ಪುಟ:ಅರ್ಥಸಾಧನ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗೃಹಕೃತ್ಯಗಳು annararnamna mammamana naman ದೊಡ್ಡ ಸ್ಥಿತಿಯಲ್ಲಿರತಕ್ಕೆ ಸ್ತ್ರೀ ಪುರುಷರಿಗೆ ಈ ಅವಸ್ಥೆಯೇ ಒಂದು ಶಿಕ್ಷೆ ಯೆಂಬುದಾಗಿ ಭಾವಿಸಬಹುದು. ಇಂಥ ದೊಡ್ಡ ಮನುಷ್ಯರ ಮನೆಯಲ್ಲಿ ತಲೆಯೊಂದಕ್ಕೆ ಹತ್ತು ರೂಪಾಯಿ ಮೊದಲುಗೊಂಡು ನೂರುರೂಪಾಯಿಗಳ ವರೆಗೂ ಪ್ರತಿತಿಂಗಳಲ್ಲಿಯ ವೆಚ್ಚ ವಾಗುವುದು. ಆದರೂ ಆ ಜನರಿಗೆ ತಿಂಗಳಿಗೆ ಎಂಟುಹತ್ತು ರೂಪಾಯಿಗಳಲ್ಲಿ ಜೀವನಮಾಡತಕ್ಕ ಪೂರಾಪರ ಜ್ಞರಾದ ಬಡಜನರಿಗೆ ಇರತಕ್ಕ ಸೌಖ್ಯವೂ ನೈ೦ತ್ಯವೂ ಇರುವುದಿಲ್ಲ. ಒಬ್ಬ ಒಕ್ಕಲಿಗನು ಬೆಳಗಿನಿಂದ ಹಿಡಿದು ಮಧ್ಯಾಹ್ನದವರೆಗೆ ವಿನೋ ದವಾಗಿ ಮಾತುಗಳನ್ನಾಡುತ್ತಾ ಬಾಯಿಗೆ ಬಂದ ಪದ್ಯಗಳನ್ನು ಹೇಳಿಕ ಳ್ಳುತ್ತಾ ಹೊಲ ಗದ್ದೆ ಮೊದಲಾದುವುಗಳಲ್ಲಿ ತನ್ನ ಕುಟುಂಬದವರೊಡನೆ ಶ್ರದ್ದೆಯಿಂದ ಕೆಲಸಮಾಡುವನು ಮಧ್ಯಾಹ್ನಕ್ಕೆ ಅವನ ಕುಟುಂಬದ ಸ್ತ್ರೀ ಪುಬುಷರಲ್ಲಿ ಯಾರಾದರೊಬ್ಬರು ಹಿಟ್ಟಿನಮುದ್ದೆಗಳನ್ನೂ ಸಾಮಾನ್ಯ ವಾದ ವ್ಯಂಜನದ್ರವ್ಯಗಳಲ್ಲಿ ಯಾವುದಾದರೊಂದನ್ನೂ ತೆಗೆದುಕೊಂಡು ಬಂದು ಕೆಲಸಮಾಡಿದವರಿಗೆ ಬಡಿಸುವರು. ಅವರು ಅವುಗಳನ್ನು ಅತ್ಯಂತ ಅಭಿರುಚಿಯಿಂದ ಭುಂಜಿಸಿ ಗಿಡದ ನೆಳಲಿನಲ್ಲಿ ಕುಳಿತುಕೊಂಡು ಗೋಟ ಡಕೆ ತರಗೆಲೆಗಳನ್ನು ಹಾಕಿಕೊಂಡು ಕೊನೆಗೆ ಒಂದು ಮರದ ಬುಡವನ್ನು ದರೂ ತಲೆಗಿಂ ಸಾಗಿ ಮಾಡಿಕೊಂಡು ಗಾಢನಿದ್ರೆಯನ್ನು ಮಾಡಿ ವಿಶ್ರಮಿಸಿ ಕೊಂಡೆದ್ದು ಮತ್ತೆ ಮಾಡಬೇಕಾದ ಕಾವ್ಯಗಳನ್ನು ಪೂರಯಿಸಿ ತಮ್ಮ ಗುಡಿಸಲುಗಳಿಗಾಗಲಿ ಹುಲ್ಲಿನಮನೆಗಳಿಗಾಗಲಿ ಹೋಗಿ ಪುತ್ರ ಮಿತ್ರ ಕಳ ತಾದಿಗಳೊಡನೆ ಸೇರಿ ಆಗೆ ಮಾಡಿದ ಆಹಾರವನ್ನು ಭುಂಜಿಸಿ ಕಾರೈಸು ಧನೆಯ ಆಸಕ್ತಿಯಿಂದ ಕಾಲಹರಣಮಾಡುವರು ಇಂಥ ನಡೆವಳಿಕೆಯುಳ ಮನೆಯವರಲ್ಲಿ ಸೋಮಾರಿತನವು ತಪ್ಪಿ ಕೆಲಸಗಳಲ್ಲಿ ಶ್ರದ್ಧೆಯುಂಟಾಗಿ ಸಕಲ ಸಂಪತ್ತುಗಳ ಕ್ರಮಕ್ರಮವಾಗಿ ವೃದ್ಧಿಯನ್ನೆದುವುವು. ದೊಡ್ಡ ಮನುಷ್ಯರೂ ಅವರ ಮನೆಯವರೂ “ ನಾವು ಪಂಚಭಕ್ಷ್ಯ ಪರಮಾನ್ನ 1.