ಪುಟ:ಅರ್ಥಸಾಧನ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪುರುಷಕಾರ ಹೀಗೆ ಪರಿತಪಿಸುವರಾದ್ದರಿಂದ ಆ ಪಶ್ಚಾತ್ತಾಪವು ಅವರಿಗೆ ವಿಶೇಷ ಪ್ರಯೋ ಜನಕಾರಿಯಾಗುವುದಿಲ್ಲ, ಅದೃಷ್ಟವಿದ್ದಂತೆ ಆಗಲೆಂದು ಅನುದ್ಯೋಗಿಗಳಾ ಗಿದ್ದವರು ಶೋಚನೀಯವಾದ ಸ್ಥಿತಿಗೆ ಬಂದಿರುವುದೂ ಈಗ ಬರುತ್ತಲಿರು ವುದೂ ಅನುಭವಸಿದ್ಧವಾಗಿಯೇ ಇರುವುವು. ಸರಿಯಾದ ಪ್ರಯತ್ನವನ್ನೇ ಮಾಡಿ ಪುರುಪಕಾರವನ್ನೇ ನಂಬಿ ನಡೆಯುವುದರಲ್ಲಿ ಕೆಟ್ಟು ಹೋಗಿರುವವರು ಬಹಳ ಅಪೂರ್ವರಾಗಿರುತ್ತಾರೆ. ಒಂದುವೇಳೆ ಅಂಥವರು ಇದ್ದಾರೆಂದು ಗೊತ್ತಾದಾಗ್ಯೂ ಅವರು ಮಾಡಿದ ಪ್ರಯತ್ನಗಳನ್ನು ಪರಿಶೀಲಿಸಿದರೆ ಅವು ಗಳಲ್ಲಿ ಕಾಠ್ಯ ಸಾಧನೆಗೆ ಪ್ರತಿಕೂಲವಾದ ಕೆಲವು ನ್ಯೂನತೆಗಳು ಗೊತ್ತಾ ಗುತ್ತವೆ. ಆದುದರಿಂದಲೇ “ ಲಕ್ಷ್ಮಿಯು ಉದ್ಯೋಗಿಯಾದ ಪ್ರರುಷಕ್ಕೆ ಇನನ್ನು ಹೊಂದುತ್ತಾಳೆ. ತಿಳಿವಳಿಕೆಯಿಲ್ಲದವರು ದೈವವೇ ಕಾರಣನೆಂ ಬುದಾಗಿ ಹೇಳುವರು. ದೈವವನ್ನು ಅಪೇಕ್ಷಿಸದೆ ಪುರುಷ ಪ್ರಯತ್ನಗಳನ್ನು ಮಾಡು. ಪ್ರಯತ್ನ ಮಾಡಿದರೂ ಒಂದುಸಲ ಸಿದ್ದಿಸದೆ ಹೋದರೆ ಆ ವಿಷಯ ದಲ್ಲಿ ದೋಷವೇನಿಗೆ ' ಮತ್ತು ಪ್ರಯತ್ನಿ, ಸಾಹಸ, ಧೈಯ್ಯ, ಬುದ್ದಿ, ಶಕ್ತಿ, ಪರಾಕನು ಈ ಆರು ಗುಣಗಳು ಯಾರಲ್ಲಿರುವುವೋ ಅವರಿಗೆ ದೈವವೂ ಕೂಡ ಹೆದರುತ್ತದೆ ಅಂದರೆ ಅಂಥಾ ಸಾಹಸ ನಿದಿ ಗುಣಗಳುಳ್ಳವರಲ್ಲಿ ನನ್ನ ಯತ್ನವು ನಡೆಯುವುದೋ ಇಲ್ಲವೋ ಎಂಬುದಾಗಿ ದೇವರು ಕೂಡ ಶಂಕಿ ಸುತ್ತಾನೆ.” ಎಂದು ನೀತಿಶಾಸ್ತ್ರಜ್ಞರು ಹೇಳಿದ್ದಾರೆ. ಆದಕಾರಣ ಸರ್ವರೂ ಹಣೆಯಲ್ಲಿ ಬರೆದಂತೆ ಆಗಲೆಂದು ಪ್ರಯತ್ನ ಪರಾಲ್ಮುಖರಾಗದೆ ತಮ್ಮ ಯೋಗ್ಯತೆಗೆ ಅನುರೂಪವಾದ ಪ್ರಯತ್ನಗಳನ್ನು ಕಲ್ಪಿಸಿಕೊಂಡು ಅದರಲ್ಲಿ ವೃದ್ಧಿಗೆ ಬರುವುದಕ್ಕೆ ತಕ್ಕ ಸನ್ನಾಹಗಳನ್ನು ಮಾಡುವುದರಲ್ಲಿ ಯಾವಾಗ್ಯೂ ಪುರುಷಕಾರೈಕಪರಾಯಣರಾಗಿರಬೇಕು. ) G