ಪುಟ:ಅರ್ಥಸಾಧನ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧವ ಲಾಗಿ ತಂದ ಒಡವೆಗಳು ಹೋಗಿಬಿಟ್ಟರೆ ಅವುಗಳಿಗಾಗಿ ದಂಡತರುವುದುಇವುಗಳೆಲ್ಲಾ ಅನುಭವಸಿದ್ಧವಾಗಿಯೇ ಇವೆ. ಒಡವೆಗಳಿಗಾಗಿ ಉಪಯೋಗಿಸುವ ಧನವನ್ನು ವ್ಯವಸಾಯ ವ್ಯಾಪಾರ ಗಳಲ್ಲು ಪಯೋಗಿಸಿದ್ದಾದರೆ ಅದರಿಂದ ಹಾಗೆ ಉಪಯೋಗಿಸಿದವನಿಗೆ ಪ್ರಯೋಜನವುಂಟಾಗುವುದಲ್ಲದೆ ಉತ್ಪತ್ತಿಯ ಹೆಚ್ಚಾಗಿ ಅನೇಕರಿಗೆ ಜೀವನಗಳುಂಟಾಗುವುವು ಒಡವೆಗಳಿಗಾಗಿ ಹಾಕುವ ದ್ರವ್ಯವನ್ನು ಸೇವಿಂಗ್ಸ್ ಬ್ಯಾಂಕ್ ಮೊದಲಾದುವುಗಳಲ್ಲಿಟ್ಟಿದ್ದರೂ ಬಡ್ಡಿಬಂದು ಮೂಲ ಧನವು ಕ್ರಮಕ್ರಮವಾಗಿ ವೃದ್ಧಿಯನ್ನೆದುವುದಲ್ಲದೆ ಕಷ್ಟ ಕಾಲದಲ್ಲಿ ಆಪ ದನವಾಗಿಯೂ ಪರಿಣಮಿಸುವುದು. ಈ ಭರತಖಂಡಕ್ಕೆ ೧೦೧ ನೇ ವರುಷದಿಂದ ೧೯೦ ನೇ ವರುಷದವರೆಗೆ ೪೫೦ ಕೋಟಿ ರೂಪಾಯಿ ಬೆಲೆ ಯುಳ್ಳ ಚಿನ್ನ ಬೆಳ್ಳಿಗಳು ತರಲ್ಪಟ್ಟುವು ಇವುಗಳಲ್ಲಿ ಕನಿಷ್ಠ ಪಕ್ಷ ೦೦೦ ಕೋಟಿ ರೂಪಾಯಿ ಬೆಲೆಯುಳ್ಳ ಚಿನ್ನ ಬೆಳ್ಳಗಳಾದರೂ ಒಡವೆಗಳಿಗಾಗಿ ಉಪಯೋಗಿಸಲ್ಪಟ್ಟಿವೆಯೆಂದು ಗೊತ್ತಾಗುತ್ತದೆ ಅಲ್ಲಿಂದೀಚಿಗೆ ಲೆಕ್ಕ ಮಾಡಿನೋಡಿದರೆ ಇನ್ನೂ ಹೆಚ್ಚಾಗುತ್ತದೆಇಷ್ಟು ದ್ರವ್ಯವು ಒಡವೆಗಳ ಗಾಗಿ ಉಪಯೋಗಿಸಲ್ಪಡದೆ ಮೂಲಧನ ವೃದ್ಧಿಯಾಗತಕ್ಕ ವ್ಯವಸಾಯ ವ್ಯಾಪಾರ ಕೈಗಾರಿಕ ರೈಲು ಮೊದಲಾದುವುಗಳಿಗೆ ಉಪಯೋಗಿಸಲ್ಪಟ್ಟಿದ್ದರೆ ಉತ್ಪತ್ತಿ ಹೆಜ್ಜೆ ಹಗಾರರಿಗೆ ಲಾಭವೂ ಕೋಟ್ಯಂತರ ಜನರಿಗೆ ಜೀವನವೂ ಆಗುತ್ತಿದ್ದುವು. ನಮ್ಮ ದೇಶದ ಸ್ತ್ರೀಪುರುಷರಿಗೆ ಭೂಷಣಗಳಲ್ಲಿರತಕ್ಕೆ ಅಪೇಕ್ಷೆಯೇ ಇವರನ್ನು ಹೀನಸ್ಥಿತಿಗೆ ತರುತ್ತಲಿದೆ. ಲೋಕದಲ್ಲಿ ಜನರು ಗುಣಗಳಿಂದಲೂ ಸಚ್ಚರಿತ್ರೆಗಳಿಂದಲೂ ಭೂತರಾಗಬೇಕೇ ಹೊರತು ಒಡವೆಗಳಿಂದಲೂ ಬೆಲೆಯಾದ ವಸ್ತ್ರಗಳಿಂದಲೂ ಭೂತರಾಗುವುದಿಲ್ಲ. ಈ ವಿಷಯದಲ್ಲಿ ಪುರುಷರಂತ ಸ್ತ್ರೀಯರೂ ಲೋಕವ್ಯವಹಾರಜ್ಞರಾಗಿ ಉನ್ನತಸ್ಥಿತಿಗೆ ಬರಬೇಕಾದ ಪ್ರಯತ್ನಗಳನ್ನು ಮಾಡಬೇಕು. --