ಪುಟ:ಅರ್ಥಸಾಧನ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಯಾವ ವಿದ್ಯೆಯನ್ನು ಸಕ್ರಮಿಸಿದರೂ, ಯಾವ ವೃತ್ತಿಯನ್ನವಲಂಬಿಸಿದರೂ, ಅವುಗಳಲ್ಲಿ ಸಂಪೂರ್ಣವಾದ ಫಲವನ್ನು ಹೊಂದುವುದಕ್ಕಾಗುವುದಿಲ್ಲ. ಫಲದಾಯಕವಾದ ಅನೇಕವೃತ್ತಿಗಳು ಆಚರಣೆಯಲ್ಲಿರುತ್ತವೆ. ಓದುಬರ ಹಗಳನ್ನು ಬಲ್ಲವರಿಗೆ ಅವುಗಳ ವಿಷಯಗಳು ಲೇಖನಗಳಿಂದಲೂ ವರ್ತ ಮಾನಪತ್ರಿಕೆ ಮೊದಲಾದುವುಗಳಿಂದಲೂ ತಿಳಿಯುವುದಕ್ಕೆ ಅವಕಾಶವಾಗು ತದೆ. ಅವುಗಳಲ್ಲಿ ಪರಿಚಯವಿಲ್ಲದವರಿಗೆ ಇವು ಸಮಗ್ರವಾಗಿ ತಿಳಿವಳಿಕೆಗೆ ಬರುವುದು ಕಷ್ಟ. ಪ್ರತಿಯೊಂದು ವಿದ್ಯೆಯಲ್ಲಿಯೂ ವೃತ್ತಿಗಳಲ್ಲಿಯೂ ಚೆನ್ನಾಗಿ ತಿಳಿ ವಳಿಕೆಯುಳ್ಳವರಿಗೆ ಇಷ್ಟಾರ್ಥಸಿದ್ದಿಗೆ ಅವಕಾಶವು ವಿಶೇಷವಾಗಿರುವುದು. ವರ್ತಕತನವೇ ಮೊದಲಾದ ವೃತ್ತಿಗಳಿಂದ ಜೀವಿಸತಕ್ಕವರಿಗೆ ಓದು ಬರಹ ಲೆಕ್ಕಗಳ ಪ್ರಯೋಜನವು ಬಹಳವಾಗಿರುವುದು, ಯಾವ ಪದಾರ್ಥಗಳು ಯಾವ ಪ್ರಾಂತಗಳಲ್ಲಿ ಅಗ್ಗವಾಗಿರುವುವೋ, ಯಾವ ಪ್ರಾಂತಗಳಲ್ಲಿ ತಗ್ಗಾ ಗಿರುವುವೋ ಅವುಗಳೆಲ್ಲಾ ಓದುಬರಹಬಲ್ಲವರಿಗೆ ತಂತೀವರ್ತಮಾನ, ಲೇಖನ, ವರ್ತಮಾನಪತ್ರಿಕೆಗಳು ಇವೇ ಮೊದಲಾದುವುಗಳ ಮೂಲಕ ವಾಗಿ ತಿಳಿಯುವುದಕ್ಕೆ ಅವಕಾಶವಾಗುವುದು. ಈ ವಿಧವಾದ ತಿಳಿವಳಿಕೆಯ ಸಹಾಯದಿಂದ ಲಾಭವೂ ವಿಶೇಷವಾಗಿ ಉಂಟಾಗುವುದು. ಪ್ರತಿಯೊಂದು ವೃತ್ತಿಯಲ್ಲಿಯೂ ಅದರ ಮರಗಳನ್ನು ತಿಳಿದು ಕೊಳ್ಳುವುದಕ್ಕೆ ಓದು ಬರಹಗಳೂ ಅವುಗಳಿಂದುಂಟಾಗತಕ್ಕೆ ಪೂರಾಪರ ಜ್ಞಾನವೂ ಹೇಗೆ ಸಾಧಕಗಳಾಗಿರುತ್ತವೆಯೋ ಹಾಗೆಯೇ ಆ ಕೆಲಸದ ಲಾಭ ನಷ್ಟಗಳನ್ನು ವಿಶದವಾಗಿ ತೋರಿಸುವುದಕ್ಕೆ ಲೆಕ್ಕವೂ ಸಾಧಕವಾಗಿರುವುದು. ಓದು ಬರಹ ಲೆಕ್ಕಗಳನ್ನರಿಯದವರು ತಾವು ಅವಲಂಬಿಸಿರತಕ್ಕ ವೃತ್ತಿಗಳ ವಿಶಿಷ್ಟ ಲೆಕ್ಕಪತ್ರಗಳನ್ನೂ ಗುಮಾಸ್ತ ಮೊದಲಾದವರಿಂದ ಇಡಿಸಬೇಕಾಗು ಇದೆ. ಹೀಗೆ ಅಕ್ಷರಜ್ಞಾನವಿಲ್ಲದ ಯಜಮಾನನಿಗೆ ಆ ಜನರು ಮೋಸ