ಪುಟ:ಅರ್ಥಸಾಧನ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Vರ್ಥಸಾಧನ wwwwwwwwwwwwwwwwwwwwwwwwwwwwwwwwwwwwwwwwwwwwwwwwww - ೧೭v೦ನೆಯ ವರುಷದಲ್ಲಿ ಉತ್ತರ ಅಮೆರಿಕಾಖಂಡದ ಸಂಯುಕ್ತ ಸಂ ಸ್ಥಾನವೆಂಬ ದೇಶದಲ್ಲಿ ವಾಷಿಂಗ್ರ್ಟ ಎಂಬ ಒಬ್ಬ ದೊಡ್ಡ ಮನುಷ್ಯನಿದ್ದನು. ಆಗ ಆ ದೇಶೀಯರಿಗೂ ಇಂಗ್ಲೀಷರಿಗೂ ಯುದ್ಧವು ಸಂಭವಿಸಿತು. ಇಂ ಗಿಷರು ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಎಂಟುವರುಷ ಗಳವರೆಗೂ ಯುದ್ಧವನ್ನು ಮಾಡಿದರು ಆ ಯುದ್ಧದಲ್ಲಿ ಅವನು ಅನ್ಯಾದೃಶ ವಾದ ಪರಾಕ್ರಮವನ್ನೂ ಪರೋಪಕಾರವನ್ನೂ ಕಾರ್ಯತಃ ತೋರಿಸಿ ತನ್ನ ದೇಶಕ್ಕೆ ಸ್ವಾತಂತ್ರ್ಯವುಂಟಾಗತಕ್ಕ ಪ್ರಯತ್ನದಲ್ಲಿ ನಿರತನಾಗಿದ್ದನು ಕೊನೆಗೆ ಯುದ್ಧ ಮಾಡುವುದಕ್ಕೆ ದ್ರವ್ಯ ಸಹಾಯವು ಇಲ್ಲದೆ ಹೋಯಿತು. ಮದ್ದು ಗುಂಡು ಮೊದಲಾದುವುಗಳಿಗೂ ಅಭಾವವಾಯ್ತು. ಸೈನಿಕರಿಗೆ ಅಶನ ವಸನಗಳಿಗೂ ಮಾರ್ಗವಿಲ್ಲವಾಯ್ತು ಈ ತೊಂದರೆಗಳನ್ನೆಲ್ಲಾ ನೋಡಿ ಮುಂದೆ ಸಂಭವಿಸುವ ವಿಪತ್ತುಗಳನ್ನು ಅನುಭವಿಸುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದುತ್ತಮವೆಂದು ಅವನು ಯೋಚಿಸುತ್ತಿದ್ದನು ಆಗ ಆ ಪಟ್ಟಣದಲ್ಲಿ ಮರೆ ಎಂಬ ಕೋಟೀಶ್ವರನಾದ ವರ್ತಕನಿದ್ದನು ಅವನು ಜನ್ಮಾ ರಭ್ಯ ಪರೋಪಕಾರವೆಂಬ ಮಾತನ್ನೆ ಕೇಳದವನು ಮತ್ತು ಲುಬ್ಬಾ ಸರಚಕ್ರವರ್ತಿ ಎಂಬ ಬಿರುದನ್ನೂ ಸಂಪಾದಿಸಿದ್ದನು ಇಂತಹ ಮನುಷ್ಯನು ವಾಷಿಂಗ್ಟನ್ನಿನ ನಿಸ್ಪೃಹತೆಯನ್ನೂ ದೇಶಾಭಿಮಾನವನ್ನೂ ಪರೋಪಕಾರ ಬುದ್ದಿಯನ್ನೂ ತನ್ನ ದೇಶಕ್ಕೆ ಸನ್ನಿಹಿತವಾದ ದುರ್ದಶೆಯನ್ನೂ ನೋಡಿ, ದಯಾರ್ದಹೃದಯನಾಗಿ ವಾಷಿಂಗ್‌ಟನ್ನನನ್ನು ಕರೆಯಿಸಿ ತನ್ನ ಆಸ್ತಿಯ ನ್ನೆಲ್ಲಾ ಅವನಿಗೆ ಕೊಟ್ಟು ಪ್ರೋತ್ಸಾಹಪಡಿಸಿದನು. ಇದರಿಂದ ವಾಷಿಂಗ್ಟನ್ನ ನಿಗೆ ಜಯವಾಯಿತು. ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯವು ಇಂಗಿಸಿ ರಿಂದ ಒಪ್ಪಿಕೊಳ್ಳಲ್ಪಟ್ಟಿತು. ಹೀಗೆ ಪರೋಪಕಾರಿಯಾಗಿಯೂ ಸನ್ಮಾರ್ಗಪ್ರವೃತ್ತನಾಗಿಯೂ ಇರ ತಕ್ಕವನಿಗೆ ಮಿತ್ರರು ಮಾತ್ರವೇ ಅಲ್ಲದೆ ಇತರರೂ ಸಹಾಯಮಾಡುವರು.