ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ವಿಂಬ, ಬಳಿಗೆ ಕರೆದುಕೊಂಡುಬಂದರು, ಸುಲ್ತಾನರೇ ಇದೂಂದು ವಿಚಿತ್ರವು ಆ ದಹಿಯಾದ ಮುದುಕನು ಗಾರಡಿಗನಾಗಿದ್ದುದರಿಂದ, ಮಾಯಾ ವಿದ್ಯದ ಸಂಕಲ್ಪದಿಂದ ಉಂಟಾಯಿತು. ಆತನು ಹೊಸದಾಗಿ ನಿರಿಸಿ, ಮಾಯಾದ ವ್ಯವನ್ನು ಕೊಟ್ಟುದರಿಂದ, ಆ ಹಣವು ಎಲೆಗಳಾದವು. ನಂತರ ಅಸೂಯಾಭರಿತನಾದ, ಆ ಮುದುಕನು ನ್ಯಾಯಾಧಿಪತಿಯಬಳಿಗೆ ಬಂದು ನಿಂತು, ಆಯಾ ! ಈತನು ನರಮಾಂಸವನ್ನು ಮಾರುತ್ಯ, ಜನ ರನ್ನು ಹಿಂಸಿಸತ್ನ ಕ್ಯಾರಾಥನಾಗಿರುವನು. ಇವನ ಅಂಗಡಿಯಲ್ಲಿ ನಾವು ಪರೀಕ್ಷಿಸಿನೋಡಿದಾಗ, ನಾವುಗಳೆಲ್ಲವೂ ನೋಡಿದಂತೆ, ತಾವು ನೋಡಬಹು ದಂದು ನುಡಿಯಲು, ನನ್ನ ಅಣ್ಣನು ತನ್ನ ದುರವಸ್ಥೆಯನ್ನು ಸಹಜ ವಾಗಿ, ಹೇಳಿಕೊಂಡರೂ, ವ್ಯಾಯಾಧಿಪತಿಯು ಹಣವು ಎಲೆಯಾದು ದಂಬುವದನ್ನು ನಂಬದೆ, ಆತನಿಗೆ ನೂರುದಬ್ಬೆಗಳನ್ನು ಹೊಡೆಸಿ, ಮೂರು ದಿನಗಳವರಿಗೆ ಪಟ್ಟಣಕ್ಕೆ ಬರಕೂಡದೆಂದು, ಕಟ್ಟುವಾಡಿ, ಹೊರರ ಡಿಸಿದನು, ಇಂತಂದು ಹೇಳಿ, ನಹರವಾದಿಯು ಕಥೆಯನ್ನು ನಿಲ್ಲಿಸಿ, ಮರು ದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ೧೭೪ ನೆಯ ರಾತ್ರಿ ಕಥೆ, ದಹರದಿಯು ಸುಲ್ತಾನರನ್ನು ಕುರಿತು, ಇಂತೆಂದಳು. ನನ್ನ ಅಣ್ಣನಿಗೆ ಈ ದುರವಸೆಯು ಬಂದಬಳಿಕ, ಬಾಗದಾದಿನಲ್ಲಿ ಯಾರಿಗೂ ತಿಳಿಯದಂತ, ಬಹುದೂರವಾಗಿ ಒಂದು ಮನೆಯನ್ನು ಮಾಡಿಕೊಂಡು, ದೇಹವು ಸ್ಪಷ್ಟವಾಗುವವರಗೂ ಇದ್ದನು. ಬಹುದಿನಗಳು ಆತನು ಆ ಬಾಡಿಗೆ ಮನೆಯ ವಾಸಮಾಡಿಕೊಂಡಿದ್ದು, ಕೆಲವು ದಿನಗಳ ನಂತರ ಹೊರಗೆ ಸಂಚಾರ ಮಾಡಬೇಕೆಂದು, ತಿರುಗುತ್ತಿರುವಾಗ, ತನ್ನ ಹಿಂದೆ ಇಬ್ಬರು ಕುದುರೆಸವಾರರು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಂಡು, ಭಯ ಪಟ್ಟು ಓಡಿಬಂದು, ಒಂದಾನೊಂದು ದೊಡ್ಡ ಮನೆಯ ಬಾಗಿಲನ್ನು ತೆರೆದು ಕೊಂಡು ಒಳಹೊಕ್ಕು ಅಂಗಳದಲ್ಲಿರುವ ಕೈಸಾಲೆಗೆ ಹೋಗಿ ನಿಂತುಕೊಳ್ಳಲು ಅಲ್ಲಗೆ ಭಂಟರುಬಂದು, ಆತನನ್ನು ಹಿಡಿದುಕೊಂಡು, ದೈವಾಧೀನದಿಂದ, ನೀನೆ ನನ್ನ ಕೈಗೆ ಸಿಕ್ಕಿದೆಯಾ ! ನಾವು ದುರು ರಾತ್ರಿಗಳಿಂದಲೂ,