ಪುಟ:ಅರ್ಥಸಾಧನ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ wwwwwwwwwwwwwwwwwwwwwwwwwwwwy ಕyyyy ಐಕ್‌ಗ ಸತ್ವದಾ ಸತ್ವ ಸಂಸ್ಥೆನ ಸರೋಣ ಸಹ ತಿಷ್ಠತಾ | ಸತ್ವ ಕರರತಂ ಸ್ವಸ್ಥ ಮನಃ ಕಾಡ್ಯಂ ವಿಜಾನತಾ || ನಮ್ಮ ಪೂರ್ವಿಕರಾದ ಮಹರ್ಷಿಗಳು ಇಷ್ಟಾರ್ಥ ಪ್ರಾಪ್ತಿಗೋ ಸ್ಕರ ಆಹಾರ ನಿದ್ರಾದಿಗಳನ್ನು ನಿರಾಕರಿಸಿ ದೇಹದಂಡನಪೂರ್ವಕವಾಗಿ ಏಕಾಗ್ರದಿಂದ ನಾನಾವಿಧವಾದ ತಪಸ್ಸುಗಳನ್ನು ಮಾಡಿ ತಮ್ಮ ಇಷ್ಟಾ ರ್ಥಗಳನ್ನು ಸಾಧಿಸುತ್ತಿದ್ದ ವಿಷಯಗಳು ಪುರಾಣೇತಿಹಾಸಗಳಲ್ಲಿ ವಿಶೇಷ ವಾಗಿ ಹೇಳಲ್ಪಟ್ಟಿರುವುವು ಅವುಗಳನ್ನು ಪರಿಶೀಲಿಸಿ ನೋಡಿದರೆ ಅವರು ತಮ್ಮ ಮನೋರಥಗಳನ್ನು ಸಾಧಿಸುವುದಕ್ಕಾಗಿ ಉಪಕ್ರಮಿಸಿದ ತಪಸ್ಸೇ ಮೊದಲಾದುವುಗಳನ್ನು ಎಷ್ಟು ವಿಸ್ಸುಗಳ ಬಂದಾಗೂ ಹಿಂಜರಿಯದೆ ಐಕಾ ಗ್ರದಿಂದ ಮಾಡುತ್ತಿದ್ದಂತೆ ತಿಳಿಯಬರುತ್ತದೆಅದರಂತೆ ನಾವು ಹಿಡಿದ ಕೆಲಸವನ್ನು ಸೈನ್ಯದಿಂದ ಸಾಧಿಸಬೇಕು. ಪ್ರಯೋಜನಾಂಶವನ್ನು ಪಡೆ ಯಬೇಕೆಂಬ ಅಪೇಕ್ಷೆಯುಳ್ಳವರು ಉಪಕ್ರಮಿಸಿದ ಕೆಲಸವನ್ನು ತದೇಕಾ ಯತ್ತ ಚಿತ್ತರಾಗಿ ಮಾಡಬೇಕು. ಹಾಗೆ ಮಾಡದೆ ಅನೇಕ ಕೆಲಸಗಳನ್ನು ಏಕಕಾಲದಲ್ಲಿ ಉಪಕ್ರಮಿಸುವುದು, ಮಾಡುವ ಕೆಲಸದಲ್ಲಿ ಮನಸ್ಸನ್ನು ನಿಶ್ಚಲವಾಗಿ ನಿಲ್ಲಿಸದೆ ಚಪಲಚಿತ್ತರಾಗುವುದು, ಅಥವಾ ಉಪಕ್ರಮಿಸಿದ ಕೆಲಸವನ್ನು ಮುಗಿಸುವುದರೊಳಗಾಗಿ ಮನಸ್ಸನ್ನು ಕಾರಾಂತರದಲ್ಲಿ ಬಿಟ್ಟು ಮೊದಲು ಉಪಕ್ರಮಿಸಿದ ಕೆಲಸದಲ್ಲಿ ಏಕಾಗ್ರವನ್ನು ಕಡಿಮೆ ಮಾಡುವುದು ಇವುಗಳೆಲ್ಲಾ ಪ್ರಯತ್ನಿಸಿದ ಕಾಠ್ಯದಲ್ಲಿ ಸಮಗ್ರವಾದ ಐಕಾ ಗ್ರಕ್ಕೆ ಅವಕಾಶವಿಲ್ಲದೆ ಮಾಡುವುದರಿಂದ ಆ ಕಾರಗಳಿಗುಂಟಾಗತಕ್ಕೆ ಉತ್ತರ ಫಲವು ಅತೃಪ್ತಿಕರವಾಗಿ ಆಗುವುದರಲ್ಲಿ ಸಂಶಯವಿಲ್ಲ. ಲೋಕ ದಲ್ಲಿ ಅನೇಕ ವಿದ್ಯಾರ್ಥಿಗಳು ಅನೇಕ ಭಾಗಗಳಲ್ಲಿ ಪಂಡಿತ್ಯವನ್ನು ಸಂಪಾ