ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

HOV ಅರೇಬಿರ್ಯ ನೈಟ್ಸ್ ಕಥೆಗಳು. ಸುತ್ತಿನೋಡಿ, ತನ್ನ ಸ್ಥಾನದಲ್ಲಿ ಹೋಗಿ ಮಲಗುವುದಕ್ಕಾಗಿ, ಬಾಗಿಲನ್ನು ಭದ ವಾಗಿ ಹಾಕಿಕೊಂಡು ಹೋಗಿ, ತನ್ನ ಜಾಗದಲ್ಲಿ ಕುಳಿತುಕೊಳ್ಳಲು, ಕಳ್ಳನು ಶಬ್ದ ಮಾಡದೆ ಕೆಳಗಿಳಿದುಬಂದು, ತನ್ನ ತಮ್ಮನಬಳಿಯಲ್ಲಿ ಕುಳಿತು ಕೊಂಡನು. ಆಗ ನನ್ನ ಅಣ್ಣನು ತಮ್ಮ ಸ್ನೇಹಿತರುಮಾತ್ರ ಇರುವ ರೆಂದು ತಿಳಿದು, ಆ ಇಬ್ಬರು ಕುರುಡಸ್ನೇಹಿತರನ್ನು ಕುರಿತು, ಅಯಾ ! ನೀವುಗಳು ಬಹುದಿನಗಳಿಂದ ಸಂಪಾದಿಸಿದ ಹಣವನ್ನು ನಂಬಿಕೆಯಿಂದ ನನ್ನ ಕಯ್ಯಿ ಕೊಟ್ಟಿರುವಂತ, ನಾನು ನಂಬಿಕೆಯನ್ನು ಉಳಸಿ ಕೊಂಡಿರುವನೇ ಹೊರತು, ಮತ್ತೆ ಬೇರೆ ಇಲ್ಲವೆಂಬುದು ನಿಮಗೆ ಸ್ಪಷ್ಟ ವಾಗಿ ತಿಳಿದಿರುವುದಲ್ಕಾ ! ನಾವು ಹಿಂದಿನಸಾರಿ, ಲೆಖ ಮಾಡಿದಾಗ ಹತ್ತು ಸಾವಿರ ರೂಪಾಯಿಗಳನ್ನು ಹತ ಚೀಲಗಳಲ್ಲಿ ಕಟ್ಟಿಹಾಕಿದುದು, ಸಾಯಶಃ ನಿಮಗೆ ಜ್ಞಾಪಕವಿರಬಹುದು. ಇಗೋ ಈ ಚೀಲಗಳನ್ನು ವಿನಡಿ, ಹಣವು ಸರಿಯಾಗಿರುವುದೊ ಇಲ್ಲವೊ ನೋಡಿಕೊಳ್ಳಿ ಎನಲು ಅವರಿಬ್ಬರೂ, ಅಯ್ಯಾ ನಿನ್ನಲಿ ನಮ್ಮಗಳಿಗೆ ನಂಬಿಕೆ ಚೆನ್ನಾಗಿ ಇರುಫುದರಿಂದ, ನಾವು ನೋಡಬೇಕಾದ ಅಗತ್ಯವೇನೂ ಇಲ್ಲವೆಂದು ಹೇಳಿ, ಆದಿನದ ಖರ್ಚಿಗಾಗಿ ಹತ್ತು ಹತ್ತು ನಾಣ್ಯಗಳನ್ನು ಎತ್ತಿಕೊಂಡರು. ಬಳಿಕ ಆ ಹಣದ ಚೀಲಗಳನ್ನು ಮೊದಲಿದ್ದ ಸ್ಥಳದಟ್ಟು, ತನ್ನ ಬಳಿಯಲ್ಲಿ ಆಹಾರವಿರುವುದು, ರಾತ್ರಿ ಗ ನಾವೇನ, ತರಬೇಕಾದುದು ಇಲ್ಲವೆಂದು ಹೇಳುತ, ತಾನು ತಂದಿದ್ದ ಆಹಾರ ಪದಾರ್ಥಗಳನ್ನು ಅಣಿ ಮಾಡಿ, ಒಬ್ಬ ಕುರುಡನು ಕಾಲಮಣೆಯಮೇಲಿಡಲು ಮರುಜನಗಳು ಸಂತೋಷದಿಂದ ಅದನ್ನು ತಿನ್ನಲಾರಂಭಿಸಿದರು. ಆದರೆ ಯಾರು ಮಾತ ನಾಡದೆ ಸುಮ್ಮನೆ ಭಕ್ಷಿಸುತ್ತಿದ್ದುದರಿಂದ, ನನ್ನ ಅಣ್ಣನಬಳಿಯಲ್ಲಿ ಕುಳಿತು ಕೊಂಡು, ಉತ್ತಮ ಪದಾರ್ಥಗಳನ್ನು ಆರಿಸಿ ತಿನ್ನುತ್ತಿರುವ, ಕಳ್ಳನು ಅಗಿಯುವ ಶಬ್ದವನ್ನು ಕೇಳಿ, ನನ್ನಣ್ಯನಾದ ಬಾಕಬಾಕನು, ಅಯ್ಯೋ! ಮೋಸಹೋದೆವು. ಅಯ್ಯೋ ! ಮೋಸಹೋದೆವು. ಯಾರೋ, ಕಳ್ಳನು ಬಂದಿರುವನೆಂದು ಹೇಳಿ, ತನ್ನ ಬಳಿಯಲ್ಲಿದ್ದ ಆ ಕಳ್ಳನನ್ನು ತಡವರಿಸಿ ಹಿಡಿ ದುಕೊಂಡು, ತನ್ನ ಕೈಲಾದಮಟ್ಟಿಗೂ ಗುದ್ದಿದನು. ಉಳಿದ ಕುರುಡರು ಹಾಗಯ ಮಾಡುತ್ತ, ಕಳ್ಳ ! ಕಳ್ಳ ! ದೊಡ್ಡ ಕಳ್ಳ ! ಮೋಸಹೋದೆವಲ್ಲಾ !