ಪುಟ:ಅರ್ಥಸಾಧನ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಪಮಾನ ಉಂಟು. ಹೀಗೆ ಉಪಯೋಗಿಸಿಕೊಂಡ ದ್ರವ್ಯವನ್ನು ಮತ್ತೆ ಸೇರಿಸುವು ದಕ್ಕ ಕೈಲಾಗದೆಯೋ ದುರಾಸೆಯಿಂದಲೋ ಸುಳ್ಳು ಲೆಕ್ಕಗಳನ್ನು ಬರೆದಾಗ ಅಥವಾ ಲೆಕ್ಕಗಳನ್ನು ತಿದ್ದಿಯಾಗಲಿ ಆಗಿನ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳುವರು. ಈ ಕೆಲಸಗಳು ಬೈಲಿಗೆ ಬಂದಮೇಲೆ ಅವರಿಗೆ ಆದ ಮಾನವಾಗುವುದಲ್ಲದೆ ಜೀವನೋಪಾಯಗಳೂ ತಪ್ಪಿ ಶಿಕ್ಷೆಯನ್ನೂ ಅನು. ಭವಿಸಬೇಕಾಗುವುದು. ಬಂದೀಖಾನೆಗಳಲ್ಲಿ ಹೀಗೆ ಶಿಕ್ಷೆಗಳನ್ನು ಅನುಭವಿ ಸುತ್ತ ಜೀವನೋಪಾಯಗಳನ್ನು ಕಳೆದುಕೊಂಡಿರುವವರ ನಿಜಸ್ಥಿತಿಗಳನ್ನು ವಿಚಾರಮಾಡಿದರೆ ಅಪಾಮಾಣಿಕತೆಯಿಂದ ಉಂಟಾಗತಕ್ಕ ಅನರ್ಥಗಳು ವ್ಯಕ್ತವಾಗುತ್ತವೆ. ಆದುದರಿಂದ ಎಂದಿಗೂ ಅಪ್ರಾಮಾಣಿಕರಾಗದೆ ಇರು ವುದು ಶ್ರೇಯಸ್ಕರವಾದುದು. ಅ ಹ ಮಾ ನ. ಪ್ರಾಣಂ ವಾ ವಿ ಪರಿತ್ಯಜ್ಯ ಮಾನಮೇವಾಭಿರಕ್ಷಯೇತ್ || ಅನಿತ್ಯೋ ಭವತಿ ಪ್ರಾಣೋ ಮನಆಚಂದ್ರ ತಾರಕಂ || ಮಾನಹಾನಿಯೇ ಅಪಮಾನವೆನ್ನಿಸಿಕೊಳ್ಳುವುದು. ದೂತ ಪಾನ ವ್ಯಭಿಚಾರ ಮೊದಲಾದುವುಗಳನ್ನು ಮಾಡತಕ್ಕವರೂ, ಅಪ್ರಾಮಾಣಿಕತೆ ಯಿಂದ ನಡೆಯುವವರೂ ಮಾನಿಷ್ಠರಾಗಿ ಇರುವುದೇ ಅಪೂರ್ವ, ಸಾಲಗಾ ರನು ತಾನು ಮಾಡಿಕೊಂಡ ಒಡಂಬಡಿಕೆಯ ಪ್ರಕಾರ ನಡೆಯುವುದಕ್ಕೆ ಆಗ ದಿರುವ ಸಂದರ್ಭಗಳಲ್ಲಿ ಅಪಮಾನವನ್ನು ಹೊಂದುವುದುಂಟು. ಅಂಥ ಸಂದ ರ್ಭಗಳಲ್ಲಿ ಅವನು ಒಂದು ಹೊಸದಾದ ವಾಯಿದೆಯ ( ಗಡುವು )ನ್ನು ಮಾಡಿ ಕೊಳ್ಳುವನು. ಕಡೆಗೆ ತನ್ನ ಪ್ರಯತ್ನಗಳೆಲ್ಲ ನಿಷ್ಪಲವಾದಾಗ ತಾನು ಮನೆ ಯಲ್ಲಿದ್ದರೂ ಇಲ್ಲವೆಂದು ಹೇಳಿಸಿಕೊಳ್ಳುವುದಲ್ಲದೆ ಸಾಲಕೊಟ್ಟವನು ವಾಸಮಾಡುವ ಬೀದಿಯಲ್ಲಿ ತಿರಗುವುದನ್ನೂ ಬಿಡುವನು; ಕೊನೆಗೆ ಅವನ