ಪುಟ:ಅರ್ಥಸಾಧನ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಧಸಾಧನ ದೇಹದಾರ್ಡ್ಯವು ಕಡಿಮೆಯಾದಾಗ ಅದು ಒಂದು ಅವಲ೦ಬನವಾಗಿ ಪರಿಣ ಮಿಸಿ ಅಪರ ವಯಸ್ಸಿನಲ್ಲಿ ಜೀವನಾರ್ಥವಾದ ಪರೋಪಸರ್ಪಣೆಯನ್ನು ಇಸಿ ಸ್ವತಂತ್ರವಾಗಿ ಜೀವಿಸುವಂತೆ ಮಾಡುವುದು. ಹೀಗೆ ನಡೆಯದೆ ಆಗ ಸಂಪಾದಿಸಿದುದನ್ನು ಆಗಲೇ ವೆಚ್ಚ ಮಾಡುತ್ತಲಿರುವವನು ಗೃಹಕೃತ್ಯ ದಲ್ಲಿ ತೊಂದರೆಯುಂಟಾದಾಗ ಯಾಚಕತನಕ್ಕೆ ಹೋಗುವನು, ಆ ಯಾಚ ಕತನದಲ್ಲಿಯೂ ದುಡ್ಡು ಹುಟ್ಟದಿದ್ದರೆ ಸಾಲಮಾಡಿಕೊ೦ಡು ಆಗಿನ ಕಾರ್ ಗಳನ್ನು ನಿರ್ವಹಿಸಿ, ಕೊನೆಕೊನೆಗೆ ತಾನು ಮಾಡಿದ ಸಾಲಗಳನ್ನು ತೀರಿಸು ವುದಕ್ಕೆ ಮಾರ್ಗವಿಲ್ಲದೆ ಪರಿಣಾಮದಲ್ಲಿ ಅನಿರಚನೀಯವಾದ ಸಂಕಟಗ ಳನ್ನು ಅನುಭವಿಸಿ ತಾನು ಕೆಟ್ಟದ್ದಲ್ಲದೆ ತನ್ನ ಕುಟುಂಬದವರನ್ನೂ ಕಡಿ ಸುವನು. ಇದನ್ನು ನೋಡಿದರೆ ಆದಾಯವೆಚ್ಚದ ಅಂದಾಜನ್ನಿಟ್ಟುಕೊಳ್ಳದೆ ನಡೆ ಯುವವರು ಎಷ್ಟು ಉನ್ನತಸ್ಥಿತಿಯಲ್ಲಿರುತ್ತಾರೆಯೋ ಅಷ್ಟು ಹೀನಸ್ಥಿತಿಗೂ ಜಾಗ್ರತೆಯಲ್ಲಿಯೇ ಬರುತ್ತಾರೆಂಬ ಅಂಶವು ಗೊತ್ತಾಗುವುದು. ಮತ್ತು ಅಂಥವರಿಗೆ ಕೆಲವು ದಿವಸಗಳಲ್ಲಿಯೇ ಸಾವು ಕೂಡ ಹುಟ್ಟದೆ ಹೋಗು ವುದು, ಇಂಥವರ ಭಾಗಕ್ಕೆ ಕುಬೇರನ ನವನಿಧಿಗಳೂ ಗಾಳಿಗಂಟಿನಂತೆ ಪರಿಣಮಿಸುವುವು. ಈ ಜನರು ಕುಟುಂಬದ ಸಂಪತ್ತುಗಳನ್ನು ಜಾಗ್ರತೆ ಯಾಗಿ ಕಳೆದುಕೊಂಡು, ಸಾಲಗಾರರ ಬಾಧೆಗೆ ಒಳಗಾಗಿ, ಅರ್ಥ-ಹಾನಿ ಮಾನಹಾನಿಗಳನ್ನು ಹೊಂದಿ ಕೇವಲ ಹೀನಸ್ಥಿತಿಗೆ ಬಂದು, ತಮ್ಮ ಅವಿವೇಕ ವನ್ನು ಸ್ಮರಿಸಿಕೊಳ್ಳುತ್ತಾ, ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತಾ, ಭಗ್ನ ಮನೋರಥರಾಗಿ, ಅಪಾರವಾದ ದುಃಖದಲ್ಲಿ ಮುಳುಗಿ, ಹೀಗೆ ಬದುಕು ವುದಕ್ಕಿಂತಲೂ ಪ್ರಾಣತ್ಯಾಗಮಾಡಿಕೊಳ್ಳುವುದು ಲೇಸೆಂದು ಯೋಚಿಸು ವರು. ಇವರು ಮಾಡಿದ ಮಹರಾಯ' ಎಂಬಂತೆ ತಾವು ಮಾಡಿದ ಆತ್ಮದ ಫಲವನ್ನು ಅನುಭವಿಸುವರು. ಕೊನೆಕೊನೆಗೆ “ ಶಾಸಿದ್ಧನಾದವನು