ಪುಟ:ಅರ್ಥಸಾಧನ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧. ಸ ತ - ಸತ್ಯೇನ ಪ್ರಾಪ್ಯತೇ ಲಕ್ಷ್ಮಿ ಸತ್ಯೇನ ಪ್ರಾಪ್ಯತೇ ಸುಖಂ || ಸತ್ಯೇನ ಪ್ರಾಪ್ಯತೇ ಸ್ವರ್ಗ ಸತ್ಯಾನ್ನಾ ಮಹತ್ತರಂ || ಸತ್ಯವು ಪರಬ್ರಹ್ಮ ಸ್ವರೂಪವು ಅದರಲ್ಲಿ ಸಮಸ್ತಧರ್ಮಗಳ ಅಡಕವಾಗಿರುವವು. ಸತ್ಯವೇ ನಿತ್ಯವಾದ ವೇದಗಳು ಅದರಿಂದ ಉತ್ತಮ ಲೋಕವು ಹೊಂದಲ್ಪಡುತ್ತದೆ. ಸತ್ಯವನ್ನವಲಂಬಿಸಿದರೆ ಪರಬ್ರಹ್ಮನನ್ನು ಅವಲಂಬಿಸಿದಂತೆ ರು, ಸಕಲವೇದಗಳನ್ನೂ ಪಠನೆಮಾಡಿ ಅವುಗಳ ಅರ್ಥ ವನ್ನು ತಿಳಿದು ವೇದೋಕ್ಕೆಧರಗಳನ್ನೆಲ್ಲ ಆಚರಿಸಿದಂತೆ ಆಗುವುದು. ಸತ್ಯವನ್ನು ಬಿಟ್ಟರೆ ಈ ಮೂರನ್ನೂ ಪರಿತ್ಯಜಿಸಿದಂತಾಗುವುದಾದಕಾರಣ ಸತ್ಯವು ಸರೋವರ ಸಾಧಾರಣವಾದ ಧರವಾಗಿರುವುದು. ಸತ್ಪುರುಷರಲ್ಲಿ ಸತ್ಯವು ಸ್ಥಿರವಾಗಿಯೂ ನಿತ್ಯವಾಗಿಯೂ ಇರುವುದು. ಸತ್ಯದ ಮಹಿಮೆ ಯನ್ನು ಕಂಡವರೇ ಇಲ್ಲ. ಲೋಕದಲ್ಲಿ ಸತ್ಯಕ್ಕೆ ಸರಿಯಾದ ಮತ್ತೊಂದು ಧಠ್ಯವಿಲ್ಲ. ಸಾವಿರ ಅಶ್ವಮೇಧಯಜ್ಞಗಳ ಫಲಗಳನ್ನೂ ಸತ್ಯವನ್ನೂ ತಕ್ಕಡಿಯಲ್ಲಿ ಹಾಕಿ ತೂಗಿದಾಗ ಸತ್ಯವೇ ಹೆಚ್ಚು ಭಾರವೊಳ್ಳುದಾಗಿ ಕಾಣ ಬಂದಿತೆಂದು ಪುರಾಣಗಳಲ್ಲಿ ಪ್ರಸಿದ್ದವಾಗಿದೆ. ಸತ್ಯವು ಅತ್ಯಂತಪ್ರಧಾನ ವಾದುದೆಂದು ನಿಷ್ಕರ್ಷೆಮಾಡಲ್ಪಟ್ಟಿದೆ. ವೇದಗಳಲ್ಲಿ ಸತ್ಯವನ್ನೇ ನುಡಿಯ ಬೇಕೆಂದು ಹೇಳಲ್ಪಟ್ಟಿದೆ. ಸತ್ಯವಂತನ ಮಾತನ್ನು ಎಲ್ಲರೂ ಗೌರವಿಸು ವರು. ಸತ್ಯವು ಪರಬ್ರಹ್ಮ ಸ್ವರೂಪವೆಂದು ಗೊತ್ತಾಗಿರುವುದರಿಂದಲೇ ಸತ್ಕಾರದವರು ವಿಚಾರಣೆಮಾಡುವಾಗೆ ಸತ್ಯವಾಗಿ ಹೇಳುವೆನೆಂದು ಮೊದಲು ಹೇಳಿಸಿ, ಅನಂತರ ವಾಸ್ಕೋಲವನ್ನು ತೆಗೆದುಕೊಳ್ಳುವರು. ಪೂರಾಪರ ಜ್ಞಾನವಿಲ್ಲದವರು ಅಲ್ಪ ಲಾಭದಮೇಲಣ ದೃಷ್ಟಿಯಿಂದ ಸತ್ಯವನ್ನು ಬಿಟ್ಟು ನಡೆದು ಕಾಲಕ್ರಮವಾಗಿ ನಿಮ್ಮ ತಿಕರಾಗುತ್ತಲಿರುವುದು ಅನುಭವಸಿದ್ಧವಾ OYO