ಪುಟ:ಅರ್ಥಸಾಧನ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋಕವ್ಯವಹಾರ ಯೊಬ್ಬನೂ ತನ್ನ ಕೆಲಸಕ್ಕೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರವ ಲ್ಲದೆ ಎಲ್ಲಾ ಸಂಗತಿಗಳನ್ನೂ ಸಾಧಾರಣವಾಗಿ ತಿಳಿದುಕೊಂಡಿರಬೇಕು' ಹಾಗೆ ತಿಳಿದುಕೊಂಡಿದ್ದರೆ ಅದು ವ್ಯಕ್ತವಾಗುವುದಿಲ್ಲ. ಪ್ರತಿಯೊಬ್ಬನೂ ತಾನು ಅವಲಂಬಿಸಿದ ವೃತ್ತಿಯಜೆತೆಗೆ ಇನ್ನು ಕೆಲವು ವೃತ್ತಿಗಳ ಸಂಗತಿ ಗಳನ್ನೂ ತಿಳಿದುಕೊಂಡಿರುವುದು ಉತ್ತಮ. ಒಂದುವೃತ್ತಿಗೆ ಸೇರಿದವರು ಇತರ ವೃತ್ತಿಗೆ ಸೇರಿದ ಜನರೊಡನೆ ಕೊಡೋಣ ತೆಗೆದುಕೊಳ್ಳೋಣ ಮೊದಲಾದ ವ್ಯವಹಾರಗಳಲ್ಲಿ ಸೇರಬೇಕಾಗುತ್ತದೆ. ಅಂಥ ಸಂದರ್ಭಗ ಳಲ್ಲಿ ಇತರ ವೃತ್ತಿಗಳ ವಿಷಯವಾಗಿ ಪೂರಾಪರಜ್ಞಾನವು ಆವಶ್ಯಕವಾ ಗುವುದು. ಅಂಥ ತಿಳಿವಳಿಕೆಯಿಲ್ಲದಿದ್ದರೆ ಮೋಸಹೋಗುವುದೂ ಉಂಟು. ಪುಸ್ತಕಗಳನ್ನು ಓದಿ ತಿಳಿದುಕೊಳ್ಳತಕ್ಕ ವಿಷಯಗಳ ಜೊತೆಗೆ ಪಂಡಿತಸಂಭಾಷಣೆ ಮೊದಲಾದುವುಗಳಿಂದ ಬೇರೆಬೇರೆ ವೃತ್ತಿಗಳ ಮರಗೆ ಗಳನ್ನೂ ತಿಳಿದುಕೊಂಡಿರಬೇಕು ಹೀಗೆ ಬೇರೆಬೇರೆ ವೃತ್ತಿಗಳ ಮರಗ ಳನ್ನು ತಿಳಿದುಕೊಂಡಿದ್ದರೆ ಕೆಲವು ಸಂದರ್ಭಗಳಲ್ಲಿ ತಾವು ಅವಲಂಬಿಸಿ ರುವ ವೃತ್ತಿಗಿಂತಲೂ ಮತ್ತಾವುದಾದರೂ ಒಂದು ಅಭ್ಯಸ್ತವಾದ ವೃತಿ ಯಲ್ಲಿ ಹೆಚ್ಚಾಗಿ ಫಲ ಬರುವುದಾಗಿ ತೋರಿದ ಪಕ್ಷದಲ್ಲಿ ಅದನ್ನು ಅವಲಂ ಬಿಸುವುದಕ್ಕೆ ಅವಕಾಶವಾಗುತ್ತದೆ. ಆದುದರಿಂದ ಒಂದೇ ವೃತ್ತಿಯಲ್ಲಿ ಪರಿ ಚಯವಿರುವುದಕ್ಕಿಂತ ತಾನು ಅವಲಂಬಿಸಿರುವ ವೃತ್ತಿಯ ಜತೆಗೆ ತನಗೆ ಸಾಧ್ಯವಾಗಬಹುದಾದ ಮತ್ತೆ ಕೆಲವು ವೃತ್ತಿಗಳ ಮರಗಳನ್ನೂ ತಿಳಿದು ಕೊಂಡು ಸಾಧ್ಯವಾದ ಮಟ್ಟಿಗೆ ಲೋಕವ್ಯವಹಾರಜ್ಞನಾಗಿರಬೇಕು.