ಪುಟ:ಅರ್ಥಸಾಧನ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ವ್ಯಾಪಾರಕ್ಕಾಗಿ ಕೆಲವುಜನರು ಸೇರಿಕೊಂಡು ಒಂದೊಂದು ಕಂಪನಿಯನ್ನು ಮಾಡಿಕೊಂಡು ಲಾಭವನ್ನು ಪಡೆಯುತ್ತಿದ್ದಾರೆ. ಇಂಥ ಕಂಪೆನಿಗಳಲ್ಲಿ ಹಿಂದೊಂದು ಕಂಪೆನಿಯವರಿಗೆ ವಾರಕ್ಕೆ ಅನೇಕಲಕ್ಷ ರೂಪಾಯಿಗಳ ವರ ಪಾನವು ಸಾಧಾರಣವಾಗಿ ಬರುವುದು. ಮತ್ತೆ ಕೆಲವರು ವರಮಾನವನ್ನು ದಿನಗಟ್ಟಲೆ ಎಣಿಸುವುದನ್ನು ಕೂಡ ಬಿಟ್ಟು ಒಂದು ನಿಮಿಷಕ್ಕಿಷ್ಟೆಂಬುದಾಗಿ ಗೊತ್ತು ಮಾಡುತ್ತಾರೆ. ಒಂದು ನಿಮಿಷಕ್ಕೆ ಒಂದುಸಾವಿರ ರೂಪಾಯಿನಮೇಲೆ ವರಮಾನವುಳ್ಳವರು ನಾಲೈದು ಜನರು ಲಂಡನ್ನಿನಲ್ಲಿರುತ್ತಾರೆ. ಇಂಥ ಅನ್ಯಾದೃಶವಾದ ಸಂಪತ್ತುಗಳುಂಟಾಗುವುದಕ್ಕೆ ಅವರು ಗಿರಾಕಿಯಿರುವ ಸ್ಥಳಗಳನ್ನು ನೋಡಿಕೊಂಡು ವ್ಯಾಪಾರಮಾಡಿದ್ದೇ ಮುಖ್ಯ ಕಾರಣವು. ಆದುದರಿಂದ ಉದ್ಯೋಗವನ್ನು ಅವಲಂಬಿಸಿದವರು ಸರಿಯಾದ ಗಿರಾಕಿಯಿರುವ ಸ್ಥಳಗಳನ್ನು ನೋಡಿಕೊಂಡು ತಮ್ಮ ಉದ್ಯೋಗವನ್ನು ಪ್ರಾರಂಭಿಸಿದಲ್ಲಿ ವೃದ್ಧಿಗೆ ಬರುವುದಕ್ಕೆ ಅವಕಾಶವಾಗುವುದು. ಅಯವ್ಯಯ ವಿಮರ್ಶೆ (ಬಡ್.) ಪ್ರಮಾಯಮನಾಲೋಚ್ಯ ವ್ಯಯಾನಶ್ಚ ಸ್ವವಾ ಇ ಯ | ಪರಿಕ್ಷೀಯ ತಏವಾಸೌ ಧನೀ ವೈಶ್ರವಣೋಪಮಃ || ಸರ್ಕಾರದವರೂ, ಭಾರಿರ್ಜಾದಾರರೂ, ರೈಲು ಮೊದಲಾದ ಕಂಪೆನಿಯ ವರ್ತಕರೂ ವರ್ಷಕ್ಕೆ ಒಂದುಸಲ ತಮಗೆ ಬರತಕ್ಕ ಆಯತಿ €ಯನ್ನು ಚಾಲುವಾರು ವಿಂಗಡಿಸಿಕೊಂಡು ಅದಕ್ಕನುಸಾರವಾಗಿ ಆ ವರುಷ ದಲ್ಲಿ ಆಗಬೇಕಾದ ವೆಚ್ಚವನ್ನೂ ಅಂದಾಜಿನಿಂದ ಏರ್ಪಡಿಸಿಕೊಂಡು ಕೂಡಿದ ಮಟ್ಟಿಗೂ ಅಂದಾಜಿಗನುಸಾರವಾಗಿ ವೆಚ್ಚ ಮಾಡುತ್ತ ಬರುವರು. ಬಡ್ಡ ಟ್ಟಿನಲ್ಲಿಲ್ಲದಿರತಕ್ಕ ವೆಚ್ಚಗಳೇನಾದರೂ ಆಕಸ್ಮಿಕವಾಗಿ ಸಂಭವಿಸಿದಲ್ಲಿ