ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ನಂತರ ನನ್ನ ಆತ್ಮ ನನ್ನ ಬಳಿಗೆ ಬಂದು, ಬಹು ನರಾದೆಯಿಂದ ಮಾತ್ರ * ನಾಡು, ಅಯಾ ! ನೀವು ನನ್ನ ಮಗಳನ್ನು ಅಲಕ್ಷ ಮಾಡಿ, ಅವಳಿಂದ ಸೇವೆಯನ್ನು ತೆಗೆದುಕೊಳ್ಳುವುದಕ್ಕೆ ಒಪ್ಪಲಿಲ್ಲವೆಂದು, ನನ್ನ ಮಗಳು ಬಹಳವಾಗಿ ವ್ಯಸನವಟ್ಟುಕೊಂಡಳು. ಸುಂದರೀಮಣಿಯಾಗಿಯೂ, ಸುಗುಣಗಳಿಗೆ ಗಣಿಯಾಗಿಯೂ, ನಯವಿನಯ ಸಂಪನ್ನಳಾಗಿ ಇರುವ ನನ್ನ ಮಗಳು ತಮ್ಮ ಸೇವೆ ಮಾಡಿ, ತಮ್ಮನ್ನು ಸಂತೋಷಪಡಿ ಸುವುದೇ ಮುಖ್ಯವಾದ ಕರ್ತವ್ಯವೆಂದು ತಿಳಿದಿರುವಳು. ಆ “ಗಾಲಕಿಯು ಹುಟ್ಟಿದಾಗಿನಿಂದಲೂ, ಅಂತಃಪುರದಿ ಇದ್ದುಕೊಂಡು, ಮತ್ತಾವ ಪುರುಷನನ್ನು ನೋಡದೆ ತಾವೇ ಗಾಣನಾಥರೆಂದು ಮದುವೆಮಾಡಿಕೊಂಡು ಮೋಹನಾಂಗನಾಗಿರುವ ನಿನ್ನ ಬಳಿಯಲ್ಲಿ ಬಂದು ನಿಂತುಕೊಂಡರೆ, ನೀನು ಅಲಕ್ಷ್ಯಮಾಡಬಹುದೆ ? ಇನ್ನು ಮೇಲೆ ದಯಮಾಡಿ, ಆಕೆಯನ್ನು ಕರು ಣಾದಹಿಯಿಂದ ನೋಡುತ್ತಿರಬೇಕೆಂದು, ಭಾ ರ್ಥಿಸುವೆನು. ಧೀನನಿಯತ್ತರದ ಸುಂದರೀಮಣಿಯರನ್ನು, ಹೀಗೆ ನೀವೆಂ ದಿಗೂ ತಂದರಪಡಿಸಬಾರದು, ಎಂದುಹೇಳಿ, ಮನೆಗಾಗಿ ಉತ್ತಮ ವಾದ ಸುವರ್ಣದ ಗಿಂಡಿಯಲ್ಲಿ ಸಾರಾಯಿಯನ್ನು ಹಾಕಿ, ಇದನ್ನು ನಿಮ್ಮ ಯಜಮಾನರಿಗೆ ಕೊಟ್ಟುಬಾರೆಂದು ಕಳುಹಿಸಿದಳು. ಆ ಕನ್ಯಾಮಣಿಯು ಮನೋಹರವಾಗಿ ಅಲಂಕರಿಕೊಂಡು, ಆ ಕೋಮಲವಾದ ತನ್ನ ಕೈಗಳಲ್ಲಿ ಆ ಮಾತೆಯನ್ನು ಹಿಡಿದುಕೊಂಡುಬಂದು, ಅದನ್ನು ತಗೆದುಕೊಳ್ಳಬೇಕೆಂದು ಬೇಡಿಕೊಳ್ಳುವಳು. ಆಗ ನಾನು ಮನದಿಂದ ಸುಮ್ಮನಿರುವಂತೆ ನಟಿಸು ವೆನು. ಈತರದಿಂದ ಆಕೆ ಬಹು ಬೇಡಿಕೊಂಡಬಳಿಕ, ನನಗೆ ಕೋಪ ಉಂಟಾಗಿ ನಾನು ಅವಳನ್ನು ಕನ್ನೆಯಮೇಲೆ ಹೊಡೆದು, ಕೊಪದಿಂದ ಕಾಲಿನಿಂದ ಹೀಗೆ ಒದೆಯುವೆನೆದು, ನಿಜವಾಗಿಯೂ ತಾನು ತನ್ನ ಹೆಂಡತಿ ಯಬಳಿಯಲ್ಲಿದ್ದು ಮಾತನಾಡು ಕೋಪವನ್ನು ತೀರಿಸಿಕೊಳ್ಳುವಂತೆ, ಕಾಲಿನಿಂದ ಒದೆಯಲು ಆ ಪಿಂಗಾಣಿಯಸಾಮಾನುಗಳ ಗೂಡೆಗೆ ಕಾಲುತಗಲಿ, ಅದರದೆಟ್ಟಿಗೆ ಸಾಮಾನುಗಳೆಲ್ಲವು, ಚೂರುಚೂರಾಗಿಹೋದವು. ಇದೆಲ್ಲ ವನ್ನೂ ನೋಡುತ್ತಿದ್ದ ನೆರೆಯವನಾದ ದರ್ಜೆಯವನ್ನು, ಫಕಫಕನೆನಗುತ್ತಾ ಎಲಾ ! ಕಠಿನಾತ್ರನಾದ ನೀಚನೇ ! ಅನೊಂದು ಸೌಂದರವತಿಯಾದ,