ಪುಟ:ಅರ್ಥಸಾಧನ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಡರೂ ಅದರಿಂದ ಪುಷ್ಟವಾಗುವ ರೋಗ ಮೊದಲಾದುವುಗಳನ್ನು ತಪ್ಪಿಸಿ ಕೊಳ್ಳಲಾರರು. ಪ್ರಬಲವಾದ ಪುಣ್ಯ ಪಾಪಗಳ ಫಲಗಳನ್ನು ಈ ಲೋಕ ದಲ್ಲಿಯೇ ಅನುಭವಿಸಬೇಕಾಗುತ್ತದೆಂದು ನಮ್ಮ ಹಿರಿಯರು ಹೇಳಿರುವುದ ಕ್ಕನುಸಾರವಾಗಿ, ಪಾಪಕೃತ್ಯವಾದ ಜಾರತ್ನವನ್ನು ಮಾಡತಕ್ಕ ಜನರು ಈ ಮಠ್ಯಲೋಕದಲ್ಲಿಯೇ ಅನಿವರ್ಚನೀಯವಾದ ದುಃಖಗಳನ್ನನುಭವಿಸಿ ಧರೆಸಾಧನೆಗೆ ಸಹಾಯಭೂತವಾದ ದೇಹದಾರ್ಡ್ಯವನ್ನು ಕೂಡ ಕಳೆದುಕೊ ಳ್ಳುವರು. ಈ ದುರಾಚಾರದಿಂದುಂಟಾಗತಕ್ಕ ಶಿಕ್ಷೆಯು ಎಂಥವರಿಗೂ ತಪ್ಪುವದಿಲ್ಲ. - ದೇವತೆಗಳಿಗೆ ಒಡೆಯನಾದ ದೇವೇಂದ್ರನು ಗೌತಮರುವಿಪತ್ನಿಯಾದ ಅಹಲ್ಯಯೊಡನೆ ಜಾರತ್ನವನ್ನು ಮಾಡಿ ಶಾಪಗ್ರಸ್ತನಾಗಿ ಪಡಬಾರದ ಕಷ್ಟ ಗಳನ್ನೆಲ್ಲಾ ಪಟ್ಟು ಅಂಗವಿಕಾರವನ್ನು ಹೊಂದಿ ಅಪಯಶಸ್ಸಿಗೆ ಗುರಿ ಯಾದನು. ರಾಕ್ಷಸರಿಗೆ ಒಡೆಯನಾದ ರಾವಣನು ಸೀತಾಪಹಾರಮಾಡಿದಾಗ “ ಲೋಕದಲ್ಲಿ ಜನರು ತಮ್ಮ ತಮ್ಮ ಹೆಂಡತಿಯರ ಪಾತಿವ್ರತ್ಯ ಸಂ. ಕ್ಷಣೆ ಯಲ್ಲಿ ಹೇಗೆ ಆಸಕ್ತರಾಗಿರುವರೋ ಹಾಗೆಯೇ ಇತರ ಸ್ತ್ರೀಯರ ಪಾತಿ ಇತ್ಯ ರಕ್ಷಣದಲ್ಲೂ ಆಸಕ್ತರಾಗಿರಬೇಕು. ಪರದಾರಾಸಕ್ತಿಗಿಂತ ಬೇರೆ ಶಾಪವಿಲ್ಲ. ಪರಸ್ತ್ರೀಗಮನವು ಯಶಸ್ಸು ಆಯುಸ್ಸು ಧನ ಇವುಗಳನ್ನು ನಾಶಮಾಡುವುದಲ್ಲದೆ ಅತಿಕರವಾದ ನರಕಯಾತನೆಯನ್ನೂ ಉಂಟುಮಾ ಡುವುದು, ” ಎಂದು ಮಾರೀಚ ಜಟಾಯು ವಿಭೀಷಣದಿಗಳು ಹೇಳಿದರು. ಆದರೂ ಅವನು ಅದನ್ನು ಕೇಳದೆಹೋದುದರಿಂದ ಕೊನೆಗೆ ರಾಮನಿಂದ ಹತ ನಾದನು. ರಾವಣನು ಸತ್ತ ಮೇಲೆ ಅವನನ್ನು ಕುರಿತು ಅವನ ಹೆಂಡತಿಯಾದ ಮಂಡೋದರಿಯು “ ನೀನು ಆದಿಯಲ್ಲಿ ಯಾವ ಇಂದ್ರಿಯಗಳನ್ನು ಜಯಿಸಿ ಮೂರುಲೋಕಗಳನ್ನೂ ಕೈವಶಮಾಡಿಕೊಂಡಿದ್ದೆಯೋ ಆ ಇಂದ್ರಿಯ ಯಗಳೇ ಆ ದ್ವೇಷವನ್ನು ಜ್ಞಾಪಕದಲ್ಲಿಟ್ಟು ಕೊಂಡಿದ್ದು ನಿನ್ನನ್ನು ಜಯಿ