ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೩ ನನ್ನ ಅನನ್ನು ಬಹಳವಾಗಿ ಉರಚರಿಸಿ ತನಗೆ ಮೋಹ ಉಂಟಾಗಿ ಇರುವುದೆಂದು, ತೊರ್ಗದಿಸಿಕೊಂಡಳು. ಆದರೆ ಸಾಕುಬಾಕನು ಮುಂದೆ ಏನಾಗುವುದೊ, ಎಂಬ ಭಯದಿಂದ ಅವಳನ್ನನುಸಾರವಾಗಿ ನಡೆದುಕೊಳ್ಳ ಲಿಲ್ಲ. ಆದರೂ, ಆಕೆ ಬಹು ಹಚಾದ ಮೋಹದಿಂದ ಆತನೊಡನೆ ಸರಸ ಸಾರಗಳನಾಡುತ್ತಾ ಇದ್ದಳು. ಹೀಗೆ ಬಹದಿನಗಳು ಕಳೆದಬಳಿಕ ಆಕ ಒಂದಾನೊಂದುದಿನ ತನ್ನ ಗಂಡನು ಮನೆಯಲ್ಲಿ ಇರುವುದನ್ನು ಕಾಣದ ಸಾಕುಬಾಕನಸಂಗದ ಸರಸವಾಡಲಾರಂಭಿಸಿದಳು. ಸಾಕುಬಾಕನ್ನು, ಕೆಲವು ಮಾತುಳನ್ನಾಡಿದನು. ಅದನ್ನು ನೋಡಿ ದಾರಿಹೋಕನು ಇವರಿಬ್ಬರೂ ಬಹುದಿನಗಳಿಂದ ಏಕೀಭೂತವಾಗಿದ್ದರೆಂದು ನೆನಸಿ, ಬಹು ಕೋಪದಿಂದ ಆತನನ್ನು ಹೊಡೆದು ಒಂಟೆಯಮೇಲೆ ಕುಳ್ಳಿರಿಸಿಕೊಂಡು ಅರಣ್ಯಮಾರ್ಗ ದಲ್ಲಿ ಹೊರಟು ಒಂದಾನೊಂದು ಪರ್ವತದ ಶಿಖರದಮೇಲೆ ಬಿಟ್ಟು ಹೊರಟು ಹೋದನು. ಆ ಪರ್ವತವು ಭಾಗದಾದಿಗೆ ಸವಿಾಪವಾಗಿದ್ದುದರಿಂದ ಮಾರ್ಗ ಸ್ಯರು ನನಗೆ ಈ ವರ್ತಮಾನವನ್ನು ತಿಳಿಸಲು ನಾನು ಆತನನ್ನು ನೋಡಿ ಮೂಡಬೇಕಾದವುಪಚಾರಗಳನ್ನು ಮಾಡಿ ನಗರಕ್ಕೆ ಕರೆದುಕೊಂಡುಬಂದನು, ಈತರದಿಂದ ನಾನು ಹೇಳಿದ ಕಥೆಯನ್ನು ಕಲೀಫರು ಕೇಳಿ, ಅಯಾ ! ನೀನು ಹೇಳಿದ ಕಥೆಗಳಿಂದ ನನಗೆ ಬಹಳ ಸಂತೋನಾಯಿತು, ನೀನು ಮಿತಭಾಷಿಯೇ ಸರಿ ! ನಿನ್ನನ್ನು ಯೋಗ್ಯನಲ್ಲವೆಂದು ಯಾರೂ ಹೇಳುವದಿಲ್ಲ. ಆದರೆ ನೀನು ಪ್ರತ್ಯುತ್ತರವನ್ನು ಹೇಳದೆ ನನ್ನ ಪಟ್ಟಣ ವನ್ನು ಬಿಟ್ಟು ಈಗಲೇ ಹೊರಟುಹೋಗಬೇಕೆಂದು ಆಜ್ಞಾಪಿಸುವುದರಿಂದ ನಾನು ಗೇಶಾಂತರಗತನಾಗಿ ಅಲೆಯುತ್ತಿದ್ದು, ಕ೬ವರು ಸತ್ತುಹೋದ ವರ್ತಮಾನವನ್ನು ಕೇಳಿ, ಸುನಡ ಪ್ರಯಾಸದಿಂದ ಬಾಗದಾದುನಗರಕ್ಕೆ ಬಂದು ನೋಡುವಲ್ಲಿ, ನನ್ನ ಸಹೋದರರುಯಾರ ಜೀವಂತರಾಗಿರರಿಲ್ಲ. 2•ಕ ನಾನು ಈ ಕುಂಟಹುಡುಗನಿಗೆ ಮಹದುಪಕಾರವನ್ನು ಮಾಡಿದನು. ಆತನು ನನಗೆ ಪತಪಕಾರ ಮಾಡಲು ಶಕ್ತಿ ಸಾಲದೆ, ನನ್ನನ್ನು ನಿಂದಿ ಸುತ್ತ ತನ್ನ ದೇಶವನ್ನೂ, ಬಂಧಗಳನ್ನೂ, ತೆರೆದು, ಎಲ್ಲಿಯೋ ಹೊರಟು ಹೋದನೆಂಬ ವರ್ತಮಾನವನ್ನು ಕೇಳಿ, ಆತನನ್ನು ಹುಡುಕಿಕೊಂಡು ಮಾರ್ಗವಾಗಿ ನಡೆದುಬಂದು, ಅಕಸ್ಮಾತಗಿ ಇಲ್ಲಿ ಇರುವುದನ್ನು