ಪುಟ:ಅರ್ಥಸಾಧನ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದುಂದುಗಾರಿಕೆ ೬೧ h ಕೊಳ್ಳಬೇಕಾಗಿದೆ. ಇದಲ್ಲದೆ ವಧೂವರರಿಬ್ಬರಕಡೆಯವರೂ ವಿವಾಹ ಕಾಲದಲ್ಲಿ ಅನಾವಶ್ಯಕವಾದ ವೆಚ್ಚಗಳಿಂದ ಸಾಲಗಾರರ ಪಾಲಾಗುತ್ತ ಲಿದ್ದಾರೆ " ಹೀಗೆ ಉಪನಯನ ವಿವಾಹ ಮೊದಲಾದ ಕಲ್ಕಗಳಲ್ಲಿ ದುಂದುಗರ ತನದಿಂದ ವಿಶೇಷ ವೆಚ್ಚ ಮಾಡಿ ಇದಕ್ಕಾಗಿ ಸಾಲಮಾಡುವುದೂ ಈ ಸಾಲ ಕ್ಕಾಗಿ ಗ್ರಾಮ ಭೂಮಿ ಮನೆ ಮೊದಲಾದುವುಗಳನ್ನು ಇಡುನೂಡಿ ಕೊನೆಗೆ ಬಡ್ಡಿಯನ್ನು ತರುವುದಕ್ಕೆ ಶಕ್ತಿಸಾಲದೆ ಅವುಗಳನ್ನೆಲ್ಲಾ ಕಳೆದುಕೊಂಡು ಕೇವಲ ಹೀನಸ್ಥಿತಿಗೆ ಬರುವುದೂ ಸರಿಯಾದುದಲ್ಲ. ಸಕಲರೂ ತಮ್ಮ ಯೋಗ್ಯತಾನುಸಾರವಾಗಿ ಇವುಗಳನ್ನು ವಿಧಿವತ್ತಾಗಿಯ ತಮ್ಮ ಆಯತಿಗೆ ತಕ್ಕಂತೆಯ ನಡೆಸತಕ್ಕೆ ಮಾರ್ಗಗಳನ್ನು ಆಚರಣೆಯಲ್ಲಿ ತರುವವರೆಗೂ ನಮ್ಮ ಜನರು ವೃದ್ಧಿಗೆ ಬರುವುದಿಲ್ಲ. ಹೀಗೆ ಅಮಿತವಾದ ವೆಚ್ಚ ದಿಂದ ನಡೆಯತಕ್ಕುವು ವಿವಾಹಾದಿ ಪೂರ ಕರಗಳು ಮಾತ್ರವೇ ಅಲ್ಲ ಕಾಲಾಧೀನರಾದವರಿಗೋಸ್ಕರ ನಡೆಯತಕ್ಕ ಕರಗಳಲ್ಲಿಯೂ ತಮ್ಮ ಯೋಗ್ಯತೆಯನ್ನು ಮೀರಿ ವೆಚ್ಚ ಮಾಡುವುದು ರೂಢಿಯಾಗಿರುವುದು. ಕುಟುಂಬದ ಯಜಮಾನನು ಗತಿಸಿದರೆ ಆ ಕುಟುಂ ಬಕ್ಕೆ ಅವನಿಂದ ಆಗುತ್ತಿದ್ದ ಆರ್ಜನೆಯು ತಪ್ಪುವುದು. ಆಗ ಆ ಕುಟುಂಬ ಭರಣಕ್ಕೂ ಅವನ ಉತ್ತರಕ್ರಿಯೆಗಳಿಗೂ ಸಾಲಮಾಡಬೇಕಾಗಿಬರುವುದು. ಬಡ್ಡಿಯನ್ನು ಕೊಟ್ಟು ಸಾಲತೆಗೆದ ಹಣವನ್ನು ದೂರದೃಷ್ಟಿಯಿಲ್ಲದೆ ವೆಚ್ಚ ಮಾಡುವುದರಿಂದ ಆ ಕುಟುಂಬದ ಜನರು ಕ್ರಮೇಣ ಕಷ್ಟದತೆಗೆ ಬರುವರು. ಪುಣ್ಯವಂತರಾಗಿರುವವರು ಇದಕ್ಕಾಗಿ ಯೋಗ್ಯತೆ,ಾರಿ ವೆಚ್ಚ ಮಾಡಿ ಕ್ರಮೇಣ ತಮ್ಮ ಉಪಪತ್ತಿಗೆ ಆಧಾರಭೂತವಾದ ಮೂಲಧನವನ್ನು ಕಡಿಮೆ ಮಾಡಿಕೊಳ್ಳುವರು. ನಾವು ಮಾಡತಕ್ಕೆ ದಾನಧರಗಳು ಕಾಲಾಧೀನನಾದವನಿಗೆ ಸಮ್ಮತಿ ಯನ್ನುಂಟುಮಾಡುವುವೆಂಬುದಾಗಿಯೂ, ಕಾಲಾಧೀನನಾದವನು ಲೋಕಾಂ