ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩೬ ಯವನ ಯಾಮಿನೀ ವಿನೋದ ವಿಂಬ, ಸಂಶಯವಿಲ್ಲ. ಅದರಿಂದ ನಿನಗೆ ಕೇಡು ತಪ್ಪದು. ನಿನಗೆ ಕೇಡುಂಟಾಗುವುದ ರಿಂದ ನನ್ನ ಮನಸಿಗೆ ತುಂಬ ವ್ಯಥೆಯುಂಟಾಗುವುದು. ಇವೆಲ್ಲವೂ ನೀನು ಆತನ ಮಾತನ್ನು ತಿರಸ್ಕರಿಸುವುದರಿಂದ ಉಂಟಾಗಿ ಇದರಿಂದ ಸರ್ವರಿಗೂ ವ್ಯಸನಕ್ಕೆ ಕಾರಣವಾಗುವುದಲ್ಲಾ? ಎಂದು ಸಮಯವನ್ನರಿತು ತಿಳಿಯ ಹೇಳೆಂದು ನುಡಿದನು. ಬಳಿಕ ಒಂದಾನೊಂದು ಸಮಯದಲ್ಲಿ, ಮಾತಿಮಾ ಎಂಬ ಆ ರಾಜಪುತ )ನ ತಾಯಿಯು, ತನ್ನ ಮಗನನ್ನು ನೋಡಿ, ಇದು ಮಾತನಾಡುವುದಕ್ಕೆ ತಕ್ಕ ಸಮಯವಾಗಿರುವುದೆಂದರಿತು, ಆಹಾ ! ಪ್ರಿಯ ನಾದ ಪುತ್ರ ವನೇ ! ನೀನು ವಿವಾಹ ಮಾಡಿಕೊಳ್ಳದಿರುವುದಕ್ಕೆ ಕಾರ ಣವೇನೋ ತಿಳಿಯದಾ : ಸಿ ಯು ದುರ್ಮಾರ್ಗ ಗುಣವನ್ನು ತಿಳಿದು, ಅದಕ್ಕಾಗಿ ನೀನು ಸಾಮಾನ್ಯವನ್ನೇ ದೂರಮಾಡಿ, ವಿವಾಹ ಮಾಡಿ ಕೊಳ್ಳಬಾರದೆಂದು, ವೈರಾಗ್ಯವನ್ನು ಹೊಂದಿರುವೆಯಾ ? ಈ ನಿನ ಕಾರಣಗಳು ನ್ಯಾಯವಾಗಿಯೂ, ಸರ್ವಸಮ್ಮತವಾಗಿಯೂ ಇರಲಾರದು. ಏತಕ್ಕಂದರೆ :- ಸ್ಮಿಯರ ದುರಾದವರು ಇಲ್ಲವೆಂದು, ನಾನು ಹೇಳುವುದಿಲ್ಲ, ಆದರೆ ಭೂಲೋಕದಲ್ಲಿ ಹುಟ್ಟಿದ ಸಿಯರೆಲ್ಲರೂ ದುಷ್ಯರೇ ಆಗಿಲ್ಲ, ಅನೇಕಜನ ಪ್ರಸಿದ್ದರಾದ ಪತಿವ್ರತಶಿರೋಮಣಿಯರೂ ಒಂದೊಂದು ರಾಜ್ಯವನ್ನು ಪ್ರಸಿದ್ಧಿಗೊಳಿಸಿ, ಕೀರ್ತಿಯನ್ನು ಸಂಪಾದಿಸಿ ದವರಾಗಿರುವುದು ನಿನಗೆ ತಿಳಿದಿರಬಹುದು. ಆದರೂ ನೀನು ಕಾವ್ಯಾದಿಗಳಲ್ಲಿ ಓದಿ ಕೇಳಿರುವ, ದು ಸಿಯರ ನಡವಳಿಕೆಯನ್ನು ಕುರಿತು, ಸಿ ಸಮೂಹವನ್ನೆ ನಿದಿರವುದು ನ್ಯಾಯವಲ್ಲ, ಅವಾ ! ಸಕ್ಕರೆಗಿಂತಲ ಸವಿಯಾದ ನನ್ನ ಮಾತುಗಳು ನಿನಗೆ ಆನಂದವನ್ನುಂಟುಮಾಡದೆ ಇರಲಾರವು, ಲೋಕಾಧಿಪತಿಗಳಾಗಿ ಅಹಂ ಕಾರದಿಂದ ಬಹು ಕೂರರಾಗಿ ವರ್ತಿಸಿ, ನಾನಾಡೊಂದರೆಗಳನ್ನು ಇತರರಿಗೆ ಉಂಟುಮಾಡುತ್ತಿದ್ದ, ನೀಚರಾದ $ ರುಷರಿಗೆ ಮದುವೆಯಾಗಿ ತಮ್ಮ ಸುಗುಣಗಳನ್ನು ತ್ಯಜಿಸಿ, ಬಹಳವಾದ ತೊಂದರೆಗಳನ್ನು ಅನುಭವಿಸಿದ ಸ್ತ್ರೀಯರು ಅನೇಕವಾಗಿರುವರು. ಅವರ ಕನಸ್ಯಗಳನ್ನು ವಿವರಿಸಲು ಯಾರಿಗೂ ಸೌಧವಲ್ಲ, ಅಯ್ಯಾ ; ಪುರುಷರಲ್ಲಿಯೂ, ಅಧಮರಾದ ನೀಚರು, ಬಥುಮಂದಿ ಇರುತ್ತಿರುವರು ಎನಳು, ಕಮರಲುಜಮಾನನು