ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

म४ ಯವನ ಯಾಮಿನೀ ವಿನೋದ, ಎಂಬ ಮಾ ರು ವುದ ಕ್ಕೆ ಹೋಗಿ ಒ೦ದು ವ ನ ೯ ನಾ ದ ರೂ, ಬ ರ ಲೆ ಇಲ್ಲ. ಅನಂತರ ಒಬ್ಬ ಬಿಕ್ಷಗಾರನು ನನ್ನ ಅಂಗಡಿಯ ಮುಂದೆ ಬಂ ದನು. ಅವನನ್ನು ನೋಡಿ ನಾನು ನಿನಗೆ ಭಗವತಹಾಯವಿದೆಯಲ್ಲವೆ ಎಂದೆನು. ಅದನ್ನು ಕೇಳಿ ಆತನು ನಿನಗೂ, ಭಗವತಹಾಯವುಂಟಲ್ಲವೆ ಎಂದು ಹೇಳಿ, ನೀನು ತಿಳಿದುಕೊಳ್ಳದೆ ಹೋಗಬಹುದೆ ? ಎಂದು ಕೇಳಿದನು. ಆಗನಾನು ಅವನನ್ನು ಚೆನ್ನಾಗಿನೋಡಿ ಆಲಿಂಗಿಸಿಕೊಂಡು ಅಣ್ಣಾ ಎಂದು ತಬ್ಬಿಕೊಂಡು ಪುನಹ ಆಲಿಂಗಿಸಿ ಕೊಂಡು ನೀನು ಹೀಗಿದರೆ ನಾನಂತು ತಿಳಿದುಕೊಳ್ಳ ಬಹುದೆಂದು ನುಡಿದನು. ಬಳಿಕ ಆತನನ್ನು ಮನೆಗೆ ಕರೆದು ಕೊಂಡು ಹೋಗಿ, ವಂದನಾದಿಗಳನ್ನು ಸಮರ್ಪಿಸಿ, ಬೋಜನವನ್ನು ಆ ಗಮಾಡಿಸಿ, ಆತನು ತೊರಟು ಹೋದ ಸಂಗತಿಯನ್ನು, ನಾನಾರದವಿ ಷಯವನ್ನು, ಪರದೇಶದ ಸಮಾಚಾರವನ್ನು, ಅವನ ಕೈನಲಾಭವನ್ನು ವಿವರಿಸಿ ಹೇಳ ಬೇಕೆಂದು ಕೇಳಿ ಕೊಂಡೆನು. ಅದಕ್ಕಾತನು ನನ್ನನ್ನು ನೋಡಿದರೆ ನಿನಗೆ ಗೊತ್ತಾಗುತ್ತದೆ, ನಾನು ನಿನ್ನನ್ನು ಬಿಟ್ಟುಬಿಟ್ಟು ಹೋದಮೇಲೆ ನನಗೆ ಉಂಟಾದ ವಮನವನ್ನು ವಿಸ್ತಾರವಾಗಿ ಹೇಳುವು ದಕ್ಕೆ ನನ್ನಿಂದಾಗದು, ಆ ವಿಷಯವನ್ನು ನೀವು ಕೇಳಿದುದಕ್ಕಾಗಿ ನಾನು ವಿವರಿಸಿ ಹೇಳಿದರೆ, ದುಃಖವು ವಸೂ ಅಧಿಕವಾಗುವುದೆಂದು ಹೇ ಆದನು, ಆ ಬಳಿಕ ಆತನಿಗೆ ನನ್ನ ಆದಾಯವನ್ನು ಎರಡು ಸಾವಿರಕ್ಕೆ ವ್ಯದಿ ಮಾಡಿರುವ ಸಂಗತಿಯನ್ನು ಹೇಳಿ ಈಗಲಾದರೂ ಇದರಲ್ಲರ್ಧವ ನ್ನು ನೀನು ತೆಗೆದುಕೊಂಡು, ಇದನ್ನು ಮೂಲಧನವನ್ನಾಗಿ ಮಾಡಿಕೊಂ ಡು ಸಂಸಾದನೆಗೂಡಿಕೊ ಎಂದು ಹೇಳಿದನು. ಅದಕ್ಕೆ ಆತನು ಸಂತ ನವನ್ನು ಹೊಂದಿ ಆ ಹಣವನ್ನು ತೆಗೆದುಕೊಂಡು ಸುಖವಾಗಿದ್ದನು. ಹೀಗೆ ನಾವಿಬ್ಬರೂ ಕೆಲವು ಕಾಲ ಏಕರಹ ಕೃತ್ಯದಲ್ಲಿರು ವಾಗ ನನ್ನ ಎರಡನೇ ತಮ್ಮನು ತನ್ನ ಆಸ್ತಿಯನ್ನೆಲ್ಲಾ ಮಾರಿಕೊಂಡು ಹೋಗಬೇಕೆಂದು ಪ್ರಯತ್ನ ಮಾಡಿದನು. ಆಗ ನಾನು ನನ್ನ ಅಣ್ಣ ನು ವಿಪ್ರೊ ವಿಧವಾಗಿ ಬುದ್ಧಿಯನ್ನು ಹೇಳಿದರೂ ಆತನು ಕೇಳದೆ ತ ಆಸ್ತಿಯನ್ನೆಲ್ಲಾ ಮಾರಿಕೊಂಡು ಆ ಹಣದಿಂದ ತನಗೆ ಬೇಕಾದ ಕೆಲ ವು ಸಾಮಾನುಗಳನ್ನು ಕೊಂಡುಕೊಂಡು ಕೆಲವುಜನ ವರ್ತಕರ ಗುಂಪಿಗೆ ಸೇರಿ ಪ್ರಯಾಣ ಮಾಡಿದನು. ಒಂದು ಸಂವತ್ಸರವು ಕಳೆದುಹೋದ ಮೇ