ಪುಟ:ಅರ್ಥಸಾಧನ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ ಲಂರ್ಡಪಟ್ಟಣದಲ್ಲಿ ಇದ್ದಾರೆ. ಅವರಿಗೆ ಬಂದು ಮಿನೀಟಿಗೆ ಒಂದು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದೆ ಆದಾಯ ಬರುತ್ತದೆ. ಸತ್ಯವಾಗಿ ನಡೆ ಯತಕ್ಕವರೆಲ್ಲರೂ ಸ್ವಲ್ಪ ಹೆಚ್ಚು ಕಡಿಮೆಯಾಗಿ ಈರೀತಿ ವೃದ್ಧಿಗೆ ಬರು ವುದರಲ್ಲಿ ಸಂಶಯವಿಲ್ಲ. ಆದುದರಿಂದ ಧನಾರ್ಜನೆ ಧನರಕ್ಷಣೆಗಳನ್ನು ಮಾಡಬೇಕೆಂಬ ಕುತೂಹಲವುಳ್ಳವರು ಸತ್ಯವನ್ನು ಎಂದಿಗೂ ಬಿಡ ಬಾರದು. ಅ ನ ತ - ಅಸತ್ಯಮಪ್ರತ್ಯಯಮೂಲಕಾರಣಂ ಕುವಾಸನಾಸದ ಸಮೃದ್ಧಿ ವಾರಣಂ | ವಿಪನ್ನಿ ದಾನಂ ಪರವಂಚನೂರ್ಜಿತಂ ಕೃತಾಪರಾಧ ಕೃತಿಭಿರ್ಸಿವಜಿತಂ || ವಾಸ್ತವವನ್ನು ಹೇಳದಿರುವುದೇ ಅನೃತ (ಸುಳ್ಳು) ವೆನ್ನಿಸಿಕೊಳ್ಳು ವುದು. ಸುಳ್ಳಾಡುವುದು ಬಹಳ ಕೆಟ್ಟದ್ದು. ಇದು ಮನುಷ್ಯನ ನಂಬಿಕೆ ಯನ್ನು ಕೆಡಿಸಿಬಿಡುವುದು. ಸುಳ್ಳು ಹೇಳುವ ದುರಭ್ಯಾಸವು ನೆಲೆಗೊಂಡು ಬಿಟ್ಟರೆ, ಆಮೇಲೆ ಪ್ರತಿಯೊಂದು ವಿಷಯದಲ್ಲಿ ಸುಳ್ಳು ನೆಪಗಳನ್ನು ಹೇಳುವುದು ಬಳಕೆಯಾಗುವುದು. ಒಂದುಸಲ ಇಂಥವನು ಸುಳ್ಳು ನೆಪಗಳನ್ನು ಹೇಳುತ್ತಾನೆಂದು ಜನಗಳಿಗೆ ತಿಳಿದರೆ ಆಮೇಲೆ ಅವನನ್ನು ಯಾರೂ ನಂಬು ವುದಿಲ್ಲ. ಕೊನೆಗೆ ಇದರಿಂದ ಅವನ ಹೆಸರುವಾಸಿಯು ಕೆಡುವುದು. ಅನೃತ ವಾದಿಯನ್ನು ಕಂಡರೆ ಜನರು ಸರ್ಪವನ್ನು ಕಂಡಂತೆ ಭಯಪಡುತ್ತಾರೆ. ವೇದಗಳಲ್ಲೂ ಕೂಡ ಸುಳ್ಳನ್ನಾಡಬಾರದೆಂದು ವಿಧಿಯಿರುವುದು. ಇದಲ್ಲದೆ ಕೆಲವುಜನ ಸಾಲಗಾರರು, ಜೂಜುಗಾರರು, ಅಪೇಯಪಾನ ಅಗಮಾಗಮ