ಪುಟ:ಅರ್ಥಸಾಧನ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬6 ಅರ್ಥಸಾಧನ ಕಲಸಗಳಿಗಾಗಿ ಅಂಗಡಿಯಲ್ಲಿ ಸಾಲವಾಗಿ ತಂದ ಪದಾರ್ಥಗಳಿಗೆ ಒಂದಕ್ಕೆ ಎರಡಾಗಿ ತೆತ್ತು ನಷ್ಟಪಡುತ್ತಲಿರುವರು. ಇದಕ್ಕಾಗಿ ಮಾಡಿದ ಸಾಲಗ ಆಗೆ ತಮ್ಮ ಗ್ರಾಮ ಭೂಮಿ ಮೊದಲಾದುವುಗಳನ್ನು ಆಧಾರವಾಗಿಯೋ ಭೋಗ್ಯವಾಗಿಯೋ ಮಾಡುವರು ; ಅಥವಾ ಒಡವೆ ವಸ್ತುಗಳನ್ನು ಒತ್ತೆ ಯಾದರೂ ಇಡುವರು. ಇದೊಂದಕ್ಕೂ ಮಾರ್ಗವಿಲ್ಲದವರು ಸಾಲಕೊ ಧೃವನ ಬಳಿ ತಾವೇ ಸೇವಕರಾಗಿಯಾದರೂ ಸೇರುವರು. ಹೀಗೆ ಜನರು ಪೂರಕಗಳಿಗಾಗಿ ದುಂದುಗಾರತನದಿಂದ ವೆಚ್ಚ ಮಾಡಿ ನಾನಾಪ್ರಕಾರ ವಾದ ತೊಂದರೆಗಳನ್ನು ಅನುಭವಿಸುವರು. ಹೀಗೆ ಮಾಡಬೇಕೆಂದು ನಮ್ಮ ಶಾಸ್ತ್ರಗಳಲ್ಲಿ ನಿರ್ಬಂಧವಿಲ್ಲ ; ನಮ್ಮ ಹಿರಿಯರ ಏರ್ಪಾಡೂ ಹೀಗಿಲ್ಲ. ಶಾಸ್ತ್ರಜ್ಞರೂ ಹಿರಿಯರೂ ಮಾಡಿರುವ ಏರ್ಪಾಡುಗಳು ಸುಲಭವಾಗಿಯೂ ಅನುಕೂಲವಾಗಿಯೂ ಇವೆ. ದುಂದುಗಾರತನದಿಂದ ಪ್ರವರ್ತಿಸತಕ್ಕ ನಡವಳಿಕೆಗಳು ಜನರು ಒಬ್ಬರನ್ನು ನೋಡಿ ಮತ್ತೊಬ್ಬರು ತಾವಾಗಿಯೇ ಮಾಡಿಕೊಂಡುವುಗಳಾ ಗಿರುತ್ತವೆ. ಉತ್ತರ ದೇಶದಲ್ಲಿ ವಿವಾಹದಲ್ಲಿ ವರದಕ್ಷಿಣೆಯನ್ನು ಕೊಡುವು ದಕ್ಕೆ ಉಪಪತ್ತಿಯಿಲ್ಲದೆ ಅನೇಕರು ತಮ್ಮ ಹೆಣ್ಣು ಮಕ್ಕಳನ್ನು ಕೊಲ್ಲು ತಿದ್ದರು. ಈಗ ವಿವಾಹದ ವಿಷಯದಲ್ಲಿ ವಿಶೇಷ ವೆಚ್ಚವಾಗದಂತೆ ನಡೆಯುವ ಹಾಗೆ ಆ ದೇಶೀಯರಲ್ಲಿ ಕೆಲವರು ಸಂಕೇತಗಳನ್ನು ಮಾಡಿಕೊಂಡಿದ್ದಾರೆ. ಆದರೂ ಅನೇಕರಲ್ಲಿ ಏಕಾಂತವಾಗಿ ಹೆಣ್ಣು ಮಕ್ಕಳನ್ನು ಕೊಲ್ಲತಕ್ಕ ಸಂದರ್ಭವು. ಇನ್ನೂ ತಪ್ಪಲಿಲ್ಲ. ನಮ್ಮ ದೇಶದಲ್ಲಿ ಅದಕ್ಕೆ ಬದುಲಾಗಿ ಹೆಣ್ಣಿಗೆ ಒಡವೆಗಳನ್ನು ಇಡುವುದರಲ್ಲಿಯೂ ಕನ್ಯಾಶುಲ್ಕವನ್ನು ತರುವುದ ರಲ್ಲಿಯ ವರನೋ ಅಥವಾ ಅವನ ಕಡೆಯವರೋ ಅನೇಕ ಕಷ್ಟಗಳಿಗೆ ಗುರಿಯಾಗುತ್ತಲಿದ್ದರು. ಈಚೆಗೆ ವಿದ್ಯಾವಂತನಾದ ವರನನ್ನು ಅಪೇಕ್ಷಿಸ ತಕ್ಕವರು ಸಾವಿರಾರು ರೂಪಾಯಿಗಳನ್ನು ಕೊಟ್ಟು ಅವನನ್ನು ಕೊಂಡು