ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೬೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ve ಯವನ ಯಾಮಿನೀ ವಿನೋದ ವಿಂಬ, ಬಹುದಿನಗಳ ಪ ಯಾಣ ವಿರುವುದು. ಅದುವರೆಗೂ ನಾನು ನಿನ್ನನ್ನು ಅಗಲಿರಲಾರನು. ಆದರೂ, ಒಂದಾನೊಂದು ಕಾರಣದಿಂದ ನನ್ನ ಮನಸ್ಸಿಗೆ ಕ್ಷೇಮವಾಗಿರುವುದಕ್ಕಾಗಿ ನಾನು ಒಪ್ಪಿ ನಿನ್ನನ್ನು ಕಳುಹಿಸಿಕೊಡುವೆನು. ನೀನು ಒಂದು ಸಂವತ್ಸರಕ್ಕಿಂತಲೂ ಅಧಿಕವಾಗಿ ನಿಮ್ಮ ದಾವನವರಮನೆ ಯಲ್ಲಿರಬೇಡವೆಂದು ನುಡಿಯುತ್ತಾ ಮಗಳನ್ನೂ ಅಳಿಯನನೂ ಆಗಲಾ ರದ ದುಃಖದಿಂದ ಬಹಳವಾಗಿ ಗೋಳಾಡಿ ಕೊನೆಗೆ ಸಮಾಧಾನ ಮಾಡಿ ಕಂಡು, ಹಾಗೇ ಅಗಲೆಂದು ನುಡಿದು ರಾಜಪುತಿ ಯು ಕೂಡಲೇ ತನ್ನ ಗಂಡನಿಗೆ ಈ ವರ್ತಮಾನವನ್ನು ತಿಳಿಯಹೇಳಲು, ಆತನು ಬಹುಸಂತೂ ಸವುಳ್ಳವನಾಗಿ ರಾಜನನ್ನು ನಂದಿಸಿದನು. ನಂತರ ಚೀನಾದೇಶದ ರಾಜನು ತನ್ನ ಮಗಳನ್ನೂ, ಅಳಿಯ ನನ, ಕಳುಹಿಸಿಕೊಡುವುದಕ್ಕೆ ಸರಸನ್ನಾಹಗಳನ್ನು ಮಾಡಿಕೊಂಡು ಅವರಿಬ್ಬರಿಗೂ, ಸಕಾದಷ್ಟು ದ ವ್ಯವನ್ನೂ, ಪರಿವಾರದವರನ್ನೂ, ಕೊಟ್ಟು ತಾನು ಬಹಳದೂರದವರಿಗೂ ಅವರಸಂಗಡಲೇ ಹೋಗಿ ಸಾಗು ಕಳುಹಿಸಿ, ನಂತರ ಅಳಿಯನಿಂದಲೂ, ಮಗಳಿ ದಲೂ, ಅಪ್ಪಣೆಯನ್ನು ಪಡೆದು, ಅನೋನ್ಯವಾಗಿ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡಬಳಿಕ ಅಯಾ ! ನೀನು ನನ್ನ ಮಗಳನ್ನು ಈಗಿನ ವಿಶ್ವಾಸಕ್ಕಿಂತಲೂ ಅತಿ ಶಯವಾದ ಸೀತಿಯಿಂದ ನೋಡಿಕೊಂಡು ಸಲಹುತ್ತಿರಬೇಕು. ನಿನ್ನನ್ನು ನನ್ನ ಮಗಳಾದ ರಾಜಪುತ್ರಿಯನ್ನು ನೋಡಿದರೆ ನಿಮ್ಮ ತಂದೆಯಾದ ಮಹ ಜಮಾನನು ಬಹಳ ಸಂತೋಷಿಸದಿರಲಾರನೆಂದು ತಿಳಿದು ನನ್ನ ಮನಸ್ಸಿಗೆ ಆನಂದವನ್ನು ಹೊಂದಿದನೆಂದು ಹೇಳಿದಬಳಿಕ ಎಲ್ಲರೂ, ಸಂತೋಷಚಿತ್ರ ರಾದರು. ಚೀನಾರಾಜನು ಹಿಂದಿರುಗಿದನು. ಬಳಿಕ ದಂಪತಿಗಳಿಬ್ಬರೂ ಒಂದು ತಿಂಗಳವರಿಗೆ ಪ್ರಯಾಣ ಮಾಡಿ ಒಂದಾನೊಂದ ದಾರಿಯಲ್ಲಿ ಬಹು ಬಿಸಿಲಿನಿಂದ ಬಳತಿ ನೆಳಲಾಗಿಯ, ಹಸುರಾಗಿಯೂ, ಇರುವ ಒಂದು ಲವನ್ನು ನೋಡಿ ಈದಿನ ಆ ಸ್ಥಲದಲ್ಲಿ ತಂಗಬೇಕೆಂದು ಇಬ್ಬರೂ ಸಮ್ಮತಿಸಿ ಡೇರೆಗಳನ್ನು ಕೂಡಿಸಿ, ತಂತಮ್ಮ ಚಾ ಕರರಿಗಸಹಾ ಗುಡಾರ ಗಳನ್ನು ಹೊಡೆದುಕೊಳ್ಳುವಂತೆ ಆಜೆಸಿಸಿ, ತಾವು ತಂದಿದ್ದ ತಿಂಡಿಯು ಸದರ್ಭಿಗಳನ್ನು ತಿಂದು ಸ್ವಲ್ಪ ವಿಶ್ರಮಿಸಿಕೊಂಡನಂತರದಲ್ಲಿ ರಾಣಿಯು