ಪುಟ:ಅರ್ಥಸಾಧನ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತಂದೆತಾಯಿಗಳ ಕರ್ತವ್ಯ d೫ ವಿದ್ಯಾಭ್ಯಾಸದವಿಷಯದಲ್ಲಿ ಹಿಂಜರಿದು, ಅದೇಕಾಲದಲ್ಲಿ ಆ ಹುಡುಗನಿಗೆ ಸಾಲ ಸೋಲಗಳನ್ನಾದರೂ ಮಾಡಿ ಮದುವೆಮಾಡುವುದಕ್ಕೆ ತಕ್ಕ ಸನ್ನಾಹ ಗಳನ್ನು ಮಾಡುತ್ತಾ ಕುಟುಂಬದ ಜೀವನಕ್ಕೆ ಆಧಾರವಾಗಿರುವ ಗ್ರಾಮ ಭೂಮಿಗಳನ್ನಾದರೂ ಒತ್ತೆಯಿಟ್ಟು ಆ ಕಾವ್ಯವನ್ನು ನಿರ್ವಹಿಸುವರು. ಇಷ್ಟಾದರೂ ಮಗನಿಗೂ ಅವನ ಕುಟುಂಬದವರಿಗೂ ಅಭಿವೃದ್ಧಿಗೆ ಸಾಧಕ ವಾದ ವಿದ್ಯಾಬುದ್ದಿಗಳನ್ನು ಕಲಿಸುವವಿಷಯದಲ್ಲಿ ಮಾತ್ರ ಹಿಂದೆಗೆಯವರು. ಈ ವಿಷಯದಲ್ಲಿ ಇಂಗ್ಲೀಷರು ನಮಗಿಂತ ಎಷ್ಟೋ ಉತ್ತಮರಾಗಿರು ವರು ಅವರಲ್ಲಿ ತಂದೆತಾಯಿಗಳು ಮಕ್ಕಳನ್ನು ಸಾಕಿ ಅವರಿಗೆ ವಿದ್ಯಾಭ್ಯಾಸ ವನ್ನು ಮಾಡಿಸಿ ಆಮೇಲೆ ಯಾವುದಾದರೂ ಒಂದು ವೃತ್ತಿಯಲ್ಲಿ ಪ್ರವೇಶವ ನ್ನುಂಟುಮಾಡಿಸಿ ಅದರ ಸಹಾಯದಿಂದ ಅವರು ಸ್ವತಂತ್ರವಾಗಿ ಬದು ಎವಂತೆ ಮಾಡುವುದಕ್ಕೋಸ್ಕರ ತಾವು ಎಷ್ಟು ಕಷ್ಟವನ್ನಾದರೂ ಪಡುವರು. ಸ್ವಸಾ ಮರ್ಥ್ಯದಿಂದ ಜೀವಿಸುವುದಕ್ಕೆ ಶಕ್ತಿಯಿಲ್ಲದವರಿಗೆ ವಿವಾಹಮಾಡಿ ದಂಪತಿಗೆ ಇಬ್ಬರನ್ನೂ ಪರತಂತರನ್ನಾಗಿ ಮಾಡುವುದು ನಿಂದ್ಯ ವಾದುದೆಂದು ಭಾವಿಸದಿ ರತಕ್ಕೆ ಜನರೇ ಅವರಲ್ಲಿ ಅಪೂರ್ವ ಬಾಲೆಯರು ಕೂಡ ಧನವನ್ನಾರ್ಣಿಸು ವುದಕ್ಕೆ ಶಕ್ತಿಯಿಲ್ಲದವನನ್ನು ವಿವಾಹಮಾಡಿಕೊಳ್ಳುವುದಿಲ್ಲ. ಅವರು ಈಪ ಕಾರವಿರುವುದರಿಂದಲೇ ನಮಗಿಂತ ಎಷ್ಟೋ ಉತ್ತಮಸ್ಥಿತಿಯಲ್ಲಿರುವರು. ನಮ್ಮಲ್ಲಿ ಅನೇಕರು ನಮ್ಮ ಮಕ್ಕಳ ಹಣೆಯಲ್ಲಿ ನಾವು ಬರೆದಿದ್ದೇ ವೆಯೆ ? ನಮ್ಮ ತಂದೆಗಳು ನಮಗೇನುವಾಡಿದ್ದರು ? ಈ ವೂರಿನಲ್ಲಿ ಅವನ ಮಗ ಈಗ ಹೇಗೆ ಬದುಕುತ್ತಲಿದ್ದಾನೆ? ಅವನ ತಂದೆ ಅವನಿಗೆ ನಿಮಾ ಡಿದ್ದನು? ಇದೆಲ್ಲಾ ಹುಚ್ಚು. ಅವನ ಹಣೆಯಲ್ಲಿ ಬರೆದಂತೆ ಅವನಿಗೆ ಆಗು ಇದೆ ಅದಕ್ಕೆ ನಾವು ಬಾಧ್ಯರೆ? ” ಎಂಬುದಾಗಿ ಮನಸ್ಸು ಬಂದಂತೆ ಆಡುತ್ತ, ಮಕ್ಕಳ ವಿದ್ಯಾಭ್ಯಾಸಕ್ಕೂ ಪುರೋವೃದ್ಧಿಗೂ ಅನುಕೂಲವಾದ ಬಾಲ್ಯ ವನ್ನು ವ್ಯರ್ಥವಾಗಿ ಕಳೆಯುವಂತೆ ಮಾಡಿ “ ನಮ್ಮ ಹೊಟ್ಟೆಯಲ್ಲಿ ಹುಟ್ಟಿ