ಪುಟ:ಅರ್ಥಸಾಧನ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಗಮಾಗಮನ ಆ ದಿ ಇದುವೋ ಎಂಬಂತೆ ಈಗ ನೀನು ಅದೇಇಂದ್ರಿಯಗಳಿಗೆ ವಶನಾಗಿ ಈ ದು ರ್ದತೆಗೆ ಗುರಿಯಾದೆ, ' ಎಂದು ಪ್ರಲಾಪಿಸಿದಳು. ಇಂದ್ರಿಯನಿಗ್ರಹವಿದ್ದ ರಿಂದ ರಾವಣನಿಗೂ ಇಂಥ ದುರ್ದಕ್ಕೆ ಬಂದಿತು. ದೇವೇಂದ್ರ ರಾವಣರ ಪಾಡೇ ಹೀಗಿರುವಾಗ ಸಾಮಾನ್ಯರಾದ ಮನುಷ್ಯರ ಪಾಡನ್ನು ಹೇಳ ತಕ್ಕದ್ದೇನು ? ಆದರೆ ದೇವೇಂದ್ರ ರಾವಣರಿಗೆ ಆದ ಹಾಗೆ ಮನುಷ್ಯರಾದ ನಮ್ಮ ಗಳಿಗೆ ಆದೀತೇ ಎಂದು ಕೆಲವರು ಭಾವಿಸಬಹುದು ; ಮನುಷ್ಯರಾದ ನಮ್ಮ ಗಳಗೆ ಅವರಿಗಿಂತಲೂ ಹೆಚ್ಚಾಗಿಯೇ ಆಗುವುದು. ಈ ದುಪ್ಪಕೃತ್ಯವನ್ನು ಮಾಡತಕ್ಕಂಥವರಿಗೆ ಕೆಟ್ಟ ರೋಗಗಳಿಂದ ಅಂಗವಿಕಾರಗಳೂ, ರಹಸ್ಯವಾಗಿ ವಿವಿಧವಾದ ಪ್ರಹಾರಗಳ, ಕೊನೆಗೆ ಮರಣವೂ ಸಂಭವಿಸುವುವಲ್ಲದೆ ಈ ಪಾಪಕೃತ್ಯಕ್ಕಾಗಿ ಲೋಕಾಂತರದಲ್ಲಿ ಶಿಕ್ಷೆಯ ತಪ್ಪದೆ ಆಗುವುದು. ಇದಲ್ಲದೆ ವಿವಾಹಕಾಲದಲ್ಲಿ ಕನ್ಯಯ ತಂದೆಯು ವರನನ್ನು ಕುರಿತು * ಮನೋವಾಕ್ಯಾಯಗಳಲ್ಲಿಯೂ ಇವಳನ್ನು ನೀನು ಧರದಲ್ಲಿಯೂ ಅರ್ಥ ದಲ್ಲಿಯ ಕಾಮದಲ್ಲಿಯೇ ಅತಿಕ್ರಮಿಸಕೂಡದು , ' ಎಂದು ಅಗ್ನಿಸಾಕ್ಷಿ ಯಾಗಿ ಹೇಳಿದುದಕ್ಕೆ ನಾನು ಅತಿಕ್ರಮಿಸುವುದಿಲ್ಲವೆಂದು ಪ್ರಮಾಣಮಾಡಿ ಅದನ್ನುಲ್ಲಂಘಿಸುವುದು ಮಹಾಪಾಪವಲ್ಲವೆ? ಈ ಪಾಪಕೃತ್ಯಕ್ಕೆ ಎಂದಿಗೂ ಶಿಕ್ಷೆಯಿಲ್ಲದೆ ಹೋಗುವುದಿಲ್ಲ. ಇದು ಹಾಗಿರಲಿ, ವಿವಾಹವಿಲ್ಲದಿರತಕ್ಕವರು ತಾವು ಇಂಥ ಪ್ರತಿಜ್ಞೆ ಯನ್ನು ಮಾಡಿಲ್ಲ ವಾದಕಾರಣ ತಮ್ಮ ಮನಸ್ಸು ಚಂದಂತ ನಡೆಯಬಹು ದೆಂದು ಭಾವಿಸಬಹುದು ಇದು ದೊಡ್ಡ ತಪ್ಪು, ಬೆತೇಂದ್ರಿಯರಾಗಿ ಸದಾ ಬ್ರಹ್ಮಧಾನೈಕ ಪರಾಯಣರಾಗಿರುವುದಕ್ಕೆ ಶಕ್ತಿಯಿದ್ದರೆ ವಿವಾಹವನ್ನು ಮಾಡಿಕೊಳ್ಳದಿರಬಹುದು. ಆದರೆ ಇಂಥ ಶಕ್ತಿಯು ಬಹಳ ದುಭವ. ಇಂದ್ರಿಯಗ್ರಾಮಗಳು ಪ್ರಾಯಶಃ ಅಜಯ್ಯವಾದುವುಗಳು. ದೇಹವುಷ್ಟಿಯ