ಪುಟ:ಅರ್ಥಸಾಧನ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದುಂದುಗಾರಿಕೆ hih ದುಂದುಗಾರಿಕೆ, ನ ಸ್ವಲ್ಪ ಕೃತೇ ಭೂರಿ ನಾಶಯೇನ್ಮತಿರ್ಮಾ ನರಃ | ಏತದೇವ ಹಿ ಪಾಂಡಿತ್ಯಂ ಯತ್ ಸ್ವಲ್ಪಾದ್ದೂರಿರಕ್ಷಣಂ || ತಮ್ಮ ಯೋಗ್ಯತೆಗೆ ತಕ್ಕಷ್ಟು ವೆಚ್ಚ ಮಾಡದೆ ಅಧಿಕವಾಗಿ ವೆಚ್ಚ ಮಾಡುವುದಕ್ಕೆ ದುಂದುಗಾರಿಕೆಯೆಂದು ಹೆಸರು. ಇದು ಜಂಭವಾಗಿ ನಡೆಯ ತಕ್ಕವರನ್ನು ನೋಡುವುದರಿಂದಲೂ, ಸಂದರ್ಭಾನುಸಾರ ಸ್ತೋತ್ರಗಳಿಗೆ ಉಬ್ಬಿ ಪ್ರತಿಷ್ಠೆಯನ್ನು ಪಡೆಯಬೇಕೆಂಬ ಅಪೇಕ್ಷೆಯುಂಟಾಗುವುದರಿಂದಲೂ, ಯೋಗ್ಯತೆ,ಾರಿ ವೆಚ್ಚ ಮಾಡದಿದ್ದರೆ ಹವ್ಯಕವ್ಯಾದಿಗಳ ಫಲವುಂಟಾಗು ವುದಿಲ್ಲವೆಂದು ಪ್ರೋತ್ಸಾಹಿಸತಕ್ಕವರ ಪ್ರೇರಣೆಗೊಳಗಾಗುವುದರಿಂದಲೂ ಉತ್ಪನ್ನವಾಗುವುದು. ಈ ದುಂದುಗಾರಿಕೆಯು ಮನಸ್ಸಿನಲ್ಲಿ ನೆಲೆಗೊಂಡಮೇಲೆ ತನ್ನ ಬಂಧುಗಳಲ್ಲಿಯೂ ಪರಿಜೆತರಲ್ಲಿಯ ನೆರೆಹೊರೆಯವರಲ್ಲಿಯೂ ಪ್ರತಿಷ್ಠೆ ಪಡೆಯಬೇಕೆಂಬುದಾಗಿ ತೋರುವುದು. ಇದು ಉತ್ಪನ್ನವಾದಮೇಲೆ ಪ್ರತಿಯೊಂದುಸಂಗತಿಯಲ್ಲಿಯೂ ಮಿತವಾಗಿ ನಡೆದರೆ ನೋಡಿದವರು ಜಿಪುಣ ನೆನ್ನುತ್ತಾರೆಯೇನೋ ಎಂಬುದಾಗಿ ಯೋಗ್ಯತೆಯನ್ನು ಮಾರಿ ವೆಚ್ಚ ಮಾಡ ತಕ್ಕ ರೂಢಿಯು ವಿಶೇಷವಾಗಿ ನೆಲೆಗೊಳ್ಳುವುದು. ಧನಿಕರಾದವರು ಅವರ ಯೋಗ್ಯತೆಗೆ ತಕ್ಕ ಹಾಗೆ ನಡೆದರೆ, ಬಡವರಾದವರು “ ಹುಲಿಯನ್ನು ನೋಡಿ ನರಿ ಬರೇಹಾಕಿಕೊಂಡಿತು ” ಎಂಬ ಲೋಕೋಕ್ತಿಯಂತೆ ಸಾಲವನ್ನಾದರೂ ಮಾಡಿ ತಮ್ಮ ಯೋಗ್ಯತೆಗೆ ಮಿಂಚಿ ಹವ್ಯಕವ್ಯಾದಿಗಳನ್ನು ಚೆನ್ನಾಗಿ ಮಾಡಿ ದರೆ ಒಳ್ಳೆ ಹೆಸರುವಾಸಿಯುಂಟಾಗುವುದೆಂಬ ಭಾವನೆಯಿಂದ ಮನಸ್ಸಿ ಯಾಗಿ ವೆಚ್ಚ ಮಾಡುವರು. ದುಂದುಗಾರಿಕೆಯಿಂದ ನಡೆಯುವವರಿಗೆ ಎಷ್ಟು ಉಲ್ಲಾಸವೂ ಪ್ರತಿ ಪೈಯ ಉಂಟಾಗುವುವೋ ಕೊನೆಗೆ ಅಷ್ಟು ಕಿರಿಕಿರಿಯ ಅಪಮಾನವೂ