ಪುಟ:ಅರ್ಥಸಾಧನ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ದುಷ್ಟಸ್ವಭಾವಗಳೆಲ್ಲವೂ ನಮ್ಮಲ್ಲಿ ಕ್ರಮವಾಗಿ ಬಂದು ನೆಲೆಗೊ ಳ್ಳುವುವು. ದುರಾರ್ಗರ ಸಹವಾಸವನ್ನು ಮಾಡತಕ್ಕವರು, ರಾತ್ರಿ ನೀಡಿದ ಭಾವಿಗೆ ಹಗಲು ಬೀಳತಕ್ಕವರ ಹಾಗೆಂದು ಧಾರಾಳವಾಗಿ ಹೇಳಬಹು ಧಾಗಿರುತ್ತದೆ. ಆದುದರಿಂದ ಹಿರಿಯರೇ ಆಗಲಿ, ನೆರೆಹೊರೆಯವರೇ ಆಗಲಿ, ಅಥವಾ ನಮ್ಮ ಗೌರವಕ್ಕೆ ಪಾತ್ರರಾದ ಯಾರೇ ಆಗಲಿ ಮಾಡಬಾರದ ಕೆಲ ಸಗಳನ್ನು ಮಾಡುತ್ತಿದ್ದರೆ, ದೊಡ್ಡವರು ಮಾಡುತ್ತಾರೆಂದು ನಾವು ಅವುಗ ಳನ್ನು ಅವಲಂಬಿಸಬಾರದು ಅನೆಕಸದ್ದು ಆಗಳುಳ್ಳವರಲ್ಲಿ ಕೆಲವು ದುರ್ಗುಳಿ ಗಳಿದ್ದರೆ ಅವುಗಳನ್ನು ಬಿಟ್ಟು ಅವರ ಸದ್ದು ಣಗಳನ್ನು ಮಾತ್ರ ನಾವು ಅವ ಲಂಬಿಸಬೇಕು. ಸಹವಾಸದೋಷದಿಂದ ಅನೇಕರಿಗೆ ನಸ್ಯಹಾಕುವುದು, ಹೊಗೆಬತ್ತಿ ಸೇದುವುದು, ಅಗಮ್ಯಾಗಮನಗಳನ್ನು ಮಾಡುವುದು, ಅಭಕ್ಷ ಭಕ್ಷಣಗಳನ್ನು ಮಾಡುವುದು ಇವುಗಳೆಲ್ಲಾ ಪ್ರಾಪ್ತವಾಗುತ್ತವೆ ಇವು ಅಯೋಗ್ಯವಾದುವುಗಳ೦ದೂ ನಾಠಕರವಾದುವುಗಳೆ೦ದೂ ತಿಳಿದಿದ್ದರೂ ಅಭ್ಯಾಸಬಲದಿಂದ ಅವರಿಗೆ ಇವುಗಳನ್ನು ಬಿಡುವುದಕ್ಕೆ ಆಗುವುದಿಲ್ಲ ಆದುದರಿಂದ ನಾವು ನಡೆಯತಕ್ಕ ನಡೆವಳಿಕೆಗಳಲ್ಲಿ ಯಾವುವು ಆಚ ರಣೆಗೆ ಅರ್ಹವೆಂದು ಅನುಭಸಿದ್ಧವಾಗಿವೆಯೋ ಅವುಗಳ ಅವಲಂಬನೀ ಯವಾದುವುಗಳು. ಹೇಗೆಂದರೆ,.-ಭೋಜನಮಾಡುವುದು ಅತ್ಯಂತ ಅವಶ್ಯ ಕವಾದದ್ದು. ಭೋಜನವಾಡದಿದ್ದರೆ ಬದುಕುವುದಕ್ಕೆ ಆಗುವುದಿಲ್ಲ. ನಸ್ಯ ಬೀಡಿ ಹೊಗೇಬತ್ತಿ ಇವುಗಳನ್ನು ಸೇವಿಸತಕ್ಕದ್ದು ಭೋಜನದಷ್ಟು ಆವಶ್ಯಕವಾದುದಲ್ಲ; ಮತ್ತು ಇವುಗಳಿಂದ ಅನೇಕ ಕೇಡುಗಳು ಸಂಭವಿಸು ವುವು. ನೀರನ್ನು ಕುಡಿಯದಿದ್ದರೆ ದಾಹಶಾಂತಿಯಾಗುವುದಿಲ್ಲ ಸಾರಾಯಿ ಮೊದಲಾದುವುಗಳನ್ನು ಸೇವಿಸತಕ್ಕದ್ದು ನೀರಿನಷ್ಟು ಆವಶ್ಯಕವಾದುದಲ್ಲ. ಇದೇರೀತಿಯಲ್ಲಿ ದುರ್ವಾಪರಗಳೆಲ್ಲಾ ಆವಶ್ಯಕಗಳಲ್ಲವೆಂದೂ ಅನೇಕ ಕೆಡುಕುಗಳನ್ನುಂಟುಮಾಡುವುವೆಂದೂ ಚೆನ್ನಾಗಿ ಗೊತ್ತಾಗುವುದು, ಆದ