ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪೦ ಯವನ ಯಾಮಿನೀ ವಿನೋದ ಎಂಬ, ಈತನು ತುಂಬಾ ದುರಾರ್ಗಿಯಾಗಿರುವನಾದುದರಿಂದ, ಈತನನು ಕರೆದು ಕೊಂಡು ಹೋಗಿ ಬಹುದಿನಗಳಿಂದ ಹಾಳುಬಿದ್ದಿರುವ, ಒಂದಾನೊಂದು ಉಪ್ಪರಿಗೆಯಲ್ಲಿ ಸೆರೆಹ ಕೆಂದು ಆಜ್ಞಾಪಿಸಿದನು. ಕೂಡಲೇ ರಾಜಭಟರು ಒಂದು ಮಂಚವನ್ನೂ, ಕೆಲವು ವಸ್ತ್ರಗಳನ್ನೂ, ಸ್ವಲ್ಪ ಬುಕ್ಕುಗಳನ್ನೂ ತಗೆದುಕೊಂಡ, ಆತನನ್ನು ಸಂಗಡ ಕರೆದುಕೊಂಡು ಹೊರಟು, ಒಂದಾ ನೋಂದು ಹಾಳು ಉಪ್ಪರಿಗೆಯಲ್ಲಿ ಕುಳ್ಳಿರಿಸಿ, ಮಾರ್ಗವನ್ನು ತಡೆದು ಬಲವಾಗಿ ಮುಚ್ಚಿದರು. ಈತರದಿಂದ ಕ ಮರಲುದಾನನು ಕಾರಾಗೃಹ ವಾಸಿಯಾಗಿದ್ದರೂ, ತನ್ನ ಕಾಲವನ್ನು ಅಮೋಘವಾದ ಕಾವ್ಯವ್ಯಾಸಂಗ ದಿ ವಿನಿಯೋಗಿಸ ತಿದ್ದುದರಿಂದ, ತನ್ನ ಕಮ್ಮಗಳನ್ನೆಲ್ಯಾ ಲಕ್ಷ ಮಾಡದೆ ನಿಂತುಕನಾಗಿ ವಿದ್ಯಾಸಂಗದಲ್ಲಿ ಕಾಲವನ್ನು ಕಳೆಯುತ್ ಸಂಧ್ಯಾಕಾಲದಲ್ಲಿ ಸ್ಥಾನವನ್ನು ತಿರಿಸಿಕೊಂಡು, ಜಗಾದಿಗಳನ್ನು ನಿರಿಸಿ, ನಂತರ ಭಗವಂತನ ಧ್ಯಾನಗೆಯ, ಧೈರ್ಯದಿಂದ ಸ್ವಸ್ಯ ಚಿತ್ರನಾಗಿ ನಿದಿ ಸಿದನು, ಆ ಉಪ್ಪರಿಗೆಯ ಮೇಲುಭಾಗದಲ್ಲಿ ಒಂದಾನೊಂದು ಭಾವಿ ಯುಂಟು, ಆ ಭಾವಿಯಲ್ಲಿ ದಖತಳಾದ ಒಬ್ಬ ಯಕ್ಷಿಣಿಯು ವಾಸ ಮಾಡುತಿರುವಳು. ಆಕೆಯು, ತನ್ನ ವದತಿಯನ್ನನುಸರಿಸಿ ಹಗಲೆಲ್ಲ ಅದರಲ್ಲಿ ಅಡಗಿಕೊಂಡಿದ್ದು, ರಾತ್ರಿಯ ಕಾಲದಲ್ಲಿ ಸಂಚಾರ ಹೊರಟು ಕರಗ ಬರುತಿ ರುವಳು. ಎಂದಿನಂತೆ ಈದಿನಪೂ ಭಾವಿಯಮೇಲಕ್ಕೆ ಹಾರಿಬಂದು, ರಾಜ ಕುಮಾರನು ವಾಸಮಾಡುವ ಕೊಠಡಿಯಲ್ಸ್, ದೀಪ ಉರಿಯುತ್ತಿರುವು ದನ್ನು ಕಂಡು, ಬಾಗಿಲ ಕಾದುಕೊಂಡು ಮಲಗಿರುವ, ಚಾರಕರನ್ನು ಲಕ್ಷ ಮಾಡದೆ ಒಳಹೊಕ್ಕು ರಾಜಪುತ್ರನ ರೂಪುರೇಖಾ ಲಾವಣಾದಿ ಗಳನ್ನು ನೋಡಿ, ಆಶ್ಚರ್ಯಯುಕಳಾಗಿ ನೋಡುತ್ತಿದ್ದಳು. ಆಗ ರಾಜಪುತ್ರನಾದ ಕಮರಲುಜಮಾನನ ಸೌಂದರ್ಯವನ್ನು ನೋಡಿ, ಆಹಾ ! ಇದೆಂತಹ ಸೌಂದರ್ಯ, ಓಹೋ! ಇದೇನು ಲಾವಣ! ಹಾ! ಆಹಾ ! ಇಂತಹ ಸುಂದರಪುರುಷನನ್ನು ನಾನು ಭೂಲೋಕದಲ್ಲಿಯೇ ಕಾಣಲಿಲ್ಲ ನಲ್ಲ ! ಅಂದವಾದ ಸೌಂದರದಿಂದ ನಿಬಿಡವಾದ ಈತನ ಈ ಕಣ್ಣುರೆಪ್ಪಗೆ ಳನ್ನು ತೆರೆದಿರುವ ಕಾಲದಲ್ಲಿ, ಈತನನ್ನು ನೋಡುವ ಆನಂದವೆಂಥಾದ್ರೂ