ಪುಟ:ಅರ್ಥಸಾಧನ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೇಲುವಿಚಾರಣೆ &A ಅವುಗಳನ್ನೊಳಪಡಿಸಿ, ಅವನಮೇಲೆ ತಾವೂ ನೋಡಿಕೊಳ್ಳುತ್ತಲಿರುವರು. ಹೀಗೆ ಮುಖಂಡರಾಗಿ ನಿಯಮಿಸಲ್ಪಟ್ಟವರು ಎಷ್ಟೇಯೋಗ್ಯರಾಗಿದ್ದರೂ ತಮ್ಮ ಸ್ವಂತಕೆಲಸವನ್ನು ನೋಡುವಷ್ಟು ಶ್ರದ್ದೆಯಿಂದ ಯಜಮಾನನ ಕೆಲಸ ವನ್ನು ನೋಡುವುದು ಅಪೂ, ಪ್ರಾಯಶಃ ಮುಖಂಡರಾದವರು ತಾವು ನೋಡತಕ್ಕೆ ಕೆಲಸಗಳಿಂದ ತಮ್ಮ ಸಂಪಾದನೆಯನ್ನು ನೋಡಿಕೊಂಡು ಯಜ ಮಾನನ ಆಯತಿಯ ವಿಷಯದಲ್ಲಿ ಉದಾಸೀನರಾಗಿರುವವರೇ ಹೆಚ್ಚು. ಇದ ರಿಂದಲೇ ಲೋಕದಲ್ಲಿ “ ತಾನು ಮಾಡುವುದುತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು ” ಎಂಬ ಗಾದೆಯುಂಟಾಗಿದೆ. ಎಲ್ಲರಿಗೂ ತಮ್ಮ ಕೆಲಸವನ್ನು ತಾವೇ ಮಾಡುವುದರಿಂದ ಅವುಗಳ ಪೂರಾ ಪರಸಂದರ್ಭಗಳು ಗೊತ್ತಾಗುವುವು. ಒಂದುವೇಳೆ ಹಿಡಿದ ಕೆಲಸ ಗಳು ಫಲದಾಯಕವಾಗದೆ ಕೆಡುವ ಸಂದರ್ಭ ಬಂದಲ್ಲಿ ಅವುಗಳಿಂದ ನನ್ನ ಸಂಭವಿಸದಿರುವಹಾಗೆ ಯಾವಯಾವ ಕಾಲಗಳಲ್ಲಿ ಏನೇನು ಪ್ರಯತ್ನ ಗಳನ್ನು ಮಾಡಬೇಕೋ ಅವುಗಳನ್ನೆಲ್ಲಾ ನೋಡಿಕೊಂಡು ಮಾಡುವುದಕ್ಕೆ ಯಜಮಾನನಾದವನು ಪ್ರಯತ್ನಿಸುವನು. ಮುಖಂಡನಾದವನು ಯಜ ಮಾನವಂತೆ ಸಂದರ್ಭಸಂಯೋಗಗಳನ್ನು ಅರಿತು ಶ್ರದ್ದೆಯಿಂದ ಕೆಲಸಮಾಡು ವುದು ಅಪೂರ ಆದುದರಿಂದ ತಮ್ಮ ಕೆಲಸಗಳನ್ನು ಇತರರಿಂದ ಮಾಡಿಸ ಬೇಕಾದ ಸಂದರ್ಭವಿರತಕ್ಕವರು ಹಿಡಿದ ಕೆಲಸಗಳ ಪೂರಾಪರಸಂದರ್ಭ ಗಳನ್ನು ಆಗಾಗ ಶ್ರದ್ಧೆಯಿಂದ ಪರಿಶೀಲಿಸುತ್ತ ಮಧ್ಯದಲ್ಲಿ ಸಂಭವಿಸುವ ದೋಷಗಳಿಗೆ ಜಾಗ್ರತೆಯಾಗಿ ತಕ್ಕ ಪ್ರತಿಕ್ರಿಯೆಗಳನ್ನು ಮಾಡುತ್ತ ಮೇಲು ವಿಚಾರಣೆಯನ್ನು ಇಟ್ಟುಕೊಂಡು ವೃದ್ಧಿಗೆಬರುವರು.