ಪುಟ:ಅರ್ಥಸಾಧನ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧ ಮಕ್ಕಾದೆ ಕಾರಣ ಇಷ್ಟಾರ್ಥಗಳನ್ನು ಸಾಧಿಸಬೇಕೆಂಬ ಜನರಿಗೆ ದುರ್ವ್ಯಾಪುರ ಗಳಲ್ಲಿ ಪರಾಬ್ಬುಗತೆಯು ಅತ್ಯಾವಶ್ಯಕವಾದದ್ದು. ಮ ರಾ ದ. ಅಪಕಾಪಿ ಲೋಕೇ ಸ್ಯಾತ್ ಮಾನನಾದುಪಕಾರಕಃ | ತಸ್ಮಾದ್ವಶ್ಯಕರಂ ನಿತ್ಯಂ ಸದ್ದಿಸ್ಸಮ್ಮಾನನಂ ತಂ || ಜನರ ತಾರತಮ್ಯಗಳನ್ನರಿತು ವಂದನೆಗಳನ್ನು ಮಾಡುವುದು, ಪ್ರತ್ಯು ತಾನಪೂರಕವಾಗಿ ಆಸನಾದಿಗಳನ್ನು ಕೊಡುವುದು, ಉಪಚಾರೋಗ ೪ಂದ ಮಾತನಾಡಿಸುವುದು ಇವೆಮೊದಲಾದ ಕ್ರಮಗಳನ್ನು ಅನುಸರಿಸು ವುದಕ್ಕೆ ಮುರಾದೆಯೆಂಬುದಾಗಿ ಹೆಸರು. ಪ್ರಪಂಚದಲ್ಲಿ ಆಬಾಲವೃದ್ದ ರಿಗೂ ಸ್ವಾಭಿಮಾನವಿರುವಕಾರಣ ಮರಾದೆಗೆ ವಶ್ಯರಾಗದಿರುವವರೇ ಅಪೂರ, ಮಯ್ಯಾದೆಮಾಡುವುದರಲ್ಲಿ ಗೌರವಲಾಭವಗಳನ್ನೂ ಕಾಲಾ ಕಾಲಗಳನ್ನೂ ಸಂದರ್ಭಗಳನ್ನೂ ಅರಿಯದೆ ಬಾರಿಬಾರಿಗೂ ಮಾಡಿದರೆ ಅದರ ಗಣ್ಯತೆಯು ತಪ್ಪುವುದು. ತಂದೆಯು ಮಗನಿಗೂ, ಅತ್ತೆಯು ಸೊಸೆಗೂ, ಗುರುವು ಶಿಷ್ಯನಿಗೂ, ಧಣಿಯು ತನ್ನ ಚಾಕರನಿಗೂ ತಾರತ ಮ್ಯಗಳನ್ನೂ ಕಾಲಾಕಾಲಗಳನ್ನೂ ಅರಿತು ಉಪಚಾರೋಕ್ತಿಗಳಿಂದ ಎಷ್ಟು ಶ್ರಮಕರವಾದ ಕೆಲಸಗಳನ್ನು ಹೇಳಿದರೂ ಅವರು ಅವುಗಳನ್ನು ಶ್ರಮ ವೆಂದು ಭಾವಿಸದೆ ಉಪಚಾರೋಕ್ತಿರೂಪವಾದ ಮರಾದೆಗೆ ತಾವು ಭಾಗಿ ಗಳಾಗಬೇಕೆಂಬ ಅಭಿಲಾಷೆಯಿಂದ ಆ ಕೆಲಸಗಳನ್ನು ಮನಃಪೂರಕವಾಗಿ ನೆರವೇರಿಸುವರು. ಹಾಗದೆ ಕಠಿನೋಕಿಯಿಂದ ತಂದೆಯು ಮಗನಿಗೂ, ಅತ್ತೆಯು ಸೊಸೆಗೂ, ಗುರುವು ಶಿಷ್ಯನಿಗೂ, ಧಣಿಯು ತನ್ನ ಚಾಕರನಿಗೂ ಸಾಧಾರಣವಾದ ಕೆಲಸಗಳನ್ನು ಹೇಳಿದರೂ, ಅದನ್ನುಲ್ಲಂಘಿಸಬೇಕೆಂಬ