ಪುಟ:ಅರ್ಥಸಾಧನ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ ಪ್ರಥಮತಃ ಗೊತ್ತು ಮಾಡಿಕೊಂಡು, ಅದರ ಅವಲಂಬನದಿಂದ ಜೀವಿಸಬೇ ಕಾದರೆ ಆ ವೃತ್ತಿಯಿಂದ ಮಾಡಿದ ವಸ್ತುಗಳಿಗೆ ಆ ಸ್ಥಳದಲ್ಲಿ ಪ್ರತಿಫಲ ವುಂಟೋ ಇಲ್ಲವೋ ನೋಡಿಕೊಂಡು ಹಿಡಿಯಬೇಕು. ಬಹುಜನರು ಇದನ್ನು ಯೋಚಿಸದೆ ಚನಲಚಿತ್ತರಾಗಿ ಕೆಲವುದಿನ ಒಂದು ವೃತ್ತಿಯ ನ್ನವಲಂಬಿಸಿ, ಹಾಗೆಯೇ ಅದನ್ನು ಬಿಟ್ಟು ಮತ್ತೆ ಬೇರೆ ವೃತ್ತಿಯನ್ನವಲಂ ಬಿಸಲು ಹೋಗುವರು. ಹೀಗೆ ಚಪಲಚಿತ್ತರಾದವರು ಯಾವುದರಲ್ಲಿಯ ಕೊನೆಗಾಣದೆ ಹೋಗುವರು, ಇಂಥವರಿಗೆ ಯಾವಾಗಲೂ ಕಷ್ಟವೇಹೊರತು ಸಖ್ಯವುಂಟಾಗುವುದಿಲ್ಲ. ಆದುದರಿಂದ ಸರ್ವರೂ ತಮತಮಗೆ ಯಾವಯಾವ ವೃತ್ತಿಗಳಲ್ಲಿ ವೃದ್ಧಿಗೆ ಬರುವುದಕ್ಕೆ ಅನುಕೂಲ್ಯವಿರುವುದೋ ಅದನ್ನು ಚೆನ್ನಾಗಿ ಪರಾ ಲೋಚಿಸಿ ಅವಲಂಬಿಸಬೇಕು ಅವಲಂಬಿಸಿದಮೇಲೆ ಚಪಲಚಿತ್ತರಾಗದೆ ಒಂದೇ ಮನಸ್ಸಿನಿಂದ ಅದರಲ್ಲಿ ಕೌಶಲ್ಯವನ್ನು ಸಂಪಾದಿಸಬೇಕು. ಹಾಗೆ ಕೌಶಲ್ಯವನ್ನು ಸಂಪಾದಿಸಿದವರು ತಾವು ಅವಲಂಬಿಸಿದ ವೃತ್ತಿಯಲ್ಲಿ ಮನಃ ಪೂರಕವಾಗಿ ಕೆಲಸಮಾಡುತ್ತ, ದರ ದುರಾಲಾಪಗಳಲ್ಲಿ ಕಾಲ ವನ್ನು ಕಳೆಯದೆ, ಪ್ರಾರಂಭಿಸಿದ ಕೆಲಸವು ಸಫಲವಾಗಿ ಕೊನೆಗಾeಳುವುದರಿಂ ದುಂಟಾಗುವ ಸಂತೋಷಾನುಭವವು ಎಂದಿಗುಂಟಾವುದೊ ಎಂದು ನಿರೀಕ್ಷಿ ಸಿಕೊಂಡಿರುವರು. ಯೋಗ್ಯವಾದ ವೃತ್ತಿಯನ್ನು ಅವಲಂಬಿಸದಿರುವವರು ಒಂದುವೇಳೆ ತಾವು ಯಾವತಂಟೆಗೂ ಹೋಗುವುದಿಲ್ಲವೆಂದು ಇದ್ದರೂ ಅವರ ಮನಸ್ಸು ಸುಮ್ಮನಿರುವುದಿಲ್ಲ, ಅವರಲ್ಲಿ ದಿನಕ್ರಮೇಣ ದುರ ದುರಾ ಲಾಪಗಳು ನೆಲೆಗೊಳ್ಳವುವು ಇವು ನೆಲೆಗೊಂಡನಂತರ ಅವರು ಪರರ ಹಿತಾಹಿತಗಳನ್ನೂ ತಮ್ಮ ಕೀರ್ತ್ಯಪಕಿರಿಗಳನ್ನೂ ಯೋಚಿಸದೆ ಕಾರಗ ಳನ್ನು ಮಾಡ , ಬಾಯಲ್ಲಿಮಟ್ಟಿಗೆ ಧರವಾಗಿಯೂ ಸತ್ಯವಾಗಿಯೂ ಇರವ ಮಾತುಗಳನ್ನಾಡುವುದಲ್ಲದೆ ಮೋಸ ಮೊದಲಾದುವುಗಳಿಂದ ಪರರ

k - - - 0 0 kb