ಪುಟ:ಅರ್ಥಸಾಧನ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಡವೆ ವಸ್ತುಗಳಿಂದ ಯಾವ ಉತ್ಪತ್ತಿಯ ಆಗುವುದಿಲ್ಲ. ಇದಕ್ಕಾಗಿ ಮಾಡಿದ ಸಾಲವನ್ನು ತೀರಿಸುವುದಕ್ಕೆ ತಕ್ಕ ಇತರ ಆಯತಿಗಳು ಇದ್ದ ಹೊರತು ಸಾಲಮಾಡುವುದು ಸರಿಯಲ್ಲ. ಸಾಲವು ಪ್ರಾಯಶಃ ಮನು ವ್ಯನನ್ನು ಹೀನಸ್ಥಿತಿಗೆ ತರುವುದು ಸಾಲದಿಂದ ಮನುಷ್ಯನ ಗೌರವಕ್ಕೆ ನ್ಯೂನತೆಯುಂಟಾಗುವುದು. ಆದುದರಿಂದ ಪೂರಾಪರಗಳನ್ನು ಯೋಚಿಸಜಿ ಸಾಲಮಾಡತಕ್ಕ ಅಭ್ಯಾಸವು ಬಹಳ ಕೆಟ್ಟದ್ದು. ಜನರು ಸಾಲ ತೆಗೆದುಕೊಂಡಮೇಲೆ ಆ ಹಣಕ್ಕೆ ವರುಷಕ್ಕಿಷ್ಟೊಂದು ಹಣವನ್ನಾಗಲಿ ಅಥವಾ ಧಾನ್ಯವನ್ನಾಗಲಿ ಬಡ್ಡಿಗಾಗಿ ಕೊಡುವರು. ಒಡವೆ ಮೊದಲಾದುವುಗಳನ್ನು ಅಡುವಿಟ್ಟು ತೆಗೆದುಕೊಂಡ ಕೈಸಾಲಕ್ಕೆ ತಿಂಗಳಿಗೆ ರೂಪಾಯಿಗೆ ಇಷ್ಟೊಂದು ಬಡ್ಡಿಯನ್ನು ಕೊಡುವರು. ಬಡ್ಡಿಯು ನಿರಂತರ ದಲ್ಲೂ ಬೆಳೆಯುತ್ತಿರುವುದರಿಂದ ಬಡ್ಡಿ ಮತ್ತು ಸುಸ್ತಿ ಒಡ್ಡಿಗಳನ್ನು ತೆರತ ಕೈವರು ಪ್ರಾಯಶಃ ತಲೆಯೆತ್ತುವುದು ಕಷ್ಟವಾಗಿಯೇ ಇರುವದು ಭರತ ಖಂಡದಲ್ಲಿ ಬಡ್ಡಿಗೆ ಸಾಲಕೊಡುವುದನ್ನೇ ಮುಖ್ಯ ವ್ಯಾಪಾರವಾಗಿಟ್ಟು ಕೊಂಡಿರುವವರು ಬಹಳ ಜನಗಳಿರುತ್ತಾರೆ. ಇವರಲ್ಲದೆ ಬರಿಯ ಆಸೆ ಗಾಗಿ ಅಲ್ಪ ಸ್ವಲ್ಪ ದ್ರವ್ಯವಂತರಾಗಿರುವವರು ಕೂಡ ಸಾಲಕೊಟ್ಟು ಬಡ್ಡಿ ಯನ್ನು ತೆಗೆದುಕೊಳ್ಳುವ ವ್ಯಾಪಾರವನ್ನು ಇಟ್ಟು ಕೊಂಡಿದ್ದಾರೆ. ಈ ವಿಧ ವಾದ ವ್ಯಾಪಾರದಲ್ಲಿ ವಸೂಲಾಗುವ ಬಡ್ಡಿ ಹಣವು ಅನೇಕ ಕೋಟಿ ರೂಪಾ .ಗಳಾಗಿರುತ್ತವೆ. ಜನರು ಹೀಗೆ ಬಡ್ಡಿಯನ್ನು ತರುತ್ತಿರುವುದರಲ್ಲಿ ಧನ ದೀಗ. ಅವಾಗಿಯೂ ಧನಿಕವಾಗಿಯೂ ಇರುವುದಕ್ಕೆ ಕೋರುಗಳಲ್ಲಿ ಎಷ್ಟೋ ದೃಷ್ಟಾಂತಗಳಿವೆ ಅನೇಕರು ತಮ್ಮ ತಾಪತ್ರಯಗಳಿಂದ ತಾವು ಮಾಡಿದ ಸಾಲದ ಗಡುವಿಗೆ ಸರಿಯಾಗಿ ಬಡ್ಡಿಯನ್ನು ಕೊಡಲಾರದೆ ಬಹಳ ವಾಗಿ ಬಡ್ಡಿ ಬೆಳದಾಗ ಈಡುಮಾಡಿಗ ಗ್ರಾಮ ಭೂಮಿ ಮನೆ ಒಡವೆ ಮೊದ ಲಾದುವುಗಳನ್ನು ಅವರ ಪಾಲುಮಾಡುವರು, ಒಂದೊಂದುವೇಳ ಈಡು {1}