ಪುಟ:ಅರ್ಥಸಾಧನ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ರೂ ತ ದ್ಯೋತಾದನರ್ಥಾಃ ಸಕಲಾತಿ ಮಾನಹಾನಿಶ್ಚ ಸವ್ರತಂ | ದ್ಯೋತಾದ್ಧ ರಸ್ತಥಾರ್ಧಶ್ಚ ಕಾಮಶ್ಚ ಪರಿಹೀಯತೇ . ಲೋಕದಲ್ಲಿ ಮ್ಯೂತವು ಬಹಳ ಕೆಟ್ಟದ್ದು. 'ಕೆಲವರು ಮನಸ್ಸಿಗೆ ಜುಗುಪ್ಪೆಯುಂಟಾದಾಗ ಇಸ್ಪೀಟು ಗಂಜೀವು ಪಗಡೆ ಮೊದಲಾದ ಆಟಗಳನ್ನಾ ಡಿದರೆ ಆ ಜುಗುಪ್ಪೆಯು ತಪ್ಪುವುದೆಂದು ಭಾವಿಸಿರುವರು. ಈ ಭಾವನೆಯು ಕೂಡ ಬಹಳ ಅನರ್ಥಕಾರಿಯಾದದ್ದು. ಏಕೆಂದರೆ,-ಜೂಜೆಂಬ `ಮಾಯಾ ಪಾಶಕೊಳಗಾದವರು ಅದರಿಂದ ಬಿಡುಗಡೆಯಾಗಿ ಬರುವುದು ಬಹಳ 'ಅಸಾ ಧ್ಯವು. ಜೂಜಾಡುವುದಕ್ಕೆ ಬಾರದಿರುವವರು ಪ್ರಾರಂಭದಲ್ಲಿ ಅಭ್ಯಾಸ ಮಾಡುವುದಕ್ಕಾಗಿ ಬರೀಆಟಗಳನ್ನಾಡುತ್ತಾ, ಗೆದ್ದವರು ಸೋತವರಮೇಲೆ ಇಷ್ಟಿಷ್ಟು ತಪ್ಪುಗಳಾದುವೆಂಬುದಾಗಿ ಲೆಕ್ಕವನ್ನು ಹೊರಿಸುತ್ತಿರುವರು. ಹೀಗೆ ಕೆಲವು ದಿನಗಳು ಆಡಿ ಚೆನ್ನಾಗಿ ಆಟದಲ್ಲಿ ಪರಿಶ್ರಮವುಂಟಾದಮೇಲೆ ಬರೀ ಆಟಗಳನ್ನಾಡುವುದರಲ್ಲಿ ಏನು ರುಜೆಯಿರುವುದು ? ಒಂದೊಂದು ಆಟಕ್ಕೆ ಒಂದೊಂದು ಕಾಸನ್ನಾದರೂ ಇಟ್ಟರೆ, ಆಡುವುದರಿಂದ ಉಲ್ಲಾ ಸವೂ ಆಟದಲ್ಲಿ ಶ್ರದ್ಧೆಯ ಉಂಟಾಗುವುವು, ' ಎಂದು ಆರೀತಿ ಏರ್ಪಡಿಸು ವರು, ಈ ಅಭ್ಯಾಸವು ನೆಟ್ಟ ನಂತರ ಇದೇನು ದರಿದ್ರ ? ಒಂದೊಂದು ಕಾನಿನಿಂದ ಆಟದಲ್ಲಿ ಏನು ಆಸಕ್ತಿಯುಂಟಾದೀತು ? ಇನ್ನು ಸ್ವಲ್ಪವಾದರೂ ಹೆಜ್ಜೆ ನಿದರೆ ಆಗ ಆಟದ ರುಚಿಯು ತಿಳಿಯುವುದು,' ಎಂದು ಹೇಳಿ, ಆಟಕ್ಕೆ ಕಾಲಾಣೆಯಂತೆ ಏರ್ಪಡಿಸುವರು. ಹೀಗಾದ ಕೆಲವು ದಿನಗಳಎಳಕ ( ಇದೂ ಆಟಕ್ಕೆ ಲಕ್ಷಣವಲ್ಲ. ಒಳ್ಳೆ ಆಟಗಾರರು ಬಂದು ನೋಡಿದರೆ ಹೀಯಾಳಿ ಸುವಹಾಗೆ ಇದೆಯೇಹೊರತು ಇದು ದೊಡ್ಡ ಆಟಗಾರರಿಗೆ ಯೋಗ್ಯವಾ ಗಿಲ್ಲ,' ಎಂಬುದಾಗಿ ಹೇಳುತ್ತ ಒಂದು ಆಟಕ್ಕೆ ಬಂದಾಣೆಯಿಂದ ಪಾರಂಭಿಸಿ