ಪುಟ:ಅರ್ಥಸಾಧನ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನಾಲಸ್ಯ ( ) fhYYYY

  1. k

32 ಕೊಂಡುಕೊಳ್ಳುವುದರಲ್ಲೂ ಕೊಡುವುದರಲ್ಲಿಯ ಪೂರ್ವಾಪರಜ್ಞತೆಯಿ ಅದೆ ಆಲಸ್ಯಪಡುವ ವ್ಯಾಪಾರಗಾರರಿಗೆ ಸರಿಯಾದ ಲಾಭ ಬರುವುದೆ ? ಓದುವುದು ಬರೆಯುವುದು ಮೊದಲಾದುವುಗಳಲ್ಲಿ ಕಾಲದೇಶಗಳ ನಡೆವ ಆಕೆಗಳನ್ನು ನೋಡಿಕೊಂಡು ತಿಳಿವಳಿಕೆಯಿಂದ ನಡೆಯದೆ ಆಲಸ್ಯಪಡುವ ವಿದ್ಯಾರ್ಥಿಗಳಿಗೆ ವಿದ್ಯೆ ಬರುವದೆ ? ಹೀಗೆ ಆಲಸ್ಯ ಪಡುವವರಿಗೆ ಸಮಸ್ತ ಕಾರಗಳಲ್ಲೂ ನಷ್ಟವುಂಟಾಗಿಯೇ ಆಗುವುದು, ಆಲಸ್ಯದಿಂದ ಅಮೃತವೂ ಕೂಡ ವಿಷವಾಗುವುದೆಂಬುದು ಅನುಭವ ಸಿದ್ದವಾದ ಮಾತು. ಹೀಗಿದ್ದರೂ ಅನೇಕರು “ ಸ್ವಲ್ಪ ಹೊತ್ತಾದಮೇಲೆ ಮಾಡೋಣ, ನಾಳೆ ಮಾಡೋಣ ” ಎಂದು, ಮಾಡತಕ್ಕ ಕೆಲಸಗಳ ಯೋಚ ನೆಯೇ ಇಲ್ಲದೆ ಕಾಲಹರಣಮಾಡುವರ. ಇದು ಯುಕ್ತವಲ್ಲ. ಮಾಡತಕ್ಕ ಕೆಲಸಗಳನ್ನು ಸರಿಯಾದ ಕಾಲದಲ್ಲಿ ಮಾಡಿ, ಪ್ರಾರಂಭಿಸಿದ ಕೆಲಸ ಮುಗಿದ ಮೇಲೆ ಉಳಿದ ವಿರಾವ ಕಾಲದಲ್ಲಿ ಇಷ್ಟಬಂದಂತೆ ನಡೆಯುವುದುತ್ತಮವು. ಮಾಡತಕ್ಕೆ ಕೆಲಸಗಳಲ್ಲಿ ಯಾವದು ಪ್ರಯೋಜನಕರವಾಗಿರುವುದೋ ಅದನ್ನು ಮನಃಪೂರ್ವಕವಾಗಿ ಮಾಡದಿದ್ದರೆ ಅದರ ಫಲವು ಸಿಕ್ಕುವುದಿಲ್ಲ. ಪ್ರಾರಂಭಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡತಕ್ಕವರು ಪ್ರಯೋಜನ ವನ್ನು ಹೊಂದಿ ಐಶ್ಚರವಂತರಾಗುತ್ತಾರೆ ತಾವು ಮಾಡತಕ್ಕೆ ಕೆಲಸದ ಸಂಪೂಣ ಫಲವನ್ನು ಪಡೆಯಬೇಕೆಂಬ ಕುತೂಹಲವುಳ್ಳವರಿಗೆ ಕೆಲಸದ ಮೇಲೆ ನಿರಂತರ ದೃಷ್ಟಿಯ ಜಾಗರೂಕತೆಯ ಇದ್ದೇ ಇರಬೇಕು,