ಪುಟ:ಅರ್ಥಸಾಧನ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ho ಅರ್ಧಸಾಧನೆ ವಾಗಿ ತನಗ ಈ ದಿವಸ ಬಂದಹಾಗಾಯಿತೆಂದು ಭಾವಿಸಿಕೊಂಡು, ಈ ತಂತ) ವನ್ನು ಮಾಡಿದ ಸಾಮಂತರಾಜನನ್ನು ಹಿಡಿದು ದಂಡಿಸಿ, ಧನದ ಆಸೆಗೆ ಒಳ ಪಟ್ಟ ನಾಪಿತನನ್ನು ಗಡೀಪಾರುಮಾಡಿಸಿದನು. ಯೋಜಿಸಿ ಕೆಲಸಗಳನ್ನು ಮಾಡುವುದರಿಂದ ವಿಸತ್ತರಂಪರೆಗಳು ತಪ್ಪುವುವಲ್ಲದೆ ವಿಶೇಷವಾಗಿ ಲಾಭವೂ ಆಗುವುದು. ದ್ರವ್ಯದ ಆರ್ಜನೆ ಯನ್ನೂ ಆಮೇಲೆ ಅದರ ರಕ್ಷಣೆಯನ್ನೂ ಮಾಡತಕ್ಕವರು ಪರಿಣಾಮ ದಲ್ಲುಂಟಾಗತಕ್ಕ ಲಾಭ ನಷ್ಟಗಳನ್ನು ಪೂರ್ವಭಾವಿಯಾಗಿಯೇ ಯೋಜಿ ಸುವುದು ಅತ್ಯಂತ ಆವಶ್ಯಕವಾದದ್ದು ಅ ನಾ ಲಸ್ಯ . ಆಲಸ್ಯಂ ಯದಿ ನ ಭವೇಜಗನರ್ಧ ಕೊ ನ ಸ್ಯಾಹು ಧನಕೆ ಬಹುಶ್ರುತೋ ವಾ | ಆಲಸ್ಯಾದಿಯಮವನಿಸ್ಸಸಾಗರಾನಾ ಸಂಪೂರ್ಣಾ ನರಸಶುಭಿಕ್ಷ ನಿರ್ಧನೈಶ್ಚ || ಮಾಡಬೇಕಾದ ಕೆಲಸಗಳನ್ನು ಆಲಸ್ಯಪಡದೆ ಸರಿಯಾದ ಕಾಲದಲ್ಲಿ ಮಾಡುವುದು ಧನಾರ್ಜನೆಗೂ ಧನರಕ್ಷಣೆಗೂ ಅತ್ಯಾವಶ್ಯಕವಾದದ್ದು ಕೃಷಿ, ವಾಣಿಜ್ಯ, ವಿದ್ಯಾರ್ಜನೆ ಮೊದಲಾದುವುಗಳಲ್ಲೆಲ್ಲಾ ಅಲಸ್ಯಮಾಡಿದರೆ ದುರ್ನಿವಾರವಾದ ತೊಂದರೆಗಳು ಬರುವುದು ಅನುಭವಸಿದ್ಧವಾಗಿಯೇ ಇದೆ. ಹದವಾದ ಮಳಯಾದಾಗ ಉಳುವುದು, ಬಿತ್ತುವುದು, ಹರಗಣೆಹೊಡೆಯು ವುದು, ಕಳೆಕೀಳುವುದು, ಕುಯಿಲಿಗೆ ಬಂಗಾಗೆ ಹದವರಿತು ಕುಂಯ್ಯುವುದು ಇವೇಮೊದಲಾದ ಕೆಲಸಗಳಲ್ಲಿ ಆಲಸ್ಯಪಡುವವರಿಗೆ ವ್ಯವಸಾಯದ ಫಲವು ಕೈಗೂಡುವುದೆ ? ಧಾನ್ಯ ಜವುಳಿ ಮೊದಲಾದ ವ್ಯಾಪಾರದ ಸರಕುಗಳನ್ನು