ಪುಟ:ಅರ್ಥಸಾಧನ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೂರಾಪರಜ್ಞತೆ YYYYYYYYYYYYY ದಿಸಬೇಕೆಂದು ಚಾಂಚಲ್ಯದಿಂದ ಅನೇಕ ಮಾರ್ಗಗಳಲ್ಲಿ ಪ್ರವರ್ತಿಸಿ ಬಂದ ರಲ್ಲಾದರೂ ಸಮಗ್ರವಾದ ಶಕ್ತಿಯನ್ನೂ ಅರ್ಥಪತ್ತಿಗೆ ಸಾಧಕವಾದ ಯೋಗ್ಯತೆಯನ್ನೂ ಹೊಂದದೆ ಹೋಗುವರು. ಧನಾರ್ಥಿಗಳಾದ ಅನೇಕರು ಹೀಗೆಯೇ ಯಾವದಾದರೂ ಒಂದು ವೃತ್ತಿಯಲ್ಲಿ ರೂಢಮಲವಾದ ಜ್ಞಾನ ವನ್ನು ಸಂಪಾದಿಸಿಕೊಳ್ಳದೆ ಚಪಲಚಿತ್ತತೆಯಿಂದ ಅನೇಕ ವೃತ್ತಿಗಳನ್ನವ ಲಂಬಿಸಿ ಬಂದರಲ್ಲಾದರೂ ಪರಿಣತೆಯನ್ನು ಹೊಂದದೆ ಭಗ್ನ ಮನೋರಥ ರಾಗುವರು. ಆದುದರಿಂದ ಪುರುಷಾರ್ಥಗಳಲ್ಲಿ ಯಾವುದನ್ನು ಹೊಂದಬೇ ಕಾದರೂ ಯೋಚನೆಯಿಲ್ಲದೆ ಅನೇಕ ಮುಖವಾಗಿ ಹೊರಡಕೂಡದು, ಚೆನ್ನಾಗಿ ವಿಮರ್ಶೆ ಮಾಡಿ ತನ್ನ ಶಕ್ತಿಗೂ ಬುದ್ದಿಗೊ ಅನುರೂಪವಾದ ವೃತ್ತಿಯನ್ನು ಗೊತ್ತು ಮಾಡಿಕೊಂಡು ಅದನ್ನು ಎಡೆಬಿಡದೆ ಐಕಾಗ್ರದಿಂದ ಆಚರಿಸುತ್ತಾ ಬರಬೇಕು. ಹೀಗೆ ಮಾಡಿದ ಕೆಲಸವು ಫಲದಾಯಕ ವಾಗುವುದು. ಪೂರಾಪರತೆ 3 ಕಿಂ ನು ಮೇ ಸಾದಿದಂ ಕೃತ್ವಾ ಕಿಂ ನು ಮೇ ಸಾದಕುಲ್ವತಃ | ಇತಿ ನಿಶ್ಚಿತ ಮನಸಾ ಪ್ರಾಜ್ಞಃ ಕುರೀತ ವಾ ನ ವಾ || ಧನಾರ್ಜನೆಗೂ, ಧನ ರಕ್ಷಣೆಗೂ ಪೂಾಪರಗಳನ್ನು ಯೋಚಿಸಿ ಕೆಲಸಮಾಡುವುದು ಅತ್ಯಾವಶ್ಯಕವಾದದ್ದು. ಪೂರಾಪರ ಯೋಚನೆಗಳಿಲ್ಲದೆ ಮಾಡಿದ ಕೆಲಸಗಳು ಫಲದಾಯಕವಾಗುವುದು ಅಪೂರ್ವ, ಪ್ರಾಯಶಃ ನಾವು ಉಪಕ್ರಮಿಸತಕ್ಕೆ ಕಾರಗಳಿಗೆ ಏನೇನು ಸಂಭವಿಸಬಹುದಾಗಿರು ವುದೋ ಅವುಗಳನ್ನು ಕಾಲ ದೇಶ ವರ್ತಮಾನಗಳ ಸಹಾಯದಿಂದ ತಿಳಿದು ಕೊಂಡು ಅದಕ್ಕೆ ಪ್ರತಿಕೂಲವಾದ ಸಂದರ್ಭಗಳುಂಟಾಗುವ ಪಕ್ಷದಲ್ಲಿ ಅವುಗಳ ಪರಿಹಾರಕ್ಕಾಗಿ ಮಾಡಬೇಕಾದ ಪ್ರಯತ್ನಗಳನ್ನು ಮಾಡುವುದ