ಪುಟ:ಅರ್ಥಸಾಧನ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಿತವ್ಯಯ ೫೫ ಪದಾರ್ಥಗಳನ್ನು ಆವಶ್ಯಕವಾಗಿ ತರಬೇಕೆಂದು ಹೇಳಿದರೆ “ ಈಗ ಕೈಲಿ ಚಿಲ್ಲರೇದುಡ್ಡಿಲ್ಲ, ಹೇಗಾದರೂ ಮಾಡಿಕೊಳ್ಳಿ ” ಎಂಬುದಾಗಿ ಹೇಳುವರೇ ಹೊರತು ರೂಪಾಯನ್ನು ಮುರಿಸುವುದಕ್ಕೆ ಒಪ್ಪುವುದಿಲ್ಲ. ಆದರೆ ಚಿಲ್ಲರೇ ದುಡ್ಡು ಕೈಲಿದ್ದಾಗಮಾತ್ರ ಈ ಹಿಡಿತವಿರುವುದಿಲ್ಲ. ಮನುಷ್ಯನು ವರು ಪವೂ ವೆಚ್ಚಮಾಡತಕ್ಕ ಪ್ರಡಿದುಡ್ಡುಗಳನ್ನು ಪರಿಗಣಿಸಿದರೆ ಚಿಲ್ಲರೇಬಾಬಿ ನಲ್ಲಿಯೇ ಅನೇಕ ರೂಪಾಯಿಗಳು ವೆಚ್ಚವಾಗಿರುತ್ತವೆ. ಹೀಗೆ ವೆಚ್ಚವಾಗಿ ರುವುದರಲ್ಲಿ ಅವಶ್ಯಕವಾದದ್ದಕ್ಕೂ ಅನಾವಶ್ಯಕವಾದದ್ದಕ್ಕೂ ವೆಚ್ಚವಾಗಿರು ವುದನ್ನು ಬೇರೆಬೇರೆ ಮಾಡಿ ಪರೀಕ್ಷಿಸಿದರೆ ನಿರರ್ಥಕವಾದದ್ದಕ್ಕೇ ಪ್ರಾಯಶಃ ಹೆಚ್ಚು ವೆಚ್ಚವಾಗಿರುವುದು. ಆದಕಾರಣ ಪ್ರತಿ ಮನುಷ್ಯನೂ ತಾನು ಮಾಡತಕ್ಕ ವೆಚ್ಚದಲ್ಲಿ ಒಂದು ಕಾಸನ್ನೂ ಬಿಡದೆ ಪ್ರತಿದಿವಸವೂ ಬರೆಯುತ್ತ ತಿಂಗಳಿನ ಕೊನೆ ಮಲ್ಕಿ ತಾನು ವೆಚ್ಚ ಮಾಡಿದ್ದರಲ್ಲಿ ಅನಾವಶ್ಯ ಕವಾದದ್ದಕ್ಕೆ ಎಪ್ಪಾಗಿದೆ ಎಂಬುದನ್ನು ನೋಡ ತ್ತಾ ಬರಬೇಕು. ಒಂದು ವರುಷದನಂತರ ಈ ವರುಷದಲ್ಲಿ ಅನಾವಶ್ಯಕವಾದ ಬಾಬಿನಲ್ಲಿ ಒಟ್ಟು ಎಷ್ಟು ಖರಾಗಿದೆ ಎಂಬುದನ್ನು ನೋಡಿಕೊಳ್ಳಬೇಕು ಹೀಗೆ ಮಾಡುವುದ ರಿಂದ ಅನಾವಶ್ಯಕವಾದ ಭಾಬಿನಲ್ಲಿ ವೆಚ್ಚವಾಗತಕ್ಕುದನ್ನು ನಿಲ್ಲಿಸಿ ಮಿತ ವಾಗಿ ನಡೆದುಕೊಳ್ಳವ ಅಭ್ಯಾಸವಾಗುವುದು | ಆದರೆ, ಜನರು ಸೌಖ್ಯವನ್ನು ಹೊಂದಬೇಕಾದರೆ ಅತ್ಯಾವಶ್ಯಕವಾದ ಬಾಬುಗಳಲ್ಲಿ ಸರಿಯಾಗಿ ವೆಚ್ಚ ಮಾಡುತ್ತಾ ಅನಾವಶ್ಯಕವಾದುವುಗಳಲ್ಲಿ ಹಿಡಿತವುಳ್ಳವರಾಗಿರಬೇಕು ಹೀಗೆ ನಡೆಯತಕ್ಕೆ ಜನಗಳು ಕಷ್ಟಗಳಿಗೆ ಗುರಿ ಯಾಗುವುದಿಲ್ಲ. ಮಿತಿಮೀರಿ ವೆಚ್ಚ ಮಾಡಿ ಸಾಲಗಾರರಾಗತಕ್ಕೆ ಜನರು ತಾವು ಮಿತವ್ಯಯಮಾಡುತ್ತಿರುವಂತೆ ತಿಳಿದುಕೊಳ್ಳುವುದುಂಟು. ಇಂಥ ಜನ ರಲ್ಲಿ ಅನೇಕರಿಗೆ ಇದು ಮಿತವ್ಯಯವೆಂದೂ ಇದು ಮಿತವ್ಯಯವಲ್ಲವೆಂದೂ ತಿಳಿದಿರುವುದೇ ಅಪೂರ ಅನೇಕರು ತಮ್ಮ ಮನೆಯಲ್ಲಿ ಕೂಲಿನಾಗತಕ್ಕ