ಪುಟ:ಅರ್ಥಸಾಧನ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದ್ಯ mmmmmm ಮಾಡದಿರುವುದು ಅಪೂರ. ಆದುದರಿಂದ ಓದು ಬರಹ ಲೆಕ್ಕಗಳಲ್ಲಿ ವಿಶೇಷ ಪಾಂಡಿತ್ಯವನ್ನು ಸಂಪಾದಿಸದಿದ್ದರೂ, ತಾವು ಅವಲಂಬಿಸಿರತಕ್ಕ ವೃತ್ತಿಗೆ ಸಂಬಂಧಪಟ್ಟ ಲೆಕ್ಕ ಪತ್ರಗಳ ಮರಗಳನ್ನು ತಿಳಿದುಕೊಳ್ಳುವಷ್ಟಾದರೂ ಕಲಿತುಕೊಂಡಿರತಕ್ಕುದು ಪ್ರತಿಯೊಬ್ಬನಿಗೂ ಅತ್ಯಂತ ಆವಶ್ಯಕವಾದುದು. ವೃ ತ್ರಿ ಗ ಳು , ಸ್ವಾನುರೂಪಾಂ ಶುಭಾಂ ವೃತ್ತಿ ಪರೀಕ್ಷೆತಾಂ ಸಮಾಶ್ರಯೇತ್ | ತದಭಾವೇ ನರಃ ಸೀತ್ ಮೃತ್ಯುಂ ಚ ಪ್ರಾಪ್ನುಯಾದ್ದುವಂ || ಲೋಕದಲ್ಲಿ ವ್ಯವಸಾಯ, ಶಿಲ್ಪ, ಚಿತ್ರ, ವೈದ್ಯ, ಬಡಿಗೆ, ಹೊಲಿಗೆ, ಯಂತ್ರ ಸಂಬಂಧದಿಂದ ಮಾಡತಕ್ಕ ಕೆಲಸ, ಕಬ್ಬಿಣಗೆಲಸ, ಜಿನ್ನದಕೆಲಸ, ನೇಯ್ಕೆ ಇವೇ ಮೊದಲಾದ ಬಗೆಬಗೆ ವೃತ್ತಿಗಳಿರುವುವು. ಅವುಗಳಲ್ಲಿ ಒಬ್ಬೊಬ್ಬರು ಒಂದೊಂದು ವೃತ್ತಿಯನ್ನೂ, ಮತ್ತೆ ಕೆಲವರು ಎರಡುಮೂರು ವೃತ್ತಿಗಳನ್ನೂ ಅವಲಂಬಿಸುವರು. ತಾವೇ ಅಭ್ಯಾಸಮಾಡುವುದರಿಂದಲೂ, ಬಲ್ಲವರಿಂದ ಅದರ ಮರಗಳನ್ನು ತಿಳಿದುಕೊಳ್ಳುವುದರಿಂದಲೂ ಅವುಗ ಳನ್ನು ಚೆನ್ನಾಗಿ ಕಲಿತುಕೊಳ್ಳುವರು. ಹೀಗೆ ಕಲಿತುಕೊಳ್ಳುವುದರಲ್ಲಿಯೂ ಅವರವರ ಮನೆಗಳಲ್ಲಿ ಅಭ್ಯಸ್ತವಾಗಿ ನಡೆವಳಿಕೆಗಳಲ್ಲಿರುವ ವೃತ್ತಿಗಳ ಪರಿಚಯವು ಅವರಿಗೆ ಸುಲಭವಾಗಿ ಬರುವುದು. ಹೇಗೆಂದರೆ,-ಸಂಗೀತ ಗಾರರ ಮಕ್ಕಳಿಗೆ ಸಂಗೀತವೂ, ವೈದ್ಯರ ಮಕ್ಕಳಿಗೆ ವೈದ್ಯವೂ, ವ್ಯಾಪಾರ ಗಾರರ ಮಕ್ಕಳಿಗೆ ವ್ಯಾಪಾರವೂ ಸುಲಭವಾಗಿ ತಿಳಿಯುವುವು. ಹೀಗೆಯೇ ಕೃಷಿ, ಬಡಿಗೆ, ನೇಯ್ದೆ, ಹೊಲಿಗೆ, ಚಿತ್ರ ಮೊದಲಾದ ವೃತ್ತಿಗಳಿಂದ ಜೀವಿಸು ವವರ ಮಕ್ಕಳಿಗೆ ಆಯಾ ವೃತ್ತಿಗಳಲ್ಲಿ ಪ್ರವೇಶವು ಸುಲಭವಾಗಿ ಆಗುವುದು. ಆದುದರಿಂದ ಯಾರಿಗೆ ಯಾವ ವೃತ್ತಿಯಲ್ಲಿ ಮನಸ್ಸು ಓಡುವುದೋ ಅದನ್ನು