ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೫೬ ಯವನ ಯಾಮಿನೀ ಏನೋದಿ ಎಂಬ, ಆಶ್ಚರ್ಯಯಕನಾಗಿ ಇದಪುತ್ರನನ್ನು ನೋಡಿ, ಸಾವಿಾ ! ನಾನು ಹೇಳುವಮಾತಿಗೆ ನೀವು ಕೋಪಮಾಡಿಕೊಳ್ಳಬೇಡಿರಿ. ಲೋಕದಲ್ಲಿ ಪುರು ಸನಾಗಲೀ, ಸಿಯಾಗಲೀ, ಬಾಗಿಲನ್ನು ತೆಗೆಯದೆ ಕಾದುಕೊಂಡಿರುವ ಈ ನಿಮ್ಮ ಚಾರಕರನ್ನು ತುಳಿಯದೆ ಅಥವಾ ಮತ್ತಾವ ಕುರುಹನೂ ತೋರದೆ ಒಳ ಹೋಗಲಾವರೇ ? ಆಹಾ ! ನೀವು ಕನಸನ್ನು ಕಂಡು ಭೂಮಿ ಸಿರಬಹುದೆಂದ ನುಡಿಯಲು, ಮತಿಯನ್ನು ನೋಡಿ ರಾಜಪುತ ನು ಆಹಾ ! ನೀನು ಸ್ನೇಳುವ ಮಾತುಗಳನ್ನು ನಾನೆಂದಿಗೂ ಕೇಳೆನು, ಆದರೆ ನಿನ್ನಮಲಕನಾಗಿಯೇ ಆ ಕನ್ಯಾಮಣಿಯ ವಿಚಾರವನ್ನು ತಿಳಿದುಕೊಳ್ಳಿ ಬೇಕೆಂದಿರುವೆನು. ಇಲ್ಲವಾದರೆ ಅದಕ್ಕೆ ತಕ್ಕತರದಿಂದ ಬಲಾತ್ಕಾರಮಾಡಲು ನಾನು ಶಕನಾಗಿರುವೆನೆಂದು ನುಡಿದ ರಾಜಪುತ್ರನ ವಾಕ್ಯವನ್ನು ಕೇಳಿ, ಭುಂತಿ ಯು ಆತನನ್ನು ಉಪಾಯದಿಂದ ಗೆಲ್ಲಬೇಕೆಂದು ಸ್ವಾಮಿಾ ! ನೀವು ಜೆ ಸುಂದರಿಮಣಿಯನ್ನು ನೋಡಿರುವಿರಾ ? ದಯನಾಡಿ ಹೇಳಬೇಕೆಂದು ದೈನ್ಯದಿಂದ ಹೇಳಿದನು. ; ಆಗ ರಾ -ನ ಆ ಯಾ ! ಏನುಮಾಡಿರುವ ತಂತ್ರವನ್ನು ನಾನು ಚೆನ್ನಾಗಿ ತಿಳಿದಿರುವೆನು. ಆಗ ! ಆ ವಾಜಪುತ್ರಿಯನ್ನು ವಹಿ ಸುವಂತೆ ಮಾಡುವುದಕ್ಕಾಗಿ ನೀನೇ ನನ್ನ ಬಳಿಗೆ ಕರೆದುಕೊಂಡುಬಂದವನು. ಇದೆಲ್ಲವನ್ನು ನಾನು ಚೆನ್ನಾಗಿ ತಿಳಿದಿರುವೆನು. ಆದರೆ ಆ ಸುಂದರೀಮಣಿ ಯು ನನ್ನ ಸಂಗಡ ಒಂದುಮಾತನ್ನು ಆಡದೆ ಬಹಳವಾಗಿ ಮೊಡವನ್ನುಂಟು ಮಾಡಿ ಹೊರಟುಹೋದಳಲ್ಲಾ ಎಂದು ಚಿ.ತಿಸುವೆನೆನಲು, ವಂತಿ ಯ ಸವಿತಾ ! ಖಂಡಿತವಾಗಿಯೂ, ನಾನಾಗ, ನಿಮ್ಮ, ತಂದೆಯಾಗಲೀ, ನೀವು ನೋಡಿದ ಲಲನಾಮಣಿಯ ವಿಚಾರವನ್ನು ಅರಿತವರೇ ಅಲ್ಲವೆಂದು ಮತ್ತೊಂದುಸಾರಿ ಕೇಳ ವೆನು, ಆದರೆ ನೀವು ಆಕೆಯನ್ನು ಕನಸಿನ ನೋಡಿರಬಹುದೆಂದು ನಾನು ನಂಬಿರ ವುದರ ಉಾವ ಸಂಶಯವೂ ಇe ವೆಂದು ನುಡಿಯಲು ರಾಜಪುತ್ರನು ಅಹಾ ! ನಾನು ಪ್ರತ್ಯಕ್ಷನಾಗಿ ನೋಡಿದ ವಧೂರವನ್ನು ನೀನು ಕಾಣೆನೆಂದು ಸುಳ್ಳು ಹೇಳುವೆಯಾ ? ಇಜಿಲ್ಲ ನಿನ್ನತಂತ್ರ ವಲ್ಲದೆ ಮತ್ತಾರದೆಂದು ಹೇಳಿ, ಆತನ ಗಡ್ಡವನ್ನು ಹಿಡಿದು ಕೊಂಡು ನೆಲಕ್ಕೆ ಬೀಳುವಂತೆ ಬಲವಾಗಿ ಗುದ್ದಿದನು. ಬಳಿಕ ಮಂತ್ರಿಯ ರಾಜಪುತ ನಿಗೆ ಕೋಪಬಂದಿರುವುದರಿಂದ ಚರಕನಿಗದಗತಿಯು ತನಗೂ