ಪುಟ:ಅರ್ಥಸಾಧನ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

44 ಅರ್ಧಸಾಧನ yyyyy\/\/YYYYYYYYYYY PY // WPU nowwewnoramaomnunama myY YYYYYYA ದಕ್ಕೆ ಉಪನಯನ ವಿವಾಹಗಳನ್ನು ಮಾಡಬೇಕಾದದ್ದು ನಮ್ಮ ಮುಖ್ಯ ಕಲಸ. ದೇವರು ನಮಗೆ ಶಕ್ತಿಯನ್ನು ಕೊಟ್ಟಿರುವಾಗ ಯಾಚನೆಯನ್ನಾಗಲೀ ಭಿಕ್ಷೆಯನ್ನಾಗಲೀ ಸಾಲವನ್ನಾಗಲೀ ಮಾಡಿ ಕಾರಿನಿರ್ವಾಹಮಾಡಿಬಿಟ್ಟರೆ ನಮ್ಮ ಕೆಲಸಮುಗಿಯಿತು. ಅವನು ಅವನ ಹೆಂಡತಿಮಕ್ಕಳಿಗೆ ಭಿಕ್ಷನನ್ನಾ ದರೂ ಎತ್ತಿಕೊಂಡು ಬಂದು ಹಾಕುತ್ತಾನೆ, " ಎಂಬುವಾಗಿ ವಿವಾಹಪ್ರಯತ್ನ ವನ್ನು ಮಾಡುವರೇ ಹೊರತು ಪುರೋವೃದ್ಧಿಗೆ ಸಾಧಕವಾದ ವಿದ್ಯಾಭ್ಯಾಸದ ವಿಷಯದಲ್ಲಿ ಅಷ್ಟು ಶ್ರದ್ಧೆಯನ್ನು ವಹಿಸುವುದಿಲ್ಲ. ಇವರು ಹೀಗೆ ಮಾಡುವುದರಿಂದ ಮಕ್ಕಳು ದೊಡ್ಡವರಾದಮೇಲೆ ಅಯ್ಯೋ ನಮ್ಮ ತಂದೆತಾಯಿಗಳೇ ನಮ್ಮ ತಲೆಯಮೇಲೆ ಕಲ್ಲು ಹಾಕಿದರು. ನಮಗಾ ದರೆ ಬಾಲ್ಯಾವಸ್ಥೆಯಲ್ಲಿ ಉತ್ತರ ಆಗಬೇಕಾದ ಯೋಚನೆಗಳು ತೋರದೆ ಹೋದುವು. ಅವರು ನಮ್ಮ ಕುಟುಂಬದವರ ವೃದ್ಧಿಗೆ ಬೇಕಾದುದನ್ನು ಯೋಚಿಸದೆ ಮದುವೆಯನ್ನು ಬೇರೆ ಮಾಡಿ ನಮ್ಮನ್ನು ತಾಪತ್ರಯಗಳಿಗೆ ಗುರಿಮಾಡಿದರೇ ಹೊರತು ನಾವು ಚೆನ್ನಾಗಿ ಬದುಕುವುದಕ್ಕೆ ಮಾರ್ಗವಾಡ ಲಿಲ್ಲ. ಏನುಮಾಡುವುದು? ” ಎಂಬುದಾಗಿ ಹೇಳಿಕೊಂಡು ಬಹಳವಾಗಿ ವ್ಯಸನ ಪಡುವರು. ಪ್ರಾಯಶಃ ತಂದೆತಾಯಿಗಳು ಹಾಕಿದ ಅಸ್ತಿಭಾರದಂತೆಯೇ ಆ ಕುಟುಂಬದ ಕೆಲಸಗಳು ನಡೆಯತಕ್ಕವಾಗಿರುತ್ತವೆ. ಆದುದರಿಂದ ಹುಡು ಗರಿಗೆ ಬಾಲ್ಯದಲ್ಲಿ ವಿದ್ಯಾಭ್ಯಾಸಮಾಡಿಸಿ ಅನಂತರ ಅವರು ಯಾವ ವೃತ್ತಿ ಯಲ್ಲಿ ಪ್ರವರ್ತಿಸಿದರೆ ಚೆನ್ನಾಗಿ ವೃದ್ಧಿಗೆ ಬರುವರೋ ಅದನ್ನು ಪರಿಶೀಲಿಸಿ ಅದರಲ್ಲಿ ಪ್ರವೇಶವನ್ನುಂಟುಮಾಡಿಸಬೇಕಾದುದು ತಂದೆತಾಯಿಗಳ ಮುಖ್ಯ ಕರ್ತವ್ಯವಾಗಿರುವುದು.