ಪುಟ:ಅರ್ಥಸಾಧನ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ತರಕ್ಕೆ ಹೋಗುವಾಗ ಇದರಿಂದ ಪ್ರಯೋಜನವನ್ನು ಹೊಂದುತ್ತಾನೆಂಬು ದಾಗಿಯೂ ಈ ವೆಚ್ಚವನ್ನು ಮಾಡುವವು. ಆದರೆ ಉತ್ತರಕ್ರಿಯೆಗಳನ್ನು ಮಾಡತಕ್ಕವರು ತಮ್ಮ ಉಪಪತ್ತಿಗೆ ಅನುಗುಣವಾಗಿ ವೆಚ್ಚ ಮಾಡಿ ಕ್ರಿಯಾ ಪೂರ್ತಿಮಾಡಿಕೊಳ್ಳಬಹುದೆಂದು ನಮ್ಮ ಶಾಸ್ತ್ರಗಳಲ್ಲಿಯೇ ಹೇಳಲ್ಪಟ್ಟರು ತದೆ. ಹೀಗಿದ್ದರೂ ಈ ಕರಗಳನ್ನು ಮಾಡಿಸುವ ವ್ಯಾಜದಿಂದ ಜೀವಿ ಸುವ ಜನರು, ಪ್ರಿಯರಾದವರನ್ನು ಕಳೆದುಕೊಂಡು ದುಃಖಾತಿಶಯದಿಂದ ಸಂತಪಿಸುತ್ತಲಿರುವವರನ್ನು ಆಗಣ ಕರಗಳಲ್ಲಿ ವಿಶೇಷ ದ್ರವ್ಯವ್ಯಯಮಾ ಡುವಂತೆ ನಾನಾವಿಧವಾಗಿ ಪ್ರೇರಿಸಿ ತಮ್ಮ ದಾರಿಗೆಳೆದುಕೊಂಡು ಅವರನ್ನು ಸಾಲಕ್ಕೆ ಗುರಿಮಾಡುತ್ತಾರೆ ಮನುಷ್ಯನು ತಾನು ಜೀವಂತವಾಗಿರುವಾಗ ಮಾಡಿದ ಪುಣ್ಯಪಾಪಗಳಿಗೆ ಅನುರೂಪವಾದ ಫಲಗಳನ್ನು ಅನುಭವಿಸಲೇ ಬೇಕೆಂದು ಶ್ರುತಿ ಸ್ಮೃತಿ ಪುರಾಣೇತಿಹಾಸಗಳಲ್ಲಿ ಧಾರಾಳವಾಗಿ ಹೇಳಲ್ಪ ಟ್ಟಿವೆ. ಆದುದರಿಂದ ಇಂಥ ವೆಚ್ಚಗಳ ಸಮಯಗಳಲ್ಲಿ ಈ ವಿಷಯವನ್ನು ಪದ್ಯಾಲೋಚಿಸಿ ಯೋಗ್ಯತಾನುಸಾರ ನಡೆದುಕೊಳ್ಳುವುದು ಎಲ್ಲರಿಗೂ ಕ್ಷೇಮಕರವಾದದ್ದು. ಭೂಷಣ, ಕೇಯರಾಣಿ ನ ಭೂಷಯ ಪುರುಷಂ ಹಾರಾನ ಚನೋಜ್ವಲಾ ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾವರ್ಧಜಾಃ | ವಾಣೀಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರತೇ ಕ್ಷೀಯಖಿಲಭೂಷಣಾನಿ ಸತತಂ ವಾಗ್ಯೂಷಣಂ ಭೂಷಣಂ || ಜನರು ಚಿನ್ನ ಬೆಳ್ಳಿ ರತ್ನ ಮೊದಲಾದುವುಗಳಿಂದ ಮಾಡಲ್ಪಟ್ಟ ನಾನಾವಿಧವಾದ ಆಭರಣಗಳನ್ನೂ, ನೂಲು ರೇಷ್ಮೆ ಜರತಾರಿ ಮೊದಲಾದುವು