ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೬ ಯವನ ಯಾಮಿನೀ ವಿನೋದ ಎಂಬ, ಬಹಳವಾಗಿ ವಿಸ್ತರಿಸಿ, ಅವರನ್ನು ತನ್ನ ಮನೆಗೆ ಬರಮಾಡಿಕೊಂಡವರಿ ಯಂತವೂ, ಅನುಮಾನವಿಲ್ಲದಂತೆ ಹೇಳಿದನು, ಆ ಸಂಗತಿಯನ್ನು ಕೇಳಿ, ಕಳ್ಳರು ಆಹಾ ! ಆತನು ಪರ್ಷಿಯಾ ರಾಜಕುಮಾರನೇ ! ಆ ಸುಂದರಾಂಗಿ ಯಾದ ಲಲನಾಮಣಿಯು ರಾಣಿಯಾದ ಹೇಮುಸೆಲ್‌ನೆಹರಳೇ! ಅಯ್ಯೋ ! ಇದನ್ನು ನಾವು ಹೇಗೆ ನಂಬುವುದಕ್ಕಾದೀತು ಎಂದು ಚಿಂತಿಸುತ್ತಿರಲು, ವರ್ತಕನು ಅಯಾ ! ನೀವುಗಳು ಪ್ರತ್ಯಕ್ಷವಾಗಿ ಅವರನ್ನು ಈಗ ಪರೀ ಕಸಿನೋಡಿದರೆ, ಗೊತ್ತಾಗುತ್ತದೆಂದುನುಡಿದಕೂಡಲೆ, ಆ ಕಳ್ಳರು ವಿಸ್ಮ ಯಯುಕ್ತರಾಗಿ, ಪ್ರತಿ ಕೊಠಡಿಯ ಬಾಗಿಲನ್ನು ತೆರೆದು ಒಬ್ಬೊಬ್ಬ ರಾಗಿ ಒಳಹೊಕ್ಕು, ಅಮಾ ! ತಾವು ಇಂಥವರೆಂದು ನನಗೆ ಮೊದಲೇ ತಿಳಿದಿದ್ದರೆ, ಈ ವರ್ತಕನ ಮನೆಯನ್ನು ನಾವೆಂದಿಗೂ ದೋಚಿಕೊಳ್ಳು ತಿರಲಿಲ್ಲ. ಅಜ್ಞಾನವಶದಿಂದ ಮಾಡಿದ ಮಹಾಪರಾಧವನ್ನು ತಾವು ಸಂಪೂ ರ್ಣವಾಗಿ ಮನ್ನಿಸಬೇಕೆಂದು, ರಾಣಿಗೆ ನಮಸ್ಕರಿಸಿ ಬೇಡಿಕೊಂಡಂತೆಯೇ ರಾಜಪುತ್ರನನ್ನು ಬೇಡಿಕೊಂಡು, ಕ್ಷಮಾಪಣೆಯನ್ನು ಪಡೆದು, ರತ್ನ ಪಡಿ ವ್ಯಾಪಾರಿಯನ್ನು ಕುರಿತು, ಅಮ್ಮಾ... ! ನಿನ್ನ ಮನೆಯಲ್ಲಿ ದೋಚಿಕೊಂ ಡುಬಂದ ಪದಾರ್ಥಗಳನ್ನು ತಿರುಗಿ ಕೊಡುವುದಕ್ಕೆ ನಾವು ಶಕಹೀನರಾಗಿ ಇರುವುದಕ್ಕಾಗಿ, ಬಹಳವಾಗಿ ವ್ಯಸನವಡುತಿರುವೆವು. ಅವುಗಳಲ್ಲಿ ಬಹುಭಾಗವು ಖರ್ಚಾಗಿಹೋಯಿತ.. ಇಗೋ ! ಉಳಿ ದಿರುವ ಈ ಪದಾರ್ಥಗಳನ್ನು ತೆಗೆದುಕೊಂಡು ಹೋಗುವುದಕ್ಕೆ ನೀನು ಒಪ್ಪುವುದಾದರೆ, ಕೊಡುವುದಕ್ಕೆ ಸಿದ್ಧರಾಗಿರುವೆವೆಂದು ನುಡಿದನು. ಬಳಿಕ ರಾಜಕುಮಾರನ ಮತ್ತು ರಾಣಿಯ ಮುಖವನ್ನು ನೋಡಿ, ನಮ್ಮ ನಾಸ ಸನವನೂ, ನಾವು ಮಾಡುತ್ತಿರುವ ಜೀವನದ ತೆರವನೂ, ತಾವು ಹೊರಹಾಕದೆ ಗೋಪ್ಯವಾಗಿಟ್ಟುಕೊಂಡು, ನಮ್ಮನ್ನು ರಕ್ಷಿಸುತ್ತ ವೆಂದು, ನೀವು ಖಂಡಿತವಾದ ಪ್ರಮಾಣವನ್ನು ಮಾಡುವುದಾದರೆ, ಸುರ ಚಿತವಾಗಿ ನೀವು ಮನೆಯನ್ನು ಸೇರುವಂತೆ ಮಾಡುವೆನೆನಲು, ರಾಣಿಯು ರಾಜಕುಮಾರನು ಅದರಂತೆ ಖೋ ಪ್ರಮಾಣ ವುಡಿದುದರಿಂದ, ಕಳ್ಳರು ಅವರನ್ನು ಕರೆದುಕೊಂಡು ಹೊರಟರು. ರತ್ನಪಡಿವ್ಯಾಪಾರಿಯು ಉಳಿ ದಿದ್ದ ತಮ್ಮೆಗಳನ್ನು ತೆಗೆದುಕೊಂಡು, ಅವರನ್ನು ಹಿಂಬಾಲಿಸಿದನು, ದಾರಿ ಯಲ್ಲಿ ಬರುತ್ತಾ ಸೇರುಸೆಲ್‌ನೆಹರಳು ರತ್ನ ವಡಿವ್ಯಾಪಾರಿಯುಸಹ ತಮ್ಮ