ಪುಟ:ಅರ್ಥಸಾಧನ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಸದ್ಭಕ್ತಿಯೆಂದೂ ಸುಕರವಾದುದೆಂದೂ ಸತ್ಸಂಪ್ರದಾಯಬದ್ದವಾದುದೆಂದೂ ಭಾವಿಸಿ ನಿಶ್ಚಿಂತರಾಗಿರುವರು. ಹೀಗಾಗುವುದಕ್ಕೆ ಇವರಿಗೆ ಕಾಸ, ರ್ಥ ಸಾರಾಂಶಗಳು ತಿಳಿಯದಿರೋಣವೇ ಕಾರಣವು. ಏತಕ್ಕಂದರೆ,-ಭಿಕ್ಷಾವ್ಯ ಶಿಯು ಮದಮತ್ಸರಾದಿಗಳನ್ನು ಬಿಟ್ಟು ಸಂಸಾರ ಬಂಧನಕ್ಕೊಳಗಾಗದೆ ಸನ್ಮಾರ್ಗದಲ್ಲಿ ನಡೆಯುತ್ತ ಪರಲೋಕ ಚಿಂತಾಸಕ್ಷರಾಗಿ ಐಹಿಕ ಸುಖಾಪೇ ಕ್ಷಗಳನ್ನು ಬಿಟ್ಟು ಸದಾನಂದ ಭರಿತರಾಗಿ ಸದಾ ಭಗವಂತನನ್ನು ಧ್ಯಾನಿಸು ತಲಿರುವ ಜನಗಳಿಗೂ ವಿದ್ಯಾಭ್ಯಾಸ ಮಾಡುತ್ತಲಿರುವ ವಿದ್ಯಾರ್ಥಿಗಳಿಗೂ ವಿಹಿತವಾಗಿರುವುದೇ ಹೊರತು, ಸೋಮಾರಿತನದಿಂದ ಮೈಗಳ್ಳರಾಗಿ ಶರೀರ ಕ್ರಮದಿಂದ ಸಂಪಾದಿಸಿಕೊಂಡು ಸುಖವಾಗಿ ಬಾಳಲಾರದಿರುವವರಿಗೆ ವಿಹಿತ ವಾದುದಲ್ಲ. ಒಂದುವೇಳೆ ಈ ವೃತ್ತಿಯನ್ನವಲಂಬಿಸಿದವರಿಗೆ ಕಾಯಶಕ್ತಿಯಿ ರುವಾಗ ಅನ್ನವಸ್ತ್ರಗಳಿಗೆ ಬೇಕಾದಷ್ಟು ದೊರೆತರೂ, ಶರೀರದಲ್ಲಿ ತಾಣವು ಕಡಿಮೆಯಾದ ಹಾಗೆಲ್ಲಾ ಆ ವೃತ್ತಿಯಿಂದ ಬರುವ ಆಯತಿಯು ಕಡಿಮೆ ಯಾಗಿ ಕೊನೆಗೆ ಹೀನಸ್ಥಿತಿಯುಂಟಾಗುವುದು. ಆದುದರಿಂದ ಭಿಕ್ಷದಿಂದ ಮಾಡತಕ್ಕ ಜೀವನವು ಐಹಿಕ ವ್ಯಾಪಾರಗಳನ್ನು ಬಿಟ್ಟ ಜನಗಳಿಗೂ ವಿದ್ಯಾ ಭ್ಯಾಸ ಮಾಡತಕ್ಕೆ ವಿದ್ಯಾರ್ಥಿಗಳಿಗೂ ವಿನಾ ಉಳಿದವರಿಗೆ ಎಂದಿಗೂ ಯೋಗ್ಯವಾದುದಲ್ಲ. ಟ ಸಾ ನ ನಿರ್ಣಯ , ಯರ್ಸ್ಕಿ ಸ್ಥಾನೇ ಯದುಚಿತಂ ತದಾಲೋಚ್ಯಂ ಮನೀಷಿಭಿಃ | ಯತಃ ಸ್ಥಾನವಿಪತ್ಕಾಸಾತ್ ಅಪಿ ರತ್ನಲ ಶಿಲಾಯತೇ | ಯಾವ ವೃತ್ತಿಯ ಆಚರಣೆಗೆ ಯಾವ ಸ್ಥಳವು ಅನುಕೂಲವಾಗಿರು ವುದೋ ಅದನ್ನು ಮೊದಲೇ ಗೊತ್ತು ಮಾಡಿಕೊಂಡು ಆ ಸ್ಥಳದಲ್ಲಿ ಅದನ್ನು ಆಚರಿಸುತ್ತ ಬರಬೇಕು. ಏಕೆಂದರೆ-ತಾನು ಮಾಡುವ ಪದಾರ್ಥಗಳಿಗೆ ಎಲ್ಲಿ