ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೬೫) ಅರೇಬಿರ್ಯ ನೈಟ್ಸ್ ಕಥೆಗಳು, Hot ಕಾರಣವೇನೆಂದು ಕೇಳಲು, ನಚದಸಂಗತಿಯನ್ನು ಹೇಳಿ, ಕರುಸುರಿ ಸುತ್ತಿರುವಾಗ ಆ ದೊಹಿಯಾದ ಮುದುಕನು ವೇಷವನ್ನು ಹಾಕಿಕೊಂಡು, ಬರುತ್ತಿರುವುದನ್ನು ಕಂಡು, ಓಡಿಹೋಗಿ ಆತನನ್ನು ಹಿಡಿದುಕೊಂಡು, ಘನವಂತರೇ ! ಬನ್ನಿ ! ಈ ದೊಹಿಯು ಮಾಡಿರುವ ಮೋಸವನ್ನು ಕೇಳಿರಿ! ಎಂದು ಗಟ್ಟಿಯಾಗಿ ಕೂಗಿಕೊಂಡನು. ಆಗ ಆ ದೊಹಿಯು ನನ್ನ ಅಣ್ಣನನ್ನು ಕುರಿತು, ಅಯಾ ! ಇನ್ನು ಜನರಮುಂದೆ, ನನ್ನನ್ನು ಅವಮಾನಪಡಿಸಬೇಡ, ಸುಮ್ಮನೆ ಬಿಡು. ಇಲ್ಲವಾದರೆ, ನಿನ್ನನ್ನು ಬಹಳ ಪಾದ ತೊಂದರೆಗೆ ಗುರಿಮಾಡೇನು, ಆದರೆ ನನಗೆ ಅದು ಇವಿಲ್ಲವೆನಲು ಅಲ್ಕವುಜನು, ನಾನು ನನ್ನ ಕಾರ್ಯದಲ್ಲಿ, ನ್ಯಾಯವಾಗಿಯೂ, ಧರ್ಮ ನಿರತನಾಗಿಯ, ಇರುವುದರಿಂದ, ಯಾರಿಗೂ ಹೆರರತಕ್ಕೆ ಅಗತ್ಯವು ಇಲ್ಲವೆಂದು ಹೇಳಿದನು. ಹಾಗಾದರೆ ನನ್ನನ್ನು ರೇಗಿಸುವೆಯೋ ? ಓ ದೊಡ್ಡ ಮನುಷ್ಯರು ಗಳಿರಾ ! ನೀಚನು ಮನುವ ಮಾಂಸವನ್ನು ತಂದು, ಕಳಿಯ ಮಾಂಸವೆಂದು ಹೇಳಿ ನೋಸಪಡುತ್ತಿರುವನು. ಈ ಮಾತು ಎಂದಿಗೂ ಸುಳ್ಳಲ್ಲ. ನೀವು ಬೇಕಾದರೆ ಈತನ ಅಂಗಡಿಗೆ ಹೋಗಿ, ಪರೀಕ್ಷಿಸಿದರೆ ಅಲ್ಲಿ ಕಡಿದು ನೇತುಹಾಕಿರುವ ಮನುಷ್ಕನನ್ನು ನೋಡಬಹುದು. ನನ್ನ ಮಾತನ್ನು ನಂಬಿ ಎಂದು ಹೇಳಿದನು. ನನ್ನ ಅಣ್ಣನು ಸ್ವಲ್ಪ ಹೊತ್ತಿನ ಮೊದಲು ಒಂದು ಕೋಳಿಯನ್ನು ಕತ್ತರಿಸಿ, ನೇತುಹಾಕಿ ಬಂದಿದ್ದನು, ಆಗೆ ಜನರು ನನ್ನ ಅಣ್ಣನು ಹೇಳಿದಮಾತನ್ನು ನಂಬಲಾರದ, ಅಂಗಡಿಗೆ ಬಂದು ಪರೀಕ್ಷಿಸಿ ನೋಡಬೇಕೆಂದು, ಆ ಮುದುಕನನ್ನು ಬಿಡಿಸಿ, ಆತನನ್ನು ಸಂಗಡ ಕರೆಕಂಡುಬಂದು ಅಂಗಡಿಯಲ್ಲಿ ಕೊಟ್ಟು ಬಿದ್ದಿರುವ ಮನುಷ್ಯ ನನ್ನು ನೋಡಿ, ಬಹಳವಾಗಿ ಆತನನ್ನು ನಿಂದಿಸಿ ಹೊಡೆದರು. ಆ ಮುದು ಕನು ನನ್ನ ಅಣ್ಣನ ಕಣ್ಣಿನಮೇಲೆ ಒಂದುದೆಖ್ಯೆಯನ್ನು ಹಾಕಿದನು. ನಂತರ ಜನರೆಲ್ಲರೂ, ಆತನನ್ನು ಬಹಳವಾಗಿ ನಿಂದಿಸುತ್ತಾ ಮತ್ತೆಮತ್ತೆ ಕೂ ರವಾಗಿ ಶಿಕ್ಷಿಸು, ಎಲಾ ! ದುರಾತ್ಮ ! ಕೋಳಿಯ ಮಾಂಸವೆಂದು ಹೇಳಿ, ನರಮಾಂಸವನ್ನು ತಂದು ನಮ್ಮಗಳಿಗೆ ಮಾರಿ, ನಮ್ಮವ್ರತವನ್ನು ಹಾಳುಮಾಡುತ್ತಿರುವೆಯಾ ಎಂದು ಹೇಳಿ, ಆತನನ್ನು ನ್ಯಾಯಾಧಿಪತಿಯ