ಪುಟ:ಅರ್ಥಸಾಧನ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ಉಂಟಾಗುವುವು. ನಮ್ಮ ಹಿರಿಯರು ಈ ವಿಷಯದಲ್ಲಿ ನಾವು ಹೀಗೆಲ್ಲಾ ಕಡುವನೆಂಬ ತಾತ್ಸಲ್ಯದಿಂದಲೇ ಧರಶಾಸ್ತ್ರಗಳಲ್ಲಿಯ ಕ್ಷೇಮಕರವಾದ ಮಾರ್ಗಗಳನ್ನು ಕಲ್ಪಿಸಿದ್ದಾರೆ. ಅಕ್ಷರವಂತರು ಸಾಲಂಕಾರಕನ್ಯಾದಾನ ವನ್ನು ಮಾಡಿದರೆ ಬಡವರಾದವರು ಬಂದು ಹಣವನ್ನಾಗಲಿ ತುಳಸೀದಳ ವನ್ನಾಗಲಿ ಇಟ್ಟು ಕನ್ಯಾದಾನಮಾಡುವುದರಿಂದ ಸಾಲಂಕಾರಕನ್ಯಾದಾನದ ಫಲವೇ ಬರುವುದು. ದುಂದುಗಾರರಾದವರು ಹವ್ಯಕವ್ಯಾದಿಗಳಲ್ಲಿ ಅನೇಕ ವಿಧವಾದ ಭಕ್ಷ್ಯ ಭೋಜ್ಯ ಲೇಹ್ಯ ಚೋಪ್ಯ ಪೇಯಗಳನ್ನು ವಿಶೇಷವಾಗಿ ಮಾಡಿಸಿ ಪ್ರತಿಷ್ಠೆ ಪಡೆಯಬೇಕೆಂಬುದಾಗಿ ಮಿತಿಮೀರಿ ಪ್ರಯತ್ನ ಪಡುವರು. ತಾರತಮ್ಯವನ್ನರಿತವರು ಪರರ ಸ್ತುತಿಗೆ ಬೆರಗಾಗದೆ ಅನ್ಯರ ಆಡಿಕಗೆ ಅಂಜದೆ ತಮ್ಮ ಯೋಗ್ಯತೆಗೆ ತಕ್ಕಷ್ಟು ವೆಚ್ಚಮಾಡಿ ಶಾಸ್ರೋಕ್ತವಾಗಿಯೂ ಸಂಪ್ರದಾಯಪ್ರಕಾರವಾಗಿ ನಡೆಯಬೇಕಾದ ಕಾವ್ಯಗಳನ್ನು ಯಥಾ ಶಕ್ತಿಯಾಗಿ ನಡೆಸಿ ಯಾವ ತೊಂದರೆಗಳಿಗೂ ಒಳಗಾಗದೆ ಕೃತಕೃತ್ಯರಾ ಗುವರು, ಈ ಲೋಕದಲ್ಲಿ ಜನರ ಸ್ತುತಿಗೆ ಬೆರಗಾಗಿ ಆಡಿಕೆಗೆ ಹೆದರಿ ಆವಶ್ಯಕ ವಾಗಿ ಮಾಡಬೇಕಾದ ಕೆಲಸಗಳನ್ನು ಬಿಟ್ಟು ಅನಾವಶ್ಯಕವಾದ ಕೆಲಸಗ ಳನ್ನು ಮಾಡತಕ್ಕವರು ಹೇಡಿಗಳಹೊರತು ಪೂರಾ ಪರಜ್ಞರೆಂದು ಹೇಳಿಸಿ ಕೊಳ್ಳಲಾರರು. ದುಂದುಗಾರಿಕೆಯಿಂದ ದರಿದ್ರರಾಗಿ ಧನಾರ್ಜನೆಯನ್ನು ಮಾಡುವುದಕ್ಕೆ ಸಾಮರ್ಥ್ಯವಿಲ್ಲದಂಥವರನ್ನೂ ಅವರ ಕುಟುಂಬದವರನ್ನೂ * ಇವರು ಜನರನ್ನು ಕಣ್ಣೆತ್ತಿ ಕೂಡ ನೋಡದೆ ಮೆರೆಯುತ್ತಿದ್ದುದಕ್ಕೆ ತಕ್ಕ ಹಾಗೆ ಆಯಿತು ” ಎಂದು ಆಡಿಕೊಳ್ಳುವರು. ಆದುದರಿಂದ ಯಾವ ಕಾಲ್ಯದಲ್ಲಿಯೇ ಆಗಲಿ ತಮ್ಮ ಶಕ್ತಿಗೆ ತಕ್ಕಂತೆ ಪೂರಾ ಪರಜ್ಞತೆಯಿಂದ ನಡೆದುಕೊಳ್ಳದೆ ದುಂದುಗಾರಿಕೆಯಿಂದ ನಡೆದು ತಮ್ಮ ಕುಟುಂಬದವರ ಅನ್ನ ವಸ್ತ್ರಗಳಿಗೆ ನ್ಯೂನತೆಯನ್ನುಂಟುಮಾಡುವುದು ಮಹಾಪಾತಕವು.