ಪುಟ:ಅರ್ಥಸಾಧನ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಂದೆ ತಾಯಿಗಳ ಕರ್ತವ್ಯ. ಮಾತಾ ಶತ್ರುಃ ಪಿತಾ ವೈರೀ ಯೇನ ಬಾಲೋ ನ ಪಾಠಿತಃ | ಪಿತೃಭ್ಯಾಂ ಬಾಲಕಾಸ್ತಸ್ಮಾತ್ ಶಿಕ್ಷಣೀಯಾಃ ಪ್ರಯತ್ನ ತಃ || ಲೋಕದಲ್ಲಿ ಜನರಿಗೆ ತಂದೆತಾಯಿಗಳಿಗಿಂತ ವಿಶ್ವಾಸವುಳ್ಳವರಾಗಿ ಯ ಹಿತಚಿಂತಕರಾಗಿಯೂ ಇರುವವರು ಯಾರೂ ಇಲ್ಲ. ಇವರು ತಮ್ಮ ಮಕ್ಕಳು ವೃದ್ಧಿಗೆ ಬಂದರೆ ಸಾಕೆಂದು, ಜನ್ಮಾರಭ್ಯ ಅವರಿಗೋಸ್ಕರ ಮಾಡ ತಕ್ಕ ಕೆಲಸಗಳನ್ನು ಆಸಕ್ತಿಯಿಂದ ಮಾಡಬೇಕೆಂಬ ಮನೋರಥವುಳ್ಳವ ರಾಗಿರುವರು. ಆದರೆ, ನಾಮಕರಣ ಚೌಲ ಉಪನಯನ ಮೊದಲಾದುವು ಗಳಿಗೆ ಎಷ್ಟು ಆವಶ್ಯಕವೋ ಅದಕ್ಕಿಂತಲೂ ಹೆಚ್ಚಾಗಿ ವ್ಯಯಮಾಡುವ ವಿಷಯದಲ್ಲಿ ತಂದೆತಾಯಿಗಳು ಹಿಂಜರಿಯುವುದಿಲ್ಲ. ಅಂಥ ವೆಚ್ಚಗಳಲ್ಲಿ ಶತಾಂಶದಲ್ಲಿ ಒಂದನ್ನಾದರೂ ವಿದ್ಯಾಭ್ಯಾಸಕ್ಕೆ ವಿನಿಯೋಗಿಸತಕ್ಕವರು ಕಡಿಮೆಯಾಗಿರುತ್ತಾರೆ. ಕೆಲವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ವಿಷಯ ದಲ್ಲಿ ತಮ್ಮ ಶಕ್ತಿಯನ್ನು ಮೀರಿ ವ್ಯಯಮಾಡಬೇಕೆಂಬ ಕುತೂಹಲವನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದು , ಆದರೆ ಅದಕ್ಕೆ ತಕ್ಕಂತೆ ಕಾರ್ ತಃ ಮಾಡತಕ್ಕವರು ವಿರಳವಾಗಿರುವರು. ಉಪಪತ್ತಿಯುಳ್ಳವರುಕೂಡ ಸದ್ಯಕ್ಕೆ ಫೀಜು ಕೊಡುವುದು ತಪ್ಪಿದರೆ ಅದೊಂದಿಷ್ಟು ದುಡ್ಡು ನಿಲ್ಲುವುದೆಂದು ಮನಸ್ಸಿನಲ್ಲಿ ಯೋಚಿಸುತ್ತ ಪಾಠ ಶಾಲೆಯ ಅಧ್ಯಕ್ಷರಲ್ಲಿ ಸಾಹಸವಾಡಿ ನೋಡೋಣವೆಂದು ಬಂದು “ಸ್ವಾಮಿ, ನಾನು ಬಹಳಬಡವ, ನಮ್ಮ ಹುಡುಗನಿಗೆ ಫೀಜುಕೊಡುವುದಕ್ಕೆ ಮಾf ವಿಲ್ಲ. ದಯವಿಟ್ಟು ಫೀಜುಮಾಘಮಾಡಿಸಿಕೊಟ್ಟು ವಿದ್ಯಾ ದಾನಮಾಡಿಸಿ ನಮ್ಮನ್ನು ಉದ್ಧಾರಮಾಡಬೇಕು. ಮುಖ್ಯ ಈ ಕೀರ್ತಿಯು ತಮ್ಮ ಪಾಲಿಗೆ ಸೇರಿದ್ದು,”ಎಂದು ಹೇಳಿಕೊಂಡು, ಅದರಿಂದ ಪ್ರಯೋಜನವಾಗದಿದ್ದರೆ ಮಗನ