರು. ನನ್ನ ಅಣ್ಣನಾದರೂ ಆ ಕುರುಡರನ್ನು ಕರೆದುಕೊಂಡು ತನ್ನ ಮನೆಗೆಹೋಗಿ, ಆತನು ಕಳ, ಎಸಗಾರ, ಪಾಪಿ ಎಂದು, ಹಿಂದಿನ ಮನೆಯ ಯಜಮಾನನನ್ನು ತಿರಸ್ಕರಿಸುತ್ತಿರುವುದನ್ನು ಕ೦೪, ಹಿಂದೆಯ ಬಂದ ಆ ಯಜಮಾನನು ಮನೆಯೊಳಕ್ಕೆ ಬಂದನು. ಬಳಿಕ ನನ್ನನು ನಾವು ಯಾವ ತೊಂದರೆಗೂ ಸಿಕ್ಕದಂತೆ ಭದ್ರವಾಗಿ ಬಾಗಿಲನ್ನು ಹಾಕಿ ಕುಳ ತುಕೊಳ್ಳಬೇಕೆಂದು ಹೇಳಿದುದನ್ನು ಕೇಳಿ, ಆ ಕಳ್ಳನು ಮೇಲೆ ನೇತಾಡು ತಿರುವ ಹಗ್ಗವನ್ನು ಹಿಡಿದು ಮೆತ್ತಗೆ ತಲೆಯಮೇಲೆ ಕುಳಿತುಕೊಂಡನು, ನಂತರ ಕುರುಡರು, ಗೋಡೆಗಳನ್ನೆಲ್ಲ ಸವರಿ ಮನೆಯನ್ನು ನಾಲ್ಕು ಕಡೆಯಲ್ಲಿ