ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೭೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

•d ಅರೇಬಿರ್ಯ ನೈಟ್ಸ್ ಕಥೆಗಳು, ೬೯ ಹಣವನ್ನೂ, ಉಳಿದ ಅರ್ಧಕ್ಕೆ ಹಣ್ಣನ್ನೂ, ತುಂಬಿ ಸಾಗಿಸಿಕೊಂಡು ಹೋಗುವುದು ತುಂಬಾ ಸುಖಕರವಾದುದೆಂದು ನುಡಿಯಲು, ರಾಜಕುಮಾ ರನು ಅದಕೊಪ್ಪಿ ಹಾಗೆಯೇ ಮಾಡಿ ತಾನೂ ಮುದುಕನೂ ಊಟಮಾಡಿ ರಾತ್ರಿ ಮಲಗಿಕೊಂಡಾಗೇ ಅನೋನ್ಯವಾಗಿ ಮಾತನಾಡುತ್ತಾ ತಂತಮ್ಮ ವೃತಾಂತಗಳನ್ನು ಹೇಳಿಕೊಂಡರು. ನಂತರ ಮುದುಕನಾದುದರಿಂದಲೂ, ಬಹಳವಾಗಿ ಕೆಲಸಮಾಡಿ ದಣಿದುದರಿಂದಲೂ, ತೋಟಗಾರನಿಗೆ ದೇಹಾಲಸ್ಯ ಉಂಟಾಗಿ ದಿನೇ ದಿನೇ ಅಧಿಕವಾಗುತಿರಲು ತೋಟಗಾರನಬಳಿಗೆ ಹಡಗಿನ ಸರದಾರನು ತನ್ನ ಚಾರಕರೊಡನೆಬಂದು, ಮಾತನಾಡಬೇಕೆಂದು ತೋಟದ ಬಾಗಿಲನ್ನು ತಟ್ಟಿದನು. ಆಗ ಕಮರಲುಜಮಾನನು ಬಾಗಿಲನ್ನು ತೆರೆದು ತಾನೇ ಪ |ಯಾಣ ಹೊರಡತಕನೆಂಬುದನ್ನು ಹೇಳಿ, ಆತನ ಹಡಗಿನಲ್ಲಿ ತುಂಬುವುದಕ್ಕಾಗಿ ಆ ಹಣ್ಣಿನ ಮಡಿಕೆಗಳನ್ನು ಕೊಟ್ಟು, ಹಡಗಿನ ಯಜಮಾನನಿಗೆ ಮುದುಕನ ಸ್ಥಿತಿಯನ್ನು ತಿಳಿಯಹೇಳಿ ಕುಳ್ಳಿರಿಸಲು, ಆತನು ಸ್ವಲ್ಪ ಹೊತ್ತು ಕಳಿ ತಿದ್ದು ಅಯಾ ! ನಿನಗೋಸ್ಕರವಾಗಿ ಕಾದುಕೊಂಡಿರುವೆನು ಮತ_ನು ಕಾರ್ಯವಿಲ್ಲ. ಹಡಗು ಕೂರಡುತ್ತಿರು ವುದು ಬೇಗ ಹೊರಟುಬಾ ಎಂದು ಹೇಳಿ ಹೊರಟುಹೋದನು. ಹೀಗೆ ಹಡಗಿನ ಯಜಮಾನನು ಹೇಳಿ ಹೊರಟುಹೋದ ಬಳಿಕ ರಾಜಪುತ ನು ಮುದುಕನಬಳಿಗೆ ಹೋಗಿ ಆತನಿಂದಪ್ಪಣೆಯನ್ನು ಪಡೆದು, ಬರಬೇಕೆಂದಿರುವಲ್ಲಿ ಆತನು ದೈಹಯೋಗದಿಂದ ಮರಣವನ್ನು ಹೊಂದಿ ದನು. ನಂತರ ಆತನ ಉತ್ತರಕ್ರಿಯಾದಿಗಳನ್ನು ತೀರಿಸಿ, ಭಕ್ತಿಯುಕ್ತ ನಾಗಿ ಆತನು ಮಾಡಿದುಪಕಾರಕ್ಕಾಗಿ ಭಗವಂತನು ಆತನಿಗೆ ಸ್ವರ ಸಖ್ಯ ವನ್ನು ಕೊಡಲೆಂದು ಸಾ ರ್ಥಿಸಿ, ತಾನು ಹಡಗನ್ನು ಹತ್ಯಬೇಕೆಂದು ಓಡಿಬರುತ್ತಿರುವಲ್ಲಿ ಹಡಗು ಹೊರಟುಹೋಗಿರುವುದನ್ನು ಕಂಡು ಬಹಳ ವಿಚಾರಯುಕ್ತನಾದನು. ಹಡಗಿನ ಯಜಮಾನನು ಮರುಘಳಿಗೆಯ ಕೂತು ಕಮರಲುಜಮಾನನಿಗಾಗಿ ಕಾದುಕೊಂಡಿದ್ದು ಒಳ ಘಳ ಬಂದಕೂಡಲೇ ಹಡಗನ್ನು ನಡೆಸಿಕೊಂಡು ಹೊರಟುಹೋದನು, ಇಂತಂದು ಹೇಳಿ ಕಮರಲುಜಮಾನನು, ಬಹಳವಾದ ವ್ಯಸನಕ್ಕೆ ಸಿಕ್ಕಿದ ಸಮಾ ಚಾರವನ್ನು ತಿಳಿಸಿ ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಮರಳಿ ಮರು ದಿನ ಬೆಳಗಿನ ಜಾವದಲ್ಲಿ ಹೇಳಲಾರಂಭಿಸಿದಳು,