ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೫೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

fo ಯುನನ ಯಾಮಿನೀ ವಿನೋದ ಎಂಖ, ಬಂದುಹೋದ ದಾದಿಯು, ರಾಣಿಯಾದ ಹೇಮುಸಲ್‌ ನೆಹರಳಕಡೆಯವಳು ನಾನು ಇವಳನ್ನ ರಾಣಿಯನ್ನು ಚೆನ್ನಾಗಿ ಬಲ್ಫ್ನು. ಅವರೂ ರತ್ನ ವ್ಯಾಪಾರಕ್ಕಾಗಿ, ನನ್ನನ್ನು ಆಗಾಗ್ಗೆ ಬರಮಾಡಿಕೊಳ್ಳುತ್ತಿದ್ದರು. ಅಲ್ಲದೆ ಈಕ ಹಲವುಸಾರಿ ಇರ್ಬ ತೆಹರನಮನೆಗೆ ಬರುತ್ತಾ ಇದ್ದಳು. ಅಲ್ಲ ರಾಣಿಯು ತಾನು ಮಾಡುವ ಎಂತಹ ರಹಸವಾದ ಕಾರ್ಯಗಳನ್ನು ಮಾಡಬೇಕಾದರೂ, ಈ ದಾದಿಗ ತಿಳಸದೆ ಮಾಡಲಾರಳು. ಸ್ವಲ್ಪ ದಿನಗಳ ಕೆಳಗೆ ಈ ದಾದಿಯು ಬಹು ಚಿಂತಾಕಾ jಂತಳಾಗಿ ಇರುತ್ತಿರುವುದನ್ನು ಕಂಡು, ತಮ್ಮ ರಾಣಿಯನಿಮಿತ್ತವಾಗಿ ಯಾವುದೋ ಅಗತ್ಯವಾದ ಕಾರ ಕಾಗಿ ಹೀಗೆ ಹೋಗುತ್ತಿರುವಳೆಂದು ತಿಳಿದುಕೊಂಡನು. ಆದಕಾರಣ ದಿಂದ ನಾನು ನಿನ್ನ ರ್ಪಯಾಗಿ ನಿನ್ನ ಸಂಗಡ ಹೀಗೆ ಹೇಳಿದನೆಂದು ನುಡಿ ಯಲು, ರಾಜಕುಮಾರನು ಅಹಾ! ನಮ್ಮ ರಹಸ್ಯವನ್ನು ನಿಜವಾಗಿಯೂ ಅಥವಾ ಅನುಮಾನದಿಂದಲೂ ಇವನು ತಿಳಿದುಕೊಂಡಿರುವನು. ಇಲ್ಲವಾ ದರೆ ಹೀಗೆಂದಿಗೂ ಹೇಳಲಾರನು. ಆದುದರಿಂದ ಈತನಿಗೆ ಯಾವತರದಿಂದ ಉತ್ತರವನ್ನು ಹೇಳಬೇಕೆಂದು ಚಿಂತಿಸುತ್ತ, ನಾನು ಇದುವರೆಗ ಹೇಳಿದ ಸಂಗತಿಗಳಿಗಿಂತಲೂ ಹೆಚ್ಚಾಗಿ ನಿನಗೆ ತಿಳಿದಿರುವುದೆಂದು ನನಗೆ ತೋರ, ವುದರಿಂದ, ಅದನ್ನು ಪೂರ್ಣವಾಗಿ ಹೇಳಿ ನನಗೆ ದುಃಖಕರವಾಗುವುದೆ ? ಇಲ್ಲವೋ ? ದಯಮಾಡಿ ಹೇಳಬೇಕೆಂದು ಬೇಡಿಕೊಂಡನು. ರತ್ನವಾವರಿಯು ತನಬೇಕಾದುದಿಷ್ಟೇ ಎಂದು ಮನಸ್ಸಿನಲ್ಲಿ ತೃಪ್ತಿ ಹೊಂದಿ, ತಾನು ಇರ್ಬತಚರನ ಮುಖದಿಂದ ಕೇಳಿದ ವರ್ತಮಾನ ಎಲ್ಲವನ್ನೂ, ಆತನು ರಾಜಕುಮಾರನನ್ನು ತೊರೆದು ಹೋಗುವುದಕ್ಕೆ ಭಯಪಟ್ಟು ಯೋಚಿಸಿದ ಕಾರಣವನ್ನು ವಿಸ್ತಾರವಾಗಿ ತಿಳಿಯಹೇಳಿ, ಓ ರಾಜಪುತಾ! ಇಂತಹ ಕಾಲದಲ್ಲಿ ಇರ್ಬತಿಹರನು, ನಿನ್ನನ್ನು ತೊರೆದು ಹೋದುದಕ್ಕಾಗಿ, ನಾನು ತುಂಬ ವ್ಯಸನ ಪಡುವನು. ಆದರೆ ನೀನು ಈಗ ಅಸಹಾಯನಾಗಿರುವುದರಿಂದ, ಇರ್ಒ ತೆಹರನಿಗಿಂತಲೂ ಅಧಿಕವಾದ ನಂಬಿಕೆ ಯನ್ನು ತೋರ್ಪಡಿಸುತ, ನಿನಗೆ ಸಹಾಯ ಮಾಡಲು ಸಿದ್ಧನಾಗಿರು ವನು. ನೀನು ಅಂಗೀಕರಿಸುವುದಾದರೆ, ನಿನ್ನಕಾರಕ್ಕಾಗಿ ನನ್ನ ಗೌರವ ವನ, ಧನವನ್ನೂ, ಬಾಣಗಳನ್ನು ಕೊಡಲು ಸಿದ್ಧನಾಗಿರುವನು,